ಕನ್ನಡಪ್ರಭ ವಾರ್ತೆ,ಕಡೂರು
ಕಡೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಕೌಟ್ ಅಂಡ್ ಗೈಡ್ಸ್ ನ ಜಿಲ್ಲಾ ಸಂಸ್ಥೆ, ರೋವರ್ ಮತ್ತು ರೇಂಜರ್ಸ್ ಘಟಕಗಳಿಂದ ಕೆಮ್ಮಣ್ಣು ಗುಂಡಿಯಲ್ಲಿ ನಡೆಯುವ 3 ದಿನಗಳ ಪರಿಸರ ಜಾಗೃತಿ ಮತ್ತು ಪ್ರಕೃತಿ ಅಧ್ಯಯನ ಶಿಬಿರಕ್ಕೆ ಸಾಂಕೇತಿಕ ಚಾಲನೆ ನೀಡಿ ಮಾತನಾಡಿದರು.ಸ್ಕೌಟ್ ಅಂಡ್ ಗೈಡ್ಸ್ ಒಂದು ಚಳುವಳಿಯಾಗಿದ್ದು, 1907 ರಲ್ಲಿ ಇಂಗ್ಲೆಂಡಲ್ಲಿ ಬೇಡನ್ ಪೋಲ್ ಎಂಬ ಸೈನಿಕನಿಂದ ಆರಂಭಗೊಂಡ ಈ ಸ್ಕೌಟ್ಸ್ ಇಂದು 256 ದೇಶಗಳಲ್ಲಿ ವಿಸ್ತರಿಸಿಕೊಂಡಿರುವ ಅತಿ ದೊಡ್ಡ ಯುವ ಘಟಕ. ಸುಮಾರು 60 ಮಿಲಿಯನ್ ಸದಸ್ಯರು ಸೇರ್ಪಡೆಯಾಗಿದ್ದಾರೆ ಎಂದರು. ಸ್ಕೌಟ್ಸ್ ನ ರಾಜ್ಯ ಘಟಕ ಆಯುಕ್ತ ಪಿಜಿಆರ್ ಸಿಂಧ್ಯಾ ಸಾರಥ್ಯದಲ್ಲಿ ನಡೆಯುತ್ತಿದೆ. ಅಮೆರಿಕದಲ್ಲಿ ನಡೆದ ಜಾಂಬೂರಿಯಲ್ಲಿ ಕರ್ನಾಟಕದ ನಿಹಾರಿಕಾ ಭಾಗವಹಿಸುವ ಮೂಲಕ ಭಾರತಕ್ಕೆಕೀರ್ತಿ ತಂದಿದ್ದಾರೆ ಎಂದರು.
ಪರಿಸರದಲ್ಲಿ ಅಸಮತೋಲನ ಕಂಡು ಬಂದರೆ ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿಗಳ ಜೀವನ ನಶಿಸು ವುದರಲ್ಲಿ ಸಂಶಯವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಇಂತಹ ಚಳುವಳಿಗೆ ಸೇರುವುದರಿಂದ ಸಾಮಾಜಿಕ ಕಾಳಜಿ, ಪರಿಸರದ ರಕ್ಷಣೆ, ಜೀವನದಲ್ಲಿ ಶಿಸ್ತು, ಸಂಯಮ ಕಲಿಯಲು ಸಾಧ್ಯ. ಹಾಗಾಗಿ 3 ದಿನ ನಡೆವ ಈ ಶಿಬಿರದಲ್ಲಿ ತಾವು ಪ್ರಕೃತಿ ಆಸ್ವಾದಿಸಿ ಸಸಿ ನೆಡುವ ಜೊತೆ ಸ್ವಚ್ಛತೆ ಕಾಪಾಡಬೇಕೆಂದು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಚಾರ್ಯ ಡಾ ಕೆ.ಎ.ರಾಜಣ್ಣ ಮಾತನಾಡಿ ಪರಿಸರ ಜಾಗೃತಿ ಅಧ್ಯಯನ ಶಿಬಿರವನ್ನು ಸ್ಕೌಟ್ ಆಂಡ್ ಗೈಡ್ಸ್ ಅವರ ಸಹಕಾರದಿಂದ ಕೆಮ್ಮಣ್ಣುಗುಂಡಿಯಲ್ಲಿ ಆಯೋಜಿಸಿದ್ದು ಇದು ಪ್ರವಾಸ ಅಲ್ಲ ಪರಿಸರ ಅಧ್ಯಯನ ಶಿಬಿರ ಎಂಬುದನ್ನು ತಾವು ಅರಿಯಬೇಕು. ಲಿಂಗದಹಳ್ಳಿಯಲ್ಲಿ ಪರಿಸರ ಜಾಥಾ ಮಾಡಿ ಸಸಿಗಳನ್ನು ನೆಡಲಾಗುವುದು. ಪರಿಸರದ ಬಗ್ಗೆ ಅಧ್ಯಯನ, ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗುತ್ತದೆ. ಇದರ ಸದುಪಯೋಗ ಪಡಿಸಿಕೊಂಡು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುದ್ಧ ವಾಗಿಟ್ಟು ಕೊಂಡರೆ ಉತ್ತಮ ಎಂದರು. ಭಾರತ್ ಸ್ಕೌಟ್ ಗೈಡ್ಸ್ನ್ ನ ಜಿಲ್ಲಾ ತರಬೇತಿ ಆಯುಕ್ತರಾದ ಸಿ.ಸಂಧ್ಯಾರಾಣಿ, ಸಮಾಜ ಶಾಸ್ತ್ರ ಮುಖ್ಯಸ್ಥ ಎಸ್.ಬಿ.ಮಂಜುನಾಥ್,ಭೌತಶಾಸ್ರ್ತದ ಮುಖ್ಯಸ್ಥೆ ಹಮೀದ ಬಾನು ಬೇಗಂ. ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ರೋವರ್ಸ್ ಸ್ಕೌಟ್ ಲೀಡರ್ ಜಿ.ತಿಮ್ಮರಾಜು ಮತ್ತು ಎಚ್.ಆರ್.ಜ್ಯೋತಿ, ಉಪನ್ಯಾಸಕರು ಸ್ಕೌಟ್ ಅಂಡ್ ಗೈಡ್ಸ್ನ್ ನ ವಿದ್ಯಾರ್ಥಿಗಳು ಉಪನ್ಯಾಸಕರು ಇದ್ದರು. 12ಕೆಕೆಡಿಯು1.ಕಡೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪರಿಸರ ಅಧ್ಯಯನ ಶಿಬಿರವನ್ನು ಎ.ಎನ್.ಮಹೇಶ್ ಉದ್ಘಾಟಿಸಿದರು.