ವಿಬಿ ಜಿ ರಾಮ್ ಜಿ ರಾಷ್ಟ್ರೀಯ ಯೋಜನೆ ಬಗ್ಗೆ ಜನ ಜಾಗೃತಿ, ಪಾದಯಾತ್ರೆ

KannadaprabhaNewsNetwork |  
Published : Feb 19, 2026, 02:15 AM IST
ಬಿಜೆಪಿ ಮುಖಂಡ ಬಲ್ಲಾಹುಣಿಸಿ ರಾಮಣ್ಣ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡಿ ಈ ಕಾಯ್ದೆಯನ್ನು ತೆಗೆದು ಹಾಕಲಾಗಿದೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬಿಜೆಪಿಯ ಎಲ್ಲ ಕಾರ್ಯಕರ್ತರು ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು

ತಂಬ್ರಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ರಾಷ್ಟ್ರೀಯ ಯೋಜನೆ ಬಗ್ಗೆ ಮಾಲವಿ ಗ್ರಾಪಂ ವ್ಯಾಪ್ತಿಯಲ್ಲಿ ಹಳ್ಳಿಗಳ ಜನರಿಗೆ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಬಲ್ಲಾಹುಣಿಸಿ ರಾಮಣ್ಣ, ಈ ದೇಶದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಯುಪಿಎ ಸರ್ಕಾರದಲ್ಲಿ 2005ರಲ್ಲಿ ಜಾರಿಗೆ ತರಲಾಯಿತು. ನಂತರ 2009ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಎಂದು ಮರುನಾಮಕರಣ ಮಾಡಿದರು. ಈ ಕಾಯ್ದೆ ಜಾರಿಯಾದಾಗ ಪ್ರತಿಯೊಬ್ಬರಿಗೂ ₹170 ಕೂಲಿ ಇತ್ತು. ಈಗ ₹370ಗೆ ಏರಿಕೆ ಮಾಡಿದ್ದಾರೆ. ಮೊದಲು 100 ದಿನಗಳ ಕೆಲಸ ಇತ್ತು. ಈಗ 125 ದಿನಗಳ ವರೆಗೆ ಹೆಚ್ಚಳ ಮಾಡಲಾಗಿದೆ. ಇದರ ಹೆಸರನ್ನು ವಿಕಸಿತ ಭಾರತ ರೋಜಗಾರ ಯೋಜನೆ ಎಂದು ಮರುನಾಮಕರಣ ಮಾಡಿ ಹೊಸ ಸ್ವರೂಪ ನೀಡಿ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದೆ. ಇದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡಿ ಈ ಕಾಯ್ದೆಯನ್ನು ತೆಗೆದು ಹಾಕಲಾಗಿದೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬಿಜೆಪಿಯ ಎಲ್ಲ ಕಾರ್ಯಕರ್ತರು ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ, ಎಸ್.ಕೃಷ್ಣ ನಾಯಕ್, ನರಗಲ್ ಕೊಟ್ರೇಶ್, ಕೆ.ಎಸ್. ಪ್ರಕಾಶ್, ಜೋಗಿ ಹನುಮಂತಪ್ಪ, ಕನಕಪ್ಪ ವಿ., ನರೇಗಲ್ ಮಲ್ಲಿಕಾರ್ಜುನ್, ಕೊಟ್ರೇಶ್, ಹನುಮಂತಪ್ಪ ಕೊಗಲಿ, ನರಗಲ್ ಬಸವರಾಜ್, ದುರ್ಗಪ್ಪ, ಮರಿಯಪ್ಪ, ಪ್ರಕಾಶ್, ಭರ್ಮಪ್ಪ, ಮಂಜುನಾಥ್, ಭೀಮಪ್ಪ ಹಾಗೂ ಕಾರ್ಯಕರ್ತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದಲಾವಣೆಗೆ ತಕ್ಕಂತೆ ಕೈಗಾರಿಕೆ ವೇಗ ಹೆಚ್ಚಿಸಿಕೊಳ್ಳಿ: ವಿಜಯ ಸಂಕೇಶ್ವರ
ಶೀಘ್ರ ಬೆಳ್ಳೂಡಿ–ರಾಮತೀರ್ಥ ಸೇತುವೆ ಪುನರ್ ನಿರ್ಮಾಣ: ಶಾಸಕ ಬಿ.ಪಿ.ಹರೀಶ್