ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರಿನ ಮೂಲವಾದ ಜಕ್ಕಲಮಡುಗು ಜಲಾಶಯದ ಒಡಲು ತುಂಬಿರುವುದು ಜನತೆಯ ಸಂತೋಷಕ್ಕೆ ಕಾರಣವಾಗಿದೆ. ಅದೇ ರೀತಿ ಶ್ರೀನಿವಾಸಸಾಗರ ಜಲಾಶಯ ಉಕ್ಕಿ ಬಂದಿದೆ. 80 ಅಡಿ ಮೇಲಿನಿಂದ ನೀರು ಕೋಡಿ ಹರಿಯುತ್ತಿರುವುದನ್ನು ನೋಡಲು ಎರಡು ಕಣ್ಣುಗಳೆ ಸಾಲದು.
ಆದರೆ ನೀರಿಗೆ ಇಳಿದು ಆಟವಾಡುವವರ ''''ಹುಚ್ಚಾಟಗಳು ಭಯ ಹುಟ್ಟಿಸುವಂತಿರುತ್ತವೆ. ಶ್ರೀನಿವಾಸ ಸಾಗರದ ಕೋಡಿಯ ತಡೆಗೋಡೆಯ ಮೇಲೆ ಏರಲು ಯುವಕರು ತಾ ಮುಂದು ನಾ ಮುಂದು ಎಂದು ಮುಗಿಬೀಳುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಹೀಗೆ ತಡೆಗೋಡೆಯ ಮೇಲೆ ಹತ್ತಿದ ಯುವಕನೊಬ್ಬ ಏಕಾಏಕಿ ಬಿದ್ದಿ ಘಟನೆ ನಡೆದಿತ್ತು. ಗೋಡೆ ಏರುವುದ ತಡೆಗಟ್ಟಿಧುಮುಕುವ ನೀರಿನಲ್ಲಿ ನಾಲ್ಕಾರು ಯುವಕರು ಒಟ್ಟಿಗೆ ತಡೆಗೋಡೆಯನ್ನು ಹತ್ತುವುದು, ಪೈಪೋಟಿಗೆ ಬಿದ್ದಂತೆ ಮೇಲೆ ಏರುತ್ತಾರೆ. ಕಡಿದಾದ ತಡೆಗೋಡೆಯಿಂದ ಸ್ವಲ್ಪ ಜಾರಿದರೂ ಕೆಳಕ್ಕೆ ಬೀಳಬೇಕಾಗುತ್ತದೆ. ಇಲ್ಲಿ ಪಹರೆ ನಿಯೋಜಿಸಿ ಭದ್ರತೆಯನ್ನು ಕಲ್ಪಿಸಬೇಕು. ನೀರಿನಲ್ಲಿ ಆಟವಾಡಲಿ. ಆದರೆ ಹೀಗೆ ಹುಚ್ಚಾಟಗಳು ಅನಗತ್ಯ ಎಂಬುದು ಪ್ರವಾಸಿಗರ ಅನಿಸಿಕೆ ಮತ್ತು ಜನರ ಜೀವದ ಕಾಳಜಿಯಾಗಿದೆ.