ಪ್ರಸ್ತುತ ಸಾಮಾಜಿಕ ಮಾಧ್ಯಮದ ವ್ಯಸನ ಹೆಚ್ಚಳ

KannadaprabhaNewsNetwork |  
Published : Dec 29, 2025, 01:15 AM IST
34 | Kannada Prabha

ಸಾರಾಂಶ

ಇತಿಹಾಸ ಆತ್ಮದ ಬೆಳಕು. ಮಣ್ಣಿನ ಋಣವೇ ಆತ್ಮ. ಪ್ರತಿಯೊಬ್ಬರೂ ದೀಪ ಹಚ್ಚುವ ಕೆಲಸ ಮಾಡಬೇಕೆ ಹೊರತು ಆರಿಸುವ ಕೆಲಸ ಮಾಡಬಾರದು

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ಸಾಮಾಜಿಕ ಮಾಧ್ಯಮದ ವ್ಯಸನ ಹೆಚ್ಚಳವಾಗಿದೆ ಎಂದು ಖ್ಯಾತ ಮನೋರೋಗ ತಜ್ಞ ವೈದ್ಯ ಡಾ.ಬಿ.ಎನ್‌. ರವೀಶ್‌ ಕಳವಳ ವ್ಯಕ್ತಪಡಿಸಿದರು.

ಅಸೋಸಿಯೇಷನ್‌ ಆಫ್‌ ಅಲಯನ್ಸ್‌ ಕ್ಲಬ್ಸ್‌ ಇಂಟರ್‌ ನ್ಯಾಷನಲ್‌ ವತಿಯಿಂದ ಹೂಟಗಳ್ಳಿ ಕೆಎಚ್‌ಬಿ ಕಾಲೋನಿಯ ಶ್ರೀ ಅನಂತೇಶ್ವರ ಭವನದಲ್ಲಿ ಪ್ರಾಂತೀಯ ಸಮ್ಮೇಳನ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಮನೋ ಸಾಮಾಜಿಕ ಇತಿಹಾಸ ಸಂಗಮ ಗೋಷ್ಠಿಯಲ್ಲಿ ಅವರು ಮಾತನಾಡಿ,

ತಂತ್ರಜ್ಞಾನ ಮನಸ್ಸನ್ನು ಹಾಳು ಮಾಡುತ್ತಿದೆ. ಮಣ್ಣಿನ ಸೇವೆಗೆ ತಂತ್ರಜ್ಞಾನ ಅಡ್ಡಿಯಾಗಬಾರದು ಎಂದರು.

ಇತಿಹಾಸ ಆತ್ಮದ ಬೆಳಕು. ಮಣ್ಣಿನ ಋಣವೇ ಆತ್ಮ. ಪ್ರತಿಯೊಬ್ಬರೂ ದೀಪ ಹಚ್ಚುವ ಕೆಲಸ ಮಾಡಬೇಕೆ ಹೊರತು ಆರಿಸುವ ಕೆಲಸ ಮಾಡಬಾರದು ಎಂದು ಹೇಳಿದರು.

ಕರ್ನಾಟಕದ ಹೆಮ್ಮೆಯನ್ನು ಬಿಂಬಿಸುವ ಸ್ವಾತಂತ್ರ್ಯ ಹೋರಾಟಗಾರರು, ವ್ಯಕ್ತಿಗಳು, ಸ್ಥಳಗಳು, ನದಿಗಳು, ಕಾಡುಗಳ ಬಗ್ಗೆ ಅರಿವು ನಿರ್ಮಿಸಿರುವ ಪಿಪಿಟಿ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಮೈಸೂರು ವೈದ್ಯಕೀಯ ಕಾಲೇಜಿನ ಮನೋ ವೈದ್ಯ ಡಾ.ಎಂ.ಎಸ್. ನರೇಂದ್ರಕುಮಾರ್‌ ಮಾತನಾಡಿ, ಮಾನಸಿಕ ರೋಗದ ಬಗ್ಗೆ ಕಳಂಕ ಹಚ್ಚಬಾರದು ಹಾಗೂ ರೋಗಿಗಳಿಗೆ ತಾರತಮ್ಮ ಮಾಡಬಾರದು ಎಂದರು.

ಮದ್ಯಪಾನ, ಧೂಮಪಾನ, ಕಾಫಿ, ಟೀ ಸೇವನೆ ಎಲ್ಲವೂ ವ್ಯಸಗಳೇ. ಪ್ರತಿಯೊಬ್ಬರೂ ಕೂಡ ಮನಸ್ಸಿನ ಮಹತ್ವವನ್ನು ಅರಿಯಬೇಕು. ಮಾನಸಿಕ ರೋಗಿಗಳಿಗೆ ಕಳಂಕ ಬದಿಗಿರಿಸಿ, ಚಿಕಿತ್ಸೆ ಒದಗಿಸಬೇಕು ಎಂದು ಅವರು ಸಲಹೆ ಮಾಡಿದರು.

ಮಾನಸಿಕ ರೋಗ ನೂರರಲ್ಲಿ ಒಬ್ಬರಿಗೆ ಬರುತ್ತದೆ. ಅನುವಂಶೀಯವಾಗಿ ಬಂದರೂ ಬರಬಹುದು ಇಲ್ಲದಿದ್ದರೇ ಇಲ್ಲ. ಎಲ್ಲಾ ಔಷಧಿಗಳಂತೆ ಮಾನಸಿಕ ಚಿಕಿತ್ಸೆಯಲ್ಲಿಯೂ ಅಡ್ಡ ಪರಿಣಾಮಗಳಿರುತ್ತವೆ ಎಂದರು.

ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಮನೋ ವೈದ್ಯ ಡಾ.ಶಿವಾನಂದ ಮನೋಹರ್‌ ಮಾತನಾಡಿ ,ಲೈಂಗಿಕತೆಯ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೇ ಪತಿ- ಪತ್ನಿ ನಡುವೆ ವೈಮನಸ್ಸಿಗೆ ಕಾರಣವಾಗುತ್ತಿದೆ. ಲೈಂಗಿಕತೆಯ ಬಗ್ಗೆ ಮಾತನಾಡುವುದು ಅಸಹ್ಯ ಎಂದು ಭಾವಿಸದೇ ಅದೊಂದು ವಿಜ್ಞಾನ ಎಂದು ತಿಳಿಯಬೇಕು ಎಂದರು.

ಲೈಂಗಿಕತೆಯ ಬಗ್ಗೆ ಮಾಹಿತಿ ಇಲ್ಲದಿದ್ದರೆ ತೊಂದರೆ ಆಗುತ್ತದೆ. ಸುಳ್ಳು ಮಾಹಿತಿಯನ್ನು ನಂಬಬಾರದು ಎಂದು ಅವರು ಕಿವಿಮಾತು ಹೇಳಿದರು.

ಸಮ್ಮೇಳನವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಉದ್ಘಾಟಿಸಿದರು. ಕ್ಲಬ್‌ನ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ ವಿ. ಬೈರಿ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜ್ಯಪಾಲ ಎಸ್‌. ವೆಂಕಟೇಶ್‌, ಉಪ ರಾಜ್ಯಪಾಲರಾದ ಮಹಾಬಲೇಶ್ವರ ಬೈರಿ, ಎಂ.ಎಸ್‌. ಸಂತೋಷ್‌ ಕುಮಾರ್‌, ನ. ಗಂಗಾಧರಪ್ಪ ಮಾತನಾಡಿದರು.

ಪ್ರಾಂತೀಯ ಸಮ್ಮೇಳನ ಅಧ್ಯಕ್ಷ ಕೆ.ಬಿ. ಲಿಂಗರಾಜು ಸ್ವಾಗತಿಸಿದರು. ಖಜಾಂಚಿ ಎನ್‌. ಸರಸ್ವತಿ ವಂದಿಸಿದರು.

ಪ್ರಾಂತೀಯ ಸಮ್ಮೇಳನ ರಾಯಭಾರಿ ಇಂದಿರಾ ವೆಂಕಟೇಶ್‌, ಮಾಜಿ ರಾಜ್ಯಪಾಲ ಸಿರಿ ಬಾಲು, ಜಿಲ್ಲಾ ಸಂಪುಟ ಕಾರ್ಯದರ್ಶಿ ಎನ್‌. ಬೆಟ್ಟೇಗೌಡ, ಕೋಶಾಧ್ಯಕ್ಷ ಕೃಷ್ಣೋಜಿರಾವ್‌, ಸಾರ್ವಜನಿಕ ಸಂಪರ್ಕಾಧಿಕಾರಿ ಸಿಬಿ. ಶ್ರೀಶೈಲ, ಸಂಪುಟ ರಾಯಭಾರಿ ಗಣೇಶ್‌, ವಿವಿಧ ಸಮಿತಿಗಳ ಸುನೀತಾ ಬೆಟ್ಟೇಗೌಡ, ಶ್ರೀಲತಾ ಮನೋಹರ್‌, ಅನಂತಲಕ್ಷ್ಮಿ, ಪುಟ್ಟಸ್ವಾಮಿ, ಮೌಲ್ಯ ಗೌಡ, ಪ್ರಿಯಾಂಕ, ರೇಣುಕಾಂಬ,ಎಂ.ಆರ್‌. ಯತಿರಾಜ್‌, ರಾಜೇಶ್‌, ಗಾಯತ್ರಿದೇವಿ, ಆರ್. ಮಂಜುಳಾ, ವಲಯ-1ರ ಅಧ್ಯಕ್ಷೆ ಉಷಾ ನಂದಿನಿ, 2ರ ಅಧ್ಯಕ್ಷ ಶಶಿಕುಮಾರ್‌, ಪ್ರಾಂತೀಯ ಸಮ್ಮೇಳನ ಕಾರ್ಯದರ್ಶಿ ಕೆ.ಕೆ. ಜಯರಾಂ ಮೊದಲಾದವರು ಇದ್ದರು.

---

ಬಾಕ್ಸ್‌...

ಶ್ರೀ ಪುರುಷ ಪುತ್ಥಳಿ ಅನಾವರಣ, ಅಂಚೆ ಚೀಟಿ, ಲಕೋಟೆ ಬಿಡುಗಡೆ28 ಎಂವೈಎಸ್‌ 34

ಮೈಸೂರಿನ ಹೂಟಗಳ್ಳಿ ಶ್ರೀ ಅನಂತೇಶ್ವರ ಭವನದಲ್ಲಿ ಭಾನುವಾರ ನಡೆದ ಅಸೋಸಿಯೇಷನ್‌ ಆಫ್‌ ಅಲಯನ್ಸ್‌ ಕ್ಲಬ್‌ಸ್‌ ಇಂಟರ್‌ ನ್ಯಾಷನಲ್‌ ಪ್ರಾಂತೀಯ ಸಮ್ಮೇಳನದಲ್ಲಿ ಶ್ರೀ ಪುರುಷ ಪುತ್ಥಳಿಯನ್ನು ಅನಾವರಣ ಮಾಡಲಾಯಿತು.

--

ಗಂಗರ ಮೂಲಪುರುಷ ಶ್ರೀ ಪುರುಷರ ಅಂಚೆ ಚೀಟಿ ಮತ್ತು ಲಕೋಟೆಯನ್ನು ಅಂಚೆ ಇಲಾಖೆಯು ಹೊರತಂದಿದೆ. ಪ್ರಾಂತೀಯ ಸಮ್ಮೇಳನದಲ್ಲಿ

ಪುತ್ಥಳಿಯನ್ನು ಅಂಚೆ ಚೀಟಿ ಮತ್ತು ಲಕೋಟೆಯನ್ನು ಇಲಾಖೆಯ ಉಪ ಅಧೀಕ್ಷಕ ನವೀನ್‌ಕುಮಾರ್‌ ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಆರನೇ ಪುರುಷೋತ್ಸವ ಅಂಗವಾಗಿ ಶ್ರೀ ಪುರುಷರ ಪುತ್ಥಳಿಯನ್ನು ಕೂಡ ಅನಾವರಣ ಮಾಡಲಾಯಿತು. ಶ್ರೀ ಪುರುಷರ ವಂಶಸ್ಥರದ ಪ್ರಾಂತೀಯ-3ರ ಅಧ್ಯಕ್ಷ ಡಾ.ಬಿ.ಎನ್‌. ರವೀಶ್‌ ಅವರು ಲಲಿತಾದ್ರಿಪುರದ ಕಲಾವಿದ ನಿಂಗರಾಜು ಅವರ ಮೂಲಕ ಈ ಪುತ್ಥಳಿಯನ್ನು ನಿರ್ಮಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ