ಸವಣೂರು: ಮಾನವೀಯತೆಯಿಂದ ಕೆಲಸ ಮಾಡಿ ನಿಜವಾದ ಫಲಾನುಭವಿಗಳಿಗೆ ಮನೆ ಬಿದ್ದರೂ ಸಹ ಮನೆ ಆಗಿಲ್ಲ. ಈ ಕುರಿತು ಮರು ಪರಿಶೀಲಿಸಿ ಮಾಹಿತಿ ನೀಡಿ ಎಂದು ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಸಹ ಮಾಹಿತಿ ನೀಡಿಲ್ಲ ಎಂದು ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಖಾರವಾಗಿ ನುಡಿದರು.ತಾಲೂಕು ಪಂಚಾಯತ ಸಭಾಭವನದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ನೇರವೇರಿಸಿ ಮಾತನಾಡಿದರು.2020ನೇ ಸಾಲಿನಿಂದ ಇಲ್ಲಿಯವರೆಗೂ ತಾಲೂಕಿನಾದ್ಯಂತ ಮನೆಗಳು ಮಳೆಯಿಂದ ಹಾನಿ ಒಳಗಾಗಿದ್ದು, ಇಲ್ಲಿ ನಿಜವಾದ ಫಲಾನುಭವಿಗಳಿಗೆ ಮನೆ ಸಿಕ್ಕಿರುವುದಿಲ್ಲ. ತಾಲೂಕಿನಲ್ಲಿ 486 ಮನೆಗಳ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 418 ತಿರಸ್ಕೃತಗೊಂಡಿದ್ದು 68 ಅರ್ಜಿಗಳ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ದಂಡಾಧಿಕಾರಿ ಭರತರಾಜ ಕೆ. ಎನ್. ಅವರು ಮಾಹಿತಿ ನೀಡಿದರು. ಮಾಹಿತಿ ಪಡೆದ ಉಪ ಸಭಾಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದರು. 486 ಅರ್ಜಿಯಲ್ಲಿ 68 ಮಾತ್ರ ಆಯ್ಕೆ ಮಾಡಿದ್ದು ತಪ್ಪು ಮಾಹಿತಿ ನೀಡುತ್ತೀದ್ದಿರಿ ಮರು ಪರಿಶೀಲಿಸಿ ಬಡವರಿಗೆ ಅನ್ಯಾಯ ಆಗದಂತೆ ಮಾನವೀಯತೆಯಿಂದ ಜನರಿಗೆ ಸಹಕರಿಸಿ ಹಾಗೂ ಮಾಹಿತಿ ನೀಡಿ ಎಂದು ತಹಸೀಲ್ದಾರ್ ಅವರಿಗೆ ತಿಳಿಸಿದರು. ಇದೇ ತಿಂಗಳು 12ರಂದು ಸಭೆ ಇದ್ದು, ಈ ತಿಂಗಳಿನ 10ನೇ ತಾರೀಖಿನ ಒಳಗಾಗಿ ಮಾಹಿತಿ ನೀಡಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.ನರೇಗಾ ಯೋಜನೆ ಅಡಿಯಲ್ಲಿ ಶಾಲಾ ಕಾಂಪೌಡ್, ಶೌಚಾಲಯ, ಬಿಸಿ ಊಟ ಕೊಠಡಿ ನಿರ್ಮಾಣ ಮಾಡಲು ಅವಕಾಶವಿದ್ದು ತಾಲೂಕಿನ ಯಾವ ಶಾಲೆಯಲ್ಲಿ ಕಾಮಗಾರಿಕೆ ನಡೆಯಬೇಕಾಗಿದೆ ಇದರ ಕುರಿತು ಮಾಹಿತಿ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಶಾಲೆ ಅಭಿವೃದ್ಧಿ ಕಾರ್ಯ ನಿರ್ವಹಿಸಿ ಎಂದು ಹೇಳಿದರು. ಶಾಲೆಗಳಲ್ಲಿ ಶುದ್ಧ ನೀರಿನ ಘಟಕ ಅಳವಡಿಸಿರುವ ಕುರಿತು ಮಾಹಿತಿ ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳುಗೆ ಕೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿದ ಅವರು ತಾಲೂಕಿನಲ್ಲಿ ಕೆಪಿಎಸ್‌ಸಿ ಶಾಲೆಗೆ 2 ಶಾಲೆಗಳು ಆಯ್ಕೆ ಆಗಿದೆ ಹಾಗೂ ಅತಿ ಕಡಿಮೆ ಶಾಲಾ ದಾಖಲಾತಿ ಹೊಂದಿರುವ 15 ಶಾಲೆಗಳ ಪೈಕಿ 12 ಉರ್ದು ಶಾಲೆಗಳು ಇದ್ದು 3 ಕನ್ನಡ ಶಾಲೆಗಳು ದಾಖಲಾತಿಯನ್ನು ಇಳಿಕೆ ಆಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್. ಎಫ್. ಬಾರ್ಕಿ ಅವರು ಮಾಹಿತಿ ನೀಡಿದರು.ಕಳಿವಾಳ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲು ಅರಣ್ಯ ಇಲಾಖೆ ಅಡ್ಡಿ ಪಡಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಅಧಿಕಾರಿಗಳು ತಿಳಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಉಪಾಸಭಾಧ್ಯಕ್ಷರು ನಿಮಗೆ ಯಾರು ಹೇಳಿದ್ದು, ಚರಂಡಿ ನೀರು ಹೋಗುವ ದಾರಿಯಲ್ಲಿ ಗಿಡ ನೆಡುವಂತೆ ಯಾರಿಂದ ಪರವಾನಗಿ ಪಡೆದಿದ್ದೀರಿ. ಸಾಮಾಜಿಕ ಅರಣ್ಯ ಇಲಾಖೆಯಿಂದ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟಿರುವ ಕುರಿತು ಆರೋಪಗಳಿವೆ ಹಾಗೂ ತಾವು ನೆಟ್ಟಿರುವ ಗಿಡಗಳು ಇರುವದಿಲ್ಲ ಎಂದು ಜನರು ಆರೋಪಿಸಿದ್ದಾರೆ ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.ನಗರದ ಕಸ ವಿಲೇವಾರಿ ಘಟಕದಿಂದ ಶಿರಬಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿದ್ದು ಘಟಕದ ಆಸು ಪಾಸು ಇರುವ ಗ್ರಾಮಗಳಿಗೆ ದುರ್ವಾಸನೆ ಹಾಗೂ ಅನಾರೋಗ್ಯಕರ ವಾತಾವರಣ ಸೃಷ್ಟಿ ಆಗಿದೆ. ಇದರಿಂದ ಸೊಳ್ಳೆ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ ಎಂದು ಗ್ರಾಮ ಪಂಚಾಯತಿ ಪಿಡಿಒ ಅವರು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಮನವರಿಕೆ ಮಾಡಿದರು. ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಸಲಹೆ ನೀಡಲಾಗುವುದು ಎಂದು ಹೇಳಿದರು.ಸಭೆಯಲ್ಲಿ ತಹಸೀಲ್ದಾರ್ ಕೆ.ಎನ್. ಭರತ್ ರಾಜ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ ಪ್ರಸಾದ ಕಟ್ಟಿಮನಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.