ಕೋಲಾರ ಜಿಲ್ಲೆಗೆ ಕೃಷ್ಣಾನದಿ ನೀರು ಕೊಡಿ: ರೈತ ಸಂಘ

KannadaprabhaNewsNetwork |  
Published : Mar 04, 2026, 02:00 AM IST
3ಕೆಜಿಎಫ್‌2 | Kannada Prabha

ಸಾರಾಂಶ

ನಮ್ಮ ಸರ್ಕಾರ ಬಯಲು ಸೀಮೆಯ ಕೋಲಾರ ಜಿಲ್ಲೆಯ ಜನತೆಗೆ ಶಾಶ್ವತ ನೀರಾವರಿ ಯೋಜನೆಗಳ ಹೆಸರಿನಲ್ಲಿ ಹಗಲು ವೇಳೆ ನಕ್ಷತ್ರಗಳನ್ನು ತೋರಿಸಿ 7 ದಶಕಗಳಿಂದ ಯಾಮಾರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್‌ನೆರೆಯ ಆಂಧ್ರಪ್ರದೇಶ ರಾಜ್ಯಕ್ಕೆ ಹರಿಯುತ್ತಿರುವ ಕೃಷ್ಣಾನದಿ ನೀರಿನಲ್ಲಿ ಕೋಲಾರ ಜಿಲ್ಲೆಗೆ 14.5 ಟಿ.ಎಂ.ಸಿ. ನೀರನ್ನು ಹರಿಸಬೇಕು ಹಾಗೂ ಮಳೆಗಾಲದಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ವ್ಯರ್ಥವಾಗಿ ಹರಿಯುತ್ತಿರುವ ಮಳೆ ನೀರಿಗೆ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ಜಿಲ್ಲೆಗೆ ಶುದ್ಧ ಕುಡಿಯುವ ನೀರನ್ನು ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು. ತಾಲೂಕಿನ ಬೇತಮಂಗಲದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ರಾಜ್ಯದಲ್ಲಿ ರೈತರ ಮೇಲೆ ಇರುವ ಕಾಳಜಿ ಸರ್ಕಾರಕ್ಕೆ ಕೋಲಾರ ಜಿಲ್ಲೆಯ ಮೇಲೆ ಇಲ್ಲ. ಆಂಧ್ರ ಸರ್ಕಾರ ರೈತರ ಹಿತದೃಷ್ಟಿಯಿಂದ ಕೃಷ್ಣಾನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಡಲು ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಕಾಲುವೆಗಳ ಮುಖಾಂತರ ನೀರು ಹರಿಸುತ್ತಿದ್ದರೂ, ನಮ್ಮ ಸರ್ಕಾರ ಬಯಲು ಸೀಮೆಯ ಕೋಲಾರ ಜಿಲ್ಲೆಯ ಜನತೆಗೆ ಶಾಶ್ವತ ನೀರಾವರಿ ಯೋಜನೆಗಳ ಹೆಸರಿನಲ್ಲಿ ಹಗಲು ವೇಳೆ ನಕ್ಷತ್ರಗಳನ್ನು ತೋರಿಸಿ 7 ದಶಕಗಳಿಂದ ಯಾಮಾರಿಸುತ್ತಾ, ನೀರಾವರಿ ಯೋಜನೆಗಳಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆಯುತ್ತಿರುವುದೇ ಸಾದನೆಯಾಗಿದೆಂದು ದೂರಿದರು. ಜಿಲ್ಲೆಯ ಜನಪ್ರತಿನಿಧಿಗಳು ಕೆ.ಸಿ. ವ್ಯಾಲಿ, ಎತ್ತಿನಹೊಳೆ ನೀರಾವರಿ ಯೋಜನೆಗಳಲ್ಲಿ ಜನರನ್ನು ದಿಕ್ಕು ತಪ್ಪಿಸಿ, ಬೆಂಗಳೂರು ತ್ಯಾಜ್ಯ ನೀರನ್ನು ಕೋಲಾರದ ಕೆರೆಗಳಿಗೆ ಹರಿಸಿ ರೈತರ ಜೀವನದ ಜೊತೆ ಚಲ್ಲಾಟವಾಡುತ್ತಿರುವುದೇ ದೊಡ್ಡ ಸಾಧನೆಯಾಗಿದೆ. ಕೆ.ಸಿ.ವ್ಯಾಲಿ ಜಿಲ್ಲೆಗೆ ಹರಿದ ನಂತರ ಟೆಮೋಟೊ ಮತ್ತಿತರ ಬೆಳೆಗಳಿಗೆ ಬಾಧಿಸುತ್ತಿರುವ ರೋಗಗಳು ನಿಯಂತ್ರಣಕ್ಕೆ ಬಾರದೆ ಕೃಷಿಯಿಂದ ವಿಮುಕ್ತಿ ಹೊಂದುವ ನಿರ್ಧಾರದಲ್ಲಿರುವ ರೈತರಿಗೆ ಕೆ.ಸಿ.ವ್ಯಾಲಿ ನೀರು ನುಂಗಲಾರದ ವಿಚಾರವಾಗಿದೆ ಎಂದರು.ತಾಲೂಕು ಅಧ್ಯಕ್ಷ ರಾಮಸಾಗರ ವೇಣು ಮಾತನಾಡಿ, ಒಂದು ವಾರದೊಳಗೆ ಕೃಷ್ಣಾನದಿ ನೀರಿನಲ್ಲಿ ಜಿಲ್ಲೆಯ ಪಾಲನ್ನು ಪಡೆದು ಜಿಲ್ಲೆಗೆ ಹರಿಸಬೇಕು. ಇಲ್ಲವೆ ಕರ್ನಾಟಕದ ಭೂಪಟದಲ್ಲಿ ಕೋಲಾರ ಜಿಲ್ಲೆ ಇಲ್ಲವೆಂದು ಪಕ್ಕದ ಆಂಧ್ರ ರಾಜ್ಯಕ್ಕೆ ಸೇರಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಜಿಲ್ಲೆಯ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಮಳೆ ನೀರು ಸಂಗ್ರಹ ಮಾಡಲು ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಬೇಕು. ಮಳೆ ನೀರನ್ನು ಸಂಗ್ರಹಿಸಿ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮೂಲಕ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿ ಇದೇ ತಿಂಗಳ ಮಾರ್ಚ್ 10 ರ ಮಂಗಳವಾರ ರಾಮಸಾಗರ ಆಂಧ್ರ ಗಡಿಭಾಗ ಬಂದ್ ಮಾಡಲು ರೈತ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ದೊಡ್ಡಕಾರಿ ವಿಶ್ವನಾಥ, ನಾರಾಯಣಸ್ವಾಮಿ, ಪ್ರತಾಪ್, ಮಂಗಸAದ್ರ ತಿಮ್ಮಣ್ಣ, ಪಾರಂಡಹಳ್ಳಿ ಮಂಜುನಾಥ, ನಾಗಭೂಷಣ ಸುರೇಶಬಾಬು, ಬಾಬು ಮುಂತಾದವರು ಇದ್ದರು. ೩ಕೆಜಿಎಫ್೨ಕೋಲಾರ ಜಿಲ್ಲೆಗೆ ಕೃಷ್ಣಾ ನದಿಯ ನೀರನ್ನು ಹರಿಸುವಂತೆ ಆಗ್ರಹಿಸಿ ತಾಲೂಕಿನ ಬೇತಮಂಗಲದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ ನಾರಾಯಣಗೌಡ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜ್ಞಾನ ಮಾನವನ ಏಳಿಗೆಯ ರಹದಾರಿ: ಎಸ್‌ಪಿ ಶೇಖರ್
ಎಸ್‌ಸಿ, ಎಸ್‌ಟಿಗೆ ವರ್ಗಕ್ಕೆ ಸರ್ಕಾರ ಘೋರ ಅನ್ಯಾಯ