ಪ್ರಧಾನಿ ಕಾರ್ಯವೈಖರಿಗೆ ಹೆಚ್ಚಿದ ಜನಬೆಂಬಲ: ಉಮೇಶಗೌಡ ಪಾಟೀಲ

KannadaprabhaNewsNetwork |  
Published : May 05, 2026, 02:30 AM IST
ಬಿಜೆಪಿ ಕಾರ್ಯಕರ್ತರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. | Kannada Prabha

ಸಾರಾಂಶ

ಪಶ್ಚಿಮ ಬಂಗಾಳ ಬಾಂಗ್ಲಾ ವಲಸಿಗರಿಂದ ಉಸಿರುಗಟ್ಟಿದ ವಾತಾವರಣದಲ್ಲಿ ಸಿಲುಕಿತ್ತು. ಕೊಲೆ ಸುಲಿಗೆ ಹಿಂಸಾತ್ಮಕ ಘಟನೆಗಳಲ್ಲಿಯೇ ಜೀವನ ಕಳೆಯುತ್ತಿದ್ದ ಅಲ್ಲಿನ ಹಿಂದೂ ನಿವಾಸಿಗಳು ಬಿಜೆಪಿ ಗೆಲುವಿನಿಂದ ಆನಂದ ಪಡುತ್ತಿದ್ದಾರೆ.

ನರಗುಂದ: ದೇಶದ 22 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದಲ್ಲಿ ಆಡಳಿತ ನಡೆಸುತ್ತಿದೆ. ನರೇಂದ್ರ ಮೋದಿಜಿ ಆಡಳಿತ ವೈಖರಿ ಪಂಚರಾಜ್ಯಗಳ ಚುನಾವಣೆಯಲ್ಲಿ ಜಯ ಸಾಧಿಸುವಂತೆ ಮಾಡಿದೆ. ಅಧಿಕಾರಕ್ಕಾಗಿ ಬಿಜೆಪಿ ಆಸೆಪಟ್ಟಿಲ್ಲ. ಸರ್ವರನ್ನು ಸ್ಪರ್ಶಿಸಿ, ಅವರೆಲ್ಲರನ್ನೂ ರಕ್ಷಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ. ಪಶ್ಚಿಮ ಬಂಗಾಳ ಗೆಲುವು ದೇಶದ ಹಿಂದೂಗಳಿಗೆ ಖುಷಿ ತಂದಿದೆ ಎಂದು ಬಿಜೆಪಿ ಮುಖಂಡ ಉಮೇಶಗೌಡ ಪಾಟೀಲ ತಿಳಿಸಿದರು.

ಸೋಮವಾರ ಪಟ್ಟಣದ ಶಿವಾಜಿ ವೃತ್ತದಲ್ಲಿ ಪಂಚ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಮಾತನಾಡಿ, ಪಶ್ಚಿಮ ಬಂಗಾಳ ಬಾಂಗ್ಲಾ ವಲಸಿಗರಿಂದ ಉಸಿರುಗಟ್ಟಿದ ವಾತಾವರಣದಲ್ಲಿ ಸಿಲುಕಿತ್ತು. ಕೊಲೆ ಸುಲಿಗೆ ಹಿಂಸಾತ್ಮಕ ಘಟನೆಗಳಲ್ಲಿಯೇ ಜೀವನ ಕಳೆಯುತ್ತಿದ್ದ ಅಲ್ಲಿನ ಹಿಂದೂ ನಿವಾಸಿಗಳು ಬಿಜೆಪಿ ಗೆಲುವಿನಿಂದ ಆನಂದ ಪಡುತ್ತಿದ್ದಾರೆ ಎಂದರು.

ವಸಂತ ಜೋಗಣ್ಣವರ ಮಾತನಾಡಿ, ಬಂಗಾಳ ರಾಜ್ಯದ ಜನರನ್ನು ವಲಸಿಗರಿಂದ ರಕ್ಷಣೆ ಮಾಡುತ್ತೇವೆ ಎಂಬ ಭರವಸೆಯನ್ನು ಮೋದಿಜಿ ಹಾಗೂ ಅಮಿತ್ ಶಾ ನೀಡಿದ್ದರಿಂದ ಅಲ್ಲಿನ ಜನತೆ ರಾಜ್ಯವನ್ನು ಅವರ ಮಡಿಲಿಗೆ ಹಾಕಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತ್ತವಾಡ, ಮಲ್ಲಪ್ಪ ಮೇಟಿ, ಪ್ರಕಾಶಗೌಡ ತಿರಕನಗೌಡ್ರ, ಮಂಜು ಆನೇಗುಂದಿ, ಎಸ್.ಆರ್. ಪಾಟೀಲ, ಪ್ರವೀಣ ಅಳಗವಾಡಿ, ಸಂಗನಗೌಡ ಪಾಟೀಲ, ನವೀನಗೌಡ ಪಾಟೀಲ, ಮಂಜು ಮೆಣಸಗಿ, ಹಸನ ನವದಿ, ಬಸಪ್ಪ ಮಳಗಿ, ಸಿದ್ದೇಶ ಹೂಗಾರ, ಸಂತೋ಼ಷ ಹಂಚಿನಾಳ, ಕಿರಣ ಮುಧೋಳೆ, ಪ್ರವೀಣ ವಡ್ಡರ, ಶಿವು ದಲಭಂಜನ ಸೇರಿದಂತೆ ಮುಂತಾದವರು ಇದ್ದರು.ಇಂದು ಕಾಂಗ್ರೆಸ್ ವತಿಯಿಂದ ವಿಜಯೋತ್ಸವ

ಗದಗ: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಹಾಗೂ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿದ ಹಿನ್ನೆಲೆ ಶಹರ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ವಿಜಯೋತ್ಸವವನ್ನು ಮೇ 5ರಂದು ಬೆಳಗ್ಗೆ 10ಕ್ಕೆ ನಗರದ ಹುಯಿಲಗೋಳ ನಾರಾಯಣರಾವ ವೃತ್ತ(ಟಾಂಗಾ ಕೂಟ)ದಲ್ಲಿ ಆಚರಿಸಲಿದೆ.ಕಾಂಗ್ರೆಸ್ ಪಕ್ಷದ ಹಿರಿಯರು, ಪ್ರಮುಖರು ಸದಸ್ಯರು, ಅಭಿಮಾನಿಗಳು ಪಾಲ್ಗೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ, ಮಂಗಳಸೂತ್ರ ತೆಗಿಸುವುದು ನಿಲ್ಲಲಿ
ಫಸಲ್ ಬಿಮಾ ಯೋಜನೆಯಲ್ಲಿ ಭಾರೀ ಅಕ್ರಮ: ಆರೋಪ