ಹಗರಿಬೊಮ್ಮನಹಳ್ಳಿ: ಗ್ರಾಮೀಣ ಭಾಗದಲ್ಲಿ ನಿವೇಶನ ರಹಿತ ಬಡಕುಟುಂಬಗಳಿಗೆ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವ ಸರಕಾರಿ ಭೂಮಿಯನ್ನು ಗುರುತಿಸಿ ಕೂಡಲೇ ನಿವೇಶನ ನೀಡಬೇಕು ಎಂದು ಗ್ರಾಕೂಸ್ ಸಂಘಟನೆಯ ಸಂಚಾಲಕಿ ಅಕ್ಕಮಹಾದೇವಿ ಒತ್ತಾಯಿಸಿದರು.
ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗಾಗಿ ಸರ್ಕಾರಿ ಜಮೀನನ್ನು ಗುರುತಿಸಿ ನಿವೇಶನಕ್ಕಾಗಿ ಕಾಯ್ದಿರಿಸಬೇಕು. ಈಗಾಗಲೇ ಕೆಲ ಗ್ರಾ.ಪಂ.ಗಳಲ್ಲಿ ಕಾಯ್ದಿರಿಸಲಾದ ಸರ್ವೇ ಭೂಮಿಯಲ್ಲಿ ಕೂಡಲೇ ನಿವೇಶನ ನೀಡಬೇಕು. ತಾಲೂಕಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಡ ಕುಟುಂಬಗಳು ವಾಸ ಮಾಡಲು ಮನೆ, ನಿವೇಶನ ಇಲ್ಲದಾಗಿದೆ. ಗ್ರಾಮೀಣ ಭಾಗದಲ್ಲಿ ಅವಿಭಕ್ತ ಕುಟುಂಬದಲ್ಲಿ, ಬಾಡಿಗೆ ಮನೆಗಳಲ್ಲಿ ಹಾಗೂ ಪರಿಚಿತರ ಜಾಗಗಳಲ್ಲಿ ಗುಡಿಸಲು ಕಟ್ಟಿಕೊಂಡು ಬಡವರು ಜೀವನ ಸಾಗಿಸುತ್ತಿದ್ದಾರೆ. ತಾಲೂಕಿನ ಮರಬ್ಬಿಹಾಳು, ಬೆಣಕಲ್ಲು, ವಲ್ಲಭಾಪುರ, ಹಂಪಸಾಗರ, ವರದಾಪುರ, ದಶಮಾಪುರ, ಕಿತ್ನೂರು, ರಾಮೇಶ್ವರಬಂಡಿ, ಹಂಪಾಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾ.ಪಂ.ಗಳಲ್ಲಿ ಕೂಡಲೇ ಸರಕಾರಿ ಭೂಮಿಯನ್ನು ಗುರುತಿಸಿ ನಿವೇಶನವನ್ನು ನೀಡಿ ವಸತಿ ನಿರ್ಮಾಣಕ್ಕೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಆರ್.ಕವಿತಾಗೆ ಮನವಿ ಸಲ್ಲಿಸಿದರು. ಸಂಘಟನೆಯ ಸಿ.ಸುಧಾ, ರತ್ನಮ್ಮ, ರೇಖಾ, ನಿಂಗಮ್ಮ, ತಾಲೂಕು ಗ್ರಾಕೂಸ್ ಸಂಘಟನೆ ಕೋಗಳಿ ಮಲ್ಲೇಶ, ಅನ್ನಪೂರ್ಣ, ಮೀನಾಕ್ಷಿ. ನಿಂಗಮ್ಮ. ಪ್ರಮಿಳಮ್ಮ, ಗಂಗಮ್ಮ, ರೇಣುಕಮ್ಮ, ಲಕ್ಷ್ಮಮ್ಮ, ಸಾವಿತ್ರಮ್ಮ, ಗುಳೇದಳ್ ವೆಂಕಟೇಶ್. ಶೋಭಾ, ರೇಣುಕಾ, ಚಂದ್ರಗೌಡ, ದೊಡ್ಡಬಸಪ್ಪ, ನಿಂಗಪ್ಪ ಇದ್ದರು. ಹಗರಿಬೊಮ್ಮನಹಳ್ಳಿ ತಾಲೂಕಿನ ನಿವೇಶನ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ತಾಲೂಕು ಪದಾಧಿಕಾರಿಗಳು ಹಾಗೂ ಗ್ರಾಕೂಸ್ ಸಂಘಟನೆಯವರು ನಿವೇಶನಕ್ಕೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.