ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು. ಸಾರ್ವಜನಿಕರು ತಮ್ಮ ದೂರುಗಳಿದ್ದರೂ ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಆಗಮಿಸಿ ದೂರುಗಳನ್ನು ಸ್ವೀಕಾರ ಮಾಡಲಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಆಡಳಿತವನ್ನು ಚುರುಕುಗೊಳಿಸಿ ಜನಸಾಮಾನ್ಯರಿಗೂ ಇಲಾಖೆ ಕಾರ್ಯಕ್ರಮ ತಲುಪಿಸುವ ಉದ್ದೇಶದಿಂದ ಸರ್ಕಾರ ಪ್ರಜಾಸೇವಾ ಇಲಾಖೆ ಸ್ಥಾಪಿಸಿದೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.
ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಪ್ರಜಾಸೇವೆ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿ, ಬಾಗಿಲಿಗೆ ಬಂತು ಸರ್ಕಾರ- ಸೇವೆಗೆ ಇರಲಿ ಸಹಕಾರ ತತ್ವದಡಿ ಸರ್ಕಾರ ಕೆಲಸ ಮಾಡುತ್ತಿದೆ. ಇಂದು 32 ಅರ್ಜಿಗಳು ಬಂದಿವೆ. ಅವುಗಳನ್ನು ಸಮರ್ಪಕವಾಗಿ ಒಂದು ವಾರದಲ್ಲಿ ವಿಲೇಮಾಡಬೇಕು. ಯಾವುದೇ ವಿಳಂಬಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು. ಸಾರ್ವಜನಿಕರು ತಮ್ಮ ದೂರುಗಳಿದ್ದರೂ ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಆಗಮಿಸಿ ದೂರುಗಳನ್ನು ಸ್ವೀಕಾರ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮ ಯಶಸ್ಸಿಗೆ ಕೆಳ ಹಂತದ ಅಧಿಕಾರಿಗಳು ಶ್ರಮಿಸಿ ಈ ಬಗ್ಗೆ ಜನರಿಗೆ ಸೂಕ್ತ ತಿಳಿವಳಿಕೆ ನೀಡುವ ಮೂಲಕ ವಿಳಂಬಕ್ಕೆ ಅವಕಾಶವಿಲ್ಲದಂತೆ ಕೆಲಸ ಮಾಡಿ ಪ್ರಜಾಸೇವಾ ಇಲಾಖೆ ಯಶಸ್ವಿಗೊಳಿಸಬೇಕು ಎಂದರು.
ತಹಸೀಲ್ದಾರ್ ಜಿ.ಎಸ್.ಶ್ರೇಯಸ್ ಮಾತನಾಡಿ, ಗ್ರಾಮೀಣ ಪ್ರದೇಶದ ಶ್ರೀಸಾಮಾನ್ಯರ ಅಹವಾಲು ಆಲಿಸಿ ಸಮಸ್ಯೆಗಳಿಗೆ ನೇರವಾಗಿ ಪರಿಹಾರ ನೀಡಲು ಆರಂಭಿಸಿರುವ ಪ್ರಜಾ ಸೇವಾ ಆಂದೋಲನವನ್ನು ಗ್ರಾಮೀಣ ಪ್ರದೇಶದ ರೈತ ಬಾಂಧವರು ಹಾಗೂ ಶ್ರೀಸಾಮಾನ್ಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಸುಷ್ಮ. ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ತಾಪಂ ಯೋಜನಾಧಿಕಾರಿ ಶ್ರೀನಿವಾಸ್, ಅರಣ್ಯ ಇಲಾಖೆಯ ಆರ್.ಎಫ್.ಓ ಅನಿತ. ಆರ್.ಐ.ಚಂದ್ರಕಲಾ. ಸೇರಿದಂತೆ. ತಾಲೂಕಿನ ವಿವಿಧ ಅಧಿಕಾರಿಗಳು ಹಾಜರಿದ್ದರು.ಸೆ.೭ ರಂದು ೨೯ನೇ ಪಟ್ಟಾಭಿಷೇಕ ಮಹೋತ್ಸವಕನ್ನಡಪ್ರಭ ವಾರ್ತೆ ಮಂಡ್ಯಶ್ರೀಅನಂತನಾಥಸ್ವಾಮಿ ದಿಗಂಬರ ಜೈನ ಸಮಾಜದಿಂದ ಪರಮಪೂಜ್ಯ ಶ್ರೀಭಟ್ಟಾರಕಭೂಷಣ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ೨೯ನೇ ಪಟ್ಟಾಭಿಷೇಕ ಮಹೋತ್ಸವನ್ನು ಸೆ.೯ ರಂದು ಮಂಡ್ಯ ನಗರದ ಜೈನ ಬೀದಿಯಲ್ಲಿರುವ ಶ್ರೀ ಮಹಾವೀರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜೈನ ಸಮಾಜದ ಉಪಾಧ್ಯಕ್ಷ ವಿನಯ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಮಧ್ಯಾಹ್ನ ೨.೩೦ಕ್ಕೆ ಭಟ್ಟಾರಕಭೂಷಣ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಇವರನ್ನು ನಗರದ ಹೊಳಲು ವೃತ್ತದಿಂದ ಸ್ವಾಗತಿಸಿ ವಿವಿಧ ವಾದ್ಯ-ವೃಂದದೊಂದಿಗೆ ಮೆರವಣಿಗೆ ಮೂಲಕ ಬಸದಿಗೆ ಕರೆತರಲಾಗುವುದು. ನಂತರ ಅಭಿನಂದನಾ ಕಾರ್ಯಕ್ರಮ, ಅಷ್ಠವಿದಾರ್ಜನೆ, ಶಾಸ್ತ್ರದಾನ, ವಸ್ತ್ರದಾನ ಹಾಗೂ ನೆನಪಿನ ಕಾಣಿಕೆ ಸಮರ್ಪಣೆ ಹಾಗೂ ಪಾದಪೂಜೆ ಕಾರ್ಯಕ್ರಮ ನೆರವೇರಲಿವೆ ಎಂದು ತಿಳಿಸಿದ್ದಾರೆ.ಕನಕಗಿರಿ ಕ್ಷೇತ್ರದ ಭಟ್ಟಾರಕ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಆರತಿಪುರ ಕ್ಷೇತ್ರದ ಸಿದ್ಧಂತಕೀರ್ತಿ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಶ್ರವಣಬೆಳಗೊಳದ ಶ್ರೀಮದ್ ಅಭಿನವ ಚಾರುಕೀರ್ತಿ, ಘನ ಉಪಸ್ಥಿತರಿರುವರು. ಜಿಲ್ಲಾಧಿಕಾರಿ ಡಾ.ಕುಮಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮೈಸೂರು ಆಚರ್ಯ ಗುರುಕುಲ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಪಿ.ಮೋಹನ ಕುಮಾರ ಶಾಸ್ತ್ರಿ, ದಕ್ಷಿಣ ಭಾರತ ದಿಗಂಬರ್ ಜೈನ ಅರ್ಚಕ ಸಂಘದ ಅಧ್ಯಕ್ಷ ಎಸ್.ಎಂ.ಸನ್ಮತಿ ಕುಮಾರ ಶಾಸ್ತ್ರಿ ವಿಶೇಷ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.