ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆಲವೊಮ್ಮೆ ಕಲುಷಿತ ನೀರು ಪೂರೈಕೆ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾದ ತಕ್ಷಣವೇ ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು ವರದಿ ನೀಡಬೇಕೆಂದು ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರಿನ ವಿಭಾಗದಿಂದ ಕೊರೆಯುವ ಕೊಳವೆಬಾವಿಗಳ ಯಾವ ಯೋಜನೆಯಲ್ಲಿ ಕೊರೆಸಲಾಗಿದೆ. ವರ್ಷ, ಅಂದಾಜು ವೆಚ್ಚದ ವಿವರವನ್ನು ರೆಕಾರ್ಡ್ ಮಾಡಬೇಕು. ಬರಗಾಲ ಇರುವುದರಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ.25 ಲಕ್ಷಗಳನ್ನು ಕೊಳವೆಬಾವಿ ಆಳ ಹೆಚ್ಚಿಸಲು, ಪ್ಲೆಶಿಂಗ್, ಪೈಪ್‌ಲೈನ್ ಅಳವಡಿಕೆಗಾಗಿ ಮಂಜೂರು ಮಾಡಲಾಗಿದೆ. ಇದಲ್ಲದೇ ವಿಪತ್ತು ನಿರ್ವಹಣಾ ಘಟಕದಿಂದಲೂ ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಅಧಿಕಾರಿಗಳು ಸಮಯೋಚಿತವಾಗಿ ಕೆಲಸ ಮಾಡಬೇಕೆಂದರು.ಜಲಜೀವನ್ ಮಿಷನ್ ಯೋಜನೆಯಡಿ ಮಂಜೂರಾದ ಕಾಮಗಾರಿಗಳಿಗೆ ಮರು ಅವಧಿ ನಿಗದಿ ಮಾಡಿ ಅನುಮೋದನೆ ನೀಡಲಾಯಿತು. ಮಿಷನ್‌ನಿಂದ ದಾವಣಗೆರೆ ತಾ. ಕಾಟಿಹಳ್ಳಿ, ಅತ್ತಿಗೆರೆ, ಹರಿಹರ ತಾ. ಜಿಗಳಿ, ಚಿಕ್ಕಬಿದರಿ ಗ್ರಾಮಗಳಿಗೆ ಮತ್ತು ಚನ್ನಗಿರಿ ತಾ. ಮೇಲನಾಯಕನಕಟ್ಟೆ, ಅಸ್ತಾಪನಹಳ್ಳಿ ಗ್ರಾಮದಲ್ಲಿ ಜೆಜೆಎಂ ರಡಿ ಕಾಮಗಾರಿ ಕೈಗೊಳ್ಳಲು ಸಮಿತಿ ಅನುಮೋದನೆ ನೀಡಿತು. ಜಲಜೀವನ್ ಯೋಜನೆ ಮುಕ್ತಾಯವಾಗುತ್ತಿರುವುದರಿಂದ ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಂಡು ಜನರಿಗೆ ನೀರು ಒದಗಿಸಲು ಗ್ರಾಮೀಣ ನೀರು, ನೈರ್ಮಲ್ಯ ಇಲಾಖೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು.