ಹುಬ್ಬಳ್ಳಿ:
ಈ ವೇಳೆ ಸಂಘದ ಗೌರವಾಧ್ಯಕ್ಷ ಡಾ. ಗೋವಿಂದ ಮಣ್ಣೂರ ಮಾತನಾಡಿ, ನೃಪತುಂಗ ಬೆಟ್ಟದ ಸರ್ವತೋಮುಖ ಅಭಿವೃದ್ಧಿಗೆ ₹10 ಕೋಟಿ ಅನುದಾನ ಒದಗಿಸುವಂತೆ ಒತ್ತಾಯಿಸಿದರು. ಬೆಟ್ಟದ ವ್ಹೀವ್ ಪಾಯಿಂಟ್‌ನಿಂದ ಉಣಕಲ್ಲ ಕೆರೆ ವರೆಗೆ ರೋಪ್‌ವೇ ನಿರ್ಮಾಣ ಹಾಗೂ ಜೀಪ್‌ಲೈನ್ ಅಳವಡಿಕೆ, ಪ್ರತಿ ವಾರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ದ್ವಾರ ಬಾಗಿಲು ಕಮಾನು, ಬೆಟ್ಟದ ಮೇಲ್ತುದಿಯಿಂದ ಒಂದು ಬೈನಾಕೂಲರ್ ಅಳವಡಿಸಿ ಅವಳಿ ನಗರದ ಒಟ್ಟು ಚಿತ್ರಣದ ದೃಶ್ಯ ವೀಕ್ಷಿಸಲು ಅನುಕೂಲವಾಗುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಸಚಿವರ ಮುಂದೇ ಪ್ರಸ್ತಾಪಿಸಿದರು.
ಈ ಕುರಿತು ಶಾಸಕ ಮಹೇಶ ಟೆಂಗಿನಕಾಯಿ ಅವರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದು ಸಚಿವರು ಸೂಕ್ತ ಅನುದಾನ ಒದಗಿಸಬೇಕೆಂದು ಮನವರಿಕೆ ಮಾಡಿಕೊಟ್ಟರು.ಬಳಿಕ ಮಾತನಾಡಿದ ಸಚಿವರು, ಹುಬ್ಬಳ್ಳಿ ಭೇಟೆ ವೇಳೆ ನೃಪತುಂಗ ಬೆಟ್ಟಕ್ಕೆ ಬಂದು ಸಂಪೂರ್ಣ ವೀಕ್ಷಿಸಿ ಅನುದಾನದ ಒದಗಿಸುವ ಕುರಿತು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಈ ವೇಳೆ ಸಂಘದ ಹಿರಿಯ ಉಪಾಧ್ಯಕ್ಷ ಶಿವಣ್ಣ ಅಂಗಡಿ, ಪ್ರಧಾನ ಕಾರ್ಯದರ್ಶಿ ಸಿದ್ದು ಮೊಗಲಿಶೆಟ್ಟರ ಸೇರಿದಂತೆ ಹಲವರಿದ್ದರು.