ಹನೂರಿನಲ್ಲಿ ಕೆಶಿಪ್‌ ರಸ್ತೆ ಕಾಮಗಾರಿ ಪೂರ್ಣಗೊ‍‍ಳಿಸಲು ಸಾರ್ವಜನಿಕರ ಆಗ್ರಹ

KannadaprabhaNewsNetwork |  
Published : Nov 18, 2024, 12:02 AM IST
ಕೆಶಿಫ್  ರಸ್ತೆ ಕಾಮಗಾರಿ ವಿಳಂಬ ಶೀಘ್ರ  ಪೂರ್ಣಗೊ‍‍ಳಿಸಲು ಆಗ್ರಹ | Kannada Prabha

ಸಾರಾಂಶ

ಕೆಶಿಪ್‌ ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಶೀಘ್ರ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ಕುಂಟುತ್ತ ಸಾಗಿದ 100 ಮೀಟರ್ ರಸ್ತೆ ಕಾಮಗಾರಿ । ನಿಗದಿತ ಸಮಯಕ್ಕೆ ಮುಗಿಸಲು ಕ್ರಮಕ್ಕೆ ಒತ್ತಾಯ

ಕನ್ನಡಪ್ರಭ ವಾರ್ತೆ ಹನೂರು

ಕೆಶಿಪ್‌ ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಶೀಘ್ರ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ಹನೂರು ಪಟ್ಟಣದಲ್ಲಿ ಬಹು ನಿರೀಕ್ಷಿತ ಕೆಶಿಫ್ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಪಟ್ಟಣದ ಹೃದಯ ಭಾಗವಾದ ಸರ್ಕಲ್‌ನಿಂದ ತಟ್ಟೆ ಹಳ್ಳ ಸೇತುವೆ ಮುಂಭಾಗದ 100 ಮೀಟರ್ ರಸ್ತೆ ಸಹ ಕಾಮಗಾರಿ ಕುಂಟುತ್ತ ಸಾಗಿದೆ ಹೀಗಾಗಿ ಸಾರ್ವಜನಿಕರು ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಸರ್ಕಲ್ ಕಾಮಗಾರಿ ಅಪೂರ್ಣ:

ಪಟ್ಟಣದ ಹೃದಯ ಭಾಗದಲ್ಲಿರುವ ಬಹುನಿರೀಕ್ಷಿತ ಕಾಮಗಾರಿ ಸರ್ಕಲ್‌ನಲ್ಲಿ ಅಪೂರ್ಣಗೊಂಡಿದ್ದು ಕೆಶಿಫ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಪಟ್ಟಣದ ನಿವಾಸಿಗಳು ಪರದಾಡುವ ಸ್ಥಿತಿ ಇದೆ. ಜಲ್ಲಿಕಲ್ಲು, ಮೆಟ್ಲಿಂಗ್ ಮಾಡುವ ಮೂಲಕ ಡಾಂಬರೀಕರಣ ಮಾಡದೆ ಸರ್ಕಲ್‌ನಲ್ಲೂ ಸಹ ಅರ್ಧಂಬರ್ಧ ಕಾಮಗಾರಿ ಮಾಡುವ ಮೂಲಕ ವಿಳಂಬ ಧೋರಣೆ ಅನುಸರಿಸುತ್ತಿರುವ ಕೆಶಿಫ್ ರಸ್ತೆ ಅಭಿವೃದ್ಧಿ ಕಾಮಗಾರಿ ಅಧಿಕಾರಿಗಳಿಗೆ ಸಂಬಂಧಪಟ್ಟ ಸೂಕ್ತ ನಿರ್ದೇಶನ ನೀಡುವ ಮೂಲಕ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಪಟ್ಟಣದ ನಿವಾಸಿಗಳು ಆಗ್ರಹಿಸಿದ್ದಾರೆ.

ಸಂಚಾರಕ್ಕೆ ತೊಡಕು:

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ತಮಿಳುನಾಡು ಹಾಗೂ ಅರ್ಜಿಪುರ ರಾಮಪುರ ಮಲೆ ಕೌದಳ್ಳಿ ಮಲೆ ಮಾದೇಶ್ವರ ಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳುವ ಪ್ರಮುಖ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ವಿಳಂಬದಿಂದ ವಾಹನ ಸವಾರರಿಗೆ ರಸ್ತೆಯಲ್ಲಿ ಸಂಚರಿಸಲು ತೊಡಕುಂಟಾಗಿದೆ.

ಅಂಬೇಡ್ಕರ್ ಪ್ರತಿಮೆ ತೆರವಿನಿಂದ ಕಾಮಗಾರಿ ವಿಳಂಬ:

ಪಟ್ಟಣದ ಮುಖ್ಯರಸ್ತೆಯಲ್ಲಿ ಪೊಲೀಸ್ ಠಾಣೆ ಮುಂಭಾಗ ಉದ್ದೇಶಿಸಲಾಗಿರುವ ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿ ಹಲವಾರು ತಿಂಗಳು ಕಳೆದಿವೆ. ಜತೆಗೆ ಪ್ರತಿಮೆ ನಿರ್ಮಾಣ ಸ್ಥಳದಲ್ಲಿ ಗುಂಡಿ ತೆಗೆದು ವಾರ ಕಳೆದರೂ ಇನ್ನು ಸಹ ಕೆಶಿಫ್ ರಸ್ತೆ ಅಭಿವೃದ್ಧಿ ಕಾಮಗಾರಿ ಅಧಿಕಾರಿಗಳು ಕಾಮಗಾರಿಯನ್ನು ಪೂರ್ಣಗೊಳಿಸಲು ವಿಳಂಬ ಧೋರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕಳೆದ ಐದು ವರ್ಷಗಳಿಂದ ಕುಂಟುತ್ತ ಸಾಗಿರುವ ಕೆಶಿಫ್ ರಸ್ತೆ ಕಾಮಗಾರಿ ಮಧುವನಹಳ್ಳಿ ಗ್ರಾಮದಿಂದ ಪಟ್ಟಣದವರೆಗೆ ಶೇಕಡ 90ರಷ್ಟು ಮುಗಿದಿದ್ದು 100 ಪಟ್ಟಣದಲ್ಲಿ ಮಾತ್ರ ಕಾಮಗಾರಿಗಳು ವಿಳಂಬ ಆಗುತ್ತಿವೆ. ಕೇಂದ್ರ ಸ್ಥಾನದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಜಿಲ್ಲಾಡಳಿತ ಜನಪ್ರತಿನಿಧಿಗಳು ಕೇಸಿಎಫ್ ರಸ್ತೆ ಅಭಿವೃದ್ಧಿ ಕಾಮಗಾರಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು.

ಶಿವರಾಜ್, ಹನೂರು ನಿವಾಸಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ