ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ವಿಧಾನಸಭೆ ಅಧಿವೇಶನದಲ್ಲಿ ಬಜೆಟ್ ಕುರಿತು ತಮ್ಮ 12 ನಿಮಿಷಗಳ ಭಾಷಣದ ವೇಳೆ ಕೊಳ್ಳೇಗಾಲ ಕ್ಷೇತ್ರ ಮಾತ್ರವಲ್ಲ, ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತ ಯೋಜನೆ ಜಾರಿಗೆ ಸರ್ಕಾರವನ್ನು ಆಗ್ರಹಿಸಿದರು. ಇತ್ತೀಚೆಗೆ ಸಿಎಂ ಮಂಡಿಸಿದ ಬಜೆಟ್‌ನಲ್ಲಿ ಚಾ.ನಗರ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ, ಹಾಗಾಗಿ ಜಿಲ್ಲಾಭಿವೃದ್ಧಿಗೆ ಯೋಜನೆ ಜಾರಿಗೆ ಆದ್ಯತೆ ನೀಡುವಂತೆ ಸದನದಲ್ಲಿ ಶಾಸಕರು ಮನವಿ ಮಾಡಿದರು. ರೇಷ್ಮೆ ನಗರ ವೈಭವ ಮರುಕಳಿಸಲಿ: ಚಾ.ನಗರ ಗಡಿ ಜಿಲ್ಲೆಯಾಗಿದ್ದು ನಂಜುಂಡಪ್ಪ ವರದಿ ಗಮನಿದರೆ ಇದೊಂದು ಹಿಂದುಳಿದ ಜಿಲ್ಲೆಯಾಗಿದ್ದು ಈ ಭಾಗದ ಜಿಲ್ಲೆಯ ರೈತಾಪಿ ವರ್ಗಕ್ಕೆ ನ್ಯಾಯ ಸಲ್ಲಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಗೆ ಆದ್ಯತೆ ನೀಡಿ ರೈತಾಪಿ ವರ್ಗಗಳ ಹಿತ ಕಾಯಬೇಕು, ಆ ಮೂಲಕ ₹800 ಕೋಟಿ ಈ ಯೋಜನೆಗೆ ಒದಗಿಸಬೇಕು. ಪೈಲಟ್ ಪ್ರಾಜೆಕ್ಟ್ ಗೆ ₹505 ಕೋಟಿಗಳಿಗೆ ಆದ್ಯತೆ ನೀಡಬೇಕು. ಮ.ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ಪಡೆಯಬೇಕೆಂಬ ಬಯಕೆ ನನ್ನಗಾಗಿತ್ತು. ಆದರೆ ಸಭೆ ಮುಂದೂಡಿದ ಕಾರಣ ಈ ಬಯಕೆ ಈಡೇರಲಿಲ್ಲ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರಲ್ಲದೆ ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದಿದ್ದ ರೇಷ್ಮೆ ನಗರಿ ವೈಭವ ಮತ್ತೆ ಮರುಕಳಿಸಬೇಕು. ರೇಷ್ಮೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಆಗ್ರಹಿಸಿದರು. ರೇಷ್ಮೆ ಬಿಚ್ಚಣಿಕೆದಾರ ರೈತರಿಗೆ ₹1 ಕೋಟಿ, ₹2 ಕೋಟಿ ಪ್ರೋತ್ಸಾಹ ಧನ ನೀಡುವ ಕುರಿತು ಸದನದಲ್ಲಿ ಪ್ರಸ್ತಾಪಿಸಿದರು.
ಕುಪ್ಪಮ್ಮ ಕಾಲುವೆ ಅಭಿವೃದ್ಧಿಗೆ, 3 ಕಡೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯ:ಚಾ.ನಗರ ವಿವಿ ಉಳಿಸುವ ಮೂಲಕ ಅದಕ್ಕೆ ಡಾ.ಅಂಬೇಡ್ಕರ್ ಹೆಸರನ್ನು ಮರು ನಾಮಕರಣಗೊಳಿಸಬೇಕು. ಕೊಳ್ಳೇಗಾಲದ ಕುಪ್ಪಮ್ಮ ಕಾಲುವೆ ಸಮಗ್ರ ಅಭಿವೃದ್ಧಿಯಾಗಬೇಕು, ಅಲ್ಲಿನ ಹೂಳು ತೆಗೆಸಿ ಅಭಿವೃದ್ಧಿಗೆ ಮುಂದಾಗುವಂತೆ ಚರ್ಚಿಸಿದರು. ಯಳಂದೂರು, ಕೊಳ್ಳೇಗಾಲದಲ್ಲಿ ಒಳಚಂರಡಿ ವ್ಯವಸ್ಥೆಗೆ ಸಮಗ್ರ ರೀತಿಯಲ್ಲಿ ಕಾಯಕಲ್ಪ ಒದಗಿಸಬೇಕು, ಅದಕ್ಕಾಗಿ ಅನುದಾನ ನಿಗದಿಗೆ ಮತ್ತು ಯಳಂದೂರು, ಬಿಳಿಗಿರಿ ರಂಗನಬೆಟ್ಟ, ಸಂತೇಮರಳ್ಳಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಸರ್ಕಾರ ಮುಂದಾಗಬೇಕು, ಸಂತೇಮರಳ್ಳಿ ಎಪಿಎಂಸಿಯಲ್ಲಿ ಎಳನೀರು ಮಾರುಕಟ್ಟೆ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಬೇಕು, ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಮನವಿ ಮಾಡಿದರು. ಕೆರೆಗಳ ಅಭಿವೃದ್ಧಿಗೆ ಚರ್ಚೆ, ಸದನದಲ್ಲಿ ಗಮನ:
ಮುಡಿಗುಂಡ ಸೇತುವೆ ತುರ್ತು ನಿರ್ಮಾಣ ಆಗಲಿ:
ಉಪವಿಭಾಗಕ್ಕೊಂದು ಜಿಲ್ಲಾಸ್ಪತ್ರೆ, ಕೊಳ್ಳೇಗಾಲದಲ್ಲಿ ಪ್ರಾರಂಭವಾಗಲಿ:
ಬಿ.ರಾಚಯ್ಯವರು ಅರಣ್ಯ ಸಚಿವರಾಗಿದ್ದ ವೇಳೆ ಬಡರೈತರಿಗೆ, ಕೃಷಿ ಕಾರ್ಮಿಕರಿಗೆ ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ತಲಾ 4 ಎಕರೆ ಜಮೀನು ನೀಡಿದ್ದು ಆ ಪ್ರಕರಣದಲ್ಲಿ ಸರ್ಕಾರ ಡ್ರೋಣ್ ಸರ್ವೆ ಮಾಡಿಸಿ ಎಲ್ಲಾ ವರ್ಗದ ಸಾಗುವಳಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.