ಡೆಂಘೀ ಜ್ವರ ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ: ಡಾ.ಎಂ.ಎನ್.ಆಶಾಲತಾ

KannadaprabhaNewsNetwork |  
Published : May 30, 2026, 01:45 AM IST
28ಕೆಎಂಎನ್ ಡಿ27 | Kannada Prabha

ಸಾರಾಂಶ

ಇದಕ್ಕೂ ಮುನ್ನ ಪಟ್ಟಣದ ನ್ಯೂ ಆಕ್ಸ್ ಫರ್ಡ್ ಶಾಲಾ ಆವರಣದಲ್ಲಿ ಹೆಣ್ಣು ಮಕ್ಕಳ ಗರ್ಭಕಂಠದ ಕ್ಯಾನ್ಸರ್ ತಡೆಗಾಗಿ ಸರ್ಕಾರದಿಂದ ಉಚಿತವಾಗಿ 14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿರುವ ಎಚ್‌ಪಿವಿ ಲಸಿಕಾ ಅಭಿಯಾನ ಕುರಿತಂತೆ ಜಾಗೃತಿ ಜಾಥಾವನ್ನು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.

ಶ್ರೀರಂಗಪಟ್ಟಣ: ಮಾರಣಾಂತಿಕ ಡೆಂಘೀ ಜ್ವರ ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ ಎಂ.ಎನ್. ಆಶಾಲತಾ ಹೇಳಿದರು.

ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಡೆಂಘೀ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ವಾರಕ್ಕೆ ಎರಡು ಬಾರಿ ಶಾಲಾ ವಿದ್ಯಾರ್ಥಿಗಳು ತಪ್ಪದೆ ತಮ್ಮ ತಮ್ಮ ಮನೆಯಲ್ಲಿ ಉಪಯೋಗಿಸುವ ನೀರು ಸಂಗ್ರಹಣೆ ಮಾಡುವ ಸಿಮೆಂಟ್ ತೊಟ್ಟಿ, ಪ್ಲಾಸ್ಟಿಕ್ ಡ್ರಮ್ಮುಗಳನ್ನು ಸ್ವಚ್ಛಗೊಳಿಸಬೇಕು ಎಂದರು.

ಅಲ್ಲದೆ ಮನೆ ಸುತ್ತಮುತ್ತ ಉಪಯೋಗಿಸದೆ ಇರುವ ಘನತ್ಯಾಜ್ಯ ವಸ್ತುಗಳಾದ ಒಡೆದ ಬಾಟಲಿಗಳು, ಬಳಸದೆ ಇರುವ ವಾಹನದ ಟೈರ್‌ಗಳು, ಎಳನೀರು ಚಿಪ್ಪುಗಳು, ಒರಳಕಲ್ಲು ಸೇರಿದಂತೆ ಇತರೆ ವಸ್ತುಗಳಲ್ಲಿ ನೀರು ನಿಲ್ಲದಂತೆ ಪರೀಕ್ಷಿಸಿ ನೋಡಿಕೊಳ್ಳುವಂತೆ ಕಿವಿಮಾತು ಹೇಳಿದರು.

ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎಂ.ಶ್ರೀಧರ್ ಮಾತನಾಡಿದರು. ಇದಕ್ಕೂ ಮುನ್ನ ಪಟ್ಟಣದ ನ್ಯೂ ಆಕ್ಸ್ ಫರ್ಡ್ ಶಾಲಾ ಆವರಣದಲ್ಲಿ ಹೆಣ್ಣು ಮಕ್ಕಳ ಗರ್ಭಕಂಠದ ಕ್ಯಾನ್ಸರ್ ತಡೆಗಾಗಿ ಸರ್ಕಾರದಿಂದ ಉಚಿತವಾಗಿ 14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿರುವ ಎಚ್‌ಪಿವಿ ಲಸಿಕಾ ಅಭಿಯಾನ ಕುರಿತಂತೆ ಜಾಗೃತಿ ಜಾಥಾವನ್ನು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.

ಈ ವೇಳೆ ಶಾಲಾ ಮುಖ್ಯ ಶಿಕ್ಷಕಿ ಐಶ್ವರ್ಯ, ಶಿಕ್ಷಕರಾದ ಅರುಧಂತಿ, ರಾಹುಲ್, ಮೆರಿಲ್, ಗೋವಿಂದಯ್ಯ, ಕಾವ್ಯ, ವೈಶಾಲಿ, ಪವಿತ್ರ, ಸಲ್ಮಾ, ಚರಿತ್ರಾ, ಸೌಂದರ್ಯ, ಸುಸ್ಮಿತಾ, ಪ್ರೀತಿ, ವಾಣಿ, ಅಹಲ್ಯಾ, ಆರೋಗ್ಯ ಇಲಾಖೆ ರೋಗಲಕ್ಷಣ ಶಾಸ್ತ್ರಜ್ಞೆ ಮೇಘನಾ, ಸಾರ್ವಜನಿಕ ಆಸ್ಪತ್ರೆ ಆಯುಷ್ಯ ವೈದ್ಯಾಧಿಕಾರಿ ಡಾ.ಮೃಣಾಲಿನಿ, ತಾಲೂಕು ಆರೋಗ್ಯ ಮೇಲ್ವಿಚಾರಕರಾದ ಜಿ.ಮೋಹನ್, ಹೇಮಣ್ಣ ಜಿ.ಬಿ., ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಬಿ. ಮಂಗಳ, ಎಸ್.ಸಿ ವಾಣಿ, ಸ್ಮಿತಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಸ್.ಪಿ ಪಣೀಂದ್ರ, ಎಂ.ಎನ್ ಕೃಷ್ಣೇಗೌಡ, ಮೇಘನಾ ಸ್ನೇಹ, ಆಶಾ ಕಾರ್ಯಕರ್ತೆಯರಾದ ಹೇಮಾವತಿ, ಚಾಂದನಿ, ಅಶ್ವಿನಿ, ಮೀನಾ ಸೇರಿ ಆಕ್ಸ್ ಫರ್ಡ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಿಷ್ಠ ವೇತನ ಕರಡು ಅಧಿಸೂಚನೆಗೆ ವಿರೋಧ
ಮನುಷ್ಯನ ಸಂಸ್ಕಾರ ತಿದ್ದಿ ತೀಡಲು ಪುಸ್ತಕ ಸಹಕಾರಿ: ಮ.ನಿ.ಪ್ರ. ಮಹಾಂತ ಸ್ವಾಮೀಜಿ