ಸರ್ಕಾರದ ಯೋಜನೆಗಳು ಸದ್ಬಳಕೆಯಾಗಲಿ: ಸಚಿವ ಡಾ. ಎಚ್.ಕೆ. ಪಾಟೀಲ

KannadaprabhaNewsNetwork |  
Published : May 05, 2026, 02:15 AM IST
ಮುಳಗುಂದ ಪುರದ ಓಣಿಯಲ್ಲಿ ಅಂದಾಜು ₹20 ಲಕ್ಷ ವೆಚ್ಚದಲ್ಲಿ ಬಸವೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಪಟ್ಟಣದಲ್ಲಿ 2X20 ಎಂವಿಎ ಸಾಮರ್ಥ್ಯದ 110/11 ಕೆವಿ ವಿದ್ಯುತ್‌ ವಿತರಣಾ ಕೇಂದ್ರ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಮುಳಗುಂದ: ಪಟ್ಟಣದ ಪುರದ ಓಣಿಯಲ್ಲಿ ಅಂದಾಜು ₹20 ಲಕ್ಷ ವೆಚ್ಚದಲ್ಲಿ ಬಸವೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಪಟ್ಟಣದಲ್ಲಿ 2X20 ಎಂವಿಎ ಸಾಮರ್ಥ್ಯದ 110/11 ಕೆವಿ ವಿದ್ಯುತ್‌ ವಿತರಣಾ ಕೇಂದ್ರ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದು, ಅವುಗಳ ಸದುಪಯೋಗ ಸರಿಯಾಗಿ ನಡೆಯಲು ಸಮುದಾಯದ ಸಹಕಾರ ಪ್ರಮುಖವಾಗಿದೆ. ಅದೇ ರೀತಿ ಎಲ್ಲ ಕಾಮಗಾರಿಗಳು ಅತ್ಯಂತ ಗುಣಮಟ್ಟದಿಂದ ಕೂಡಿರುತ್ತವೆ ಎಂಬ ವಿಶ್ವಾಸವೂ ಇದೆ ಎಂದರು.

ಪಟ್ಟಣದ ಜನತೆಯೇ ಬಹುದಿನಗಳ ಬೇಡಿಕೆಯಾದ ವಿದ್ಯುತ್‌ ವಿತರಣಾ ಕೇಂದ್ರ ನಿರ್ಮಾಣಕ್ಕೆ ಸಚಿವ ಎಚ್‌.ಕೆ. ಪಾಟೀಲರ ನಿರಂತರ ಪ್ರಯತ್ನ ಸಾಕಾರಗೊಂಡಿರುವುದು ನಿಜಕ್ಕೂ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಸಂತಸ ನೀಡಿದೆ. ಹಾಗೇ ಪಟ್ಟಣದಲ್ಲಿ ಒಂದೇ ದಿನ ಹಲವು ಕಾಮಗಾರಿಗಳಿಗೆ ಚಾಲನೆ ದೊರೆತಿರುವುದು ಜನರಲ್ಲಿ ಹರ್ಷದ ವಾತಾವರಣ ಮೂಡಿಸಿದೆ ಎಂದರು.

ಈ ವೇಳೆ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮಪೀರ್ ಎಸ್. ಖಾದ್ರಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಹಿರಿಯರಾದ ಶಿವಣ್ಣ ನೀಲಗುಂದ, ಎಂ.ಡಿ. ಬಟ್ಟೂರ, ವಿಜಯ ನೀಲಗುಂದ, ಇಮ್ಮಣ್ಣ ಚವಳಿಕಾಯಿ, ಎನ್‌.ಆರ್‌. ದೇಶಪಾಂಡೆ, ಅಶೋಕ ಹುಣಸಿಮರದ, ಅಜ್ಜಪ್ಪ ಹುಗ್ಗೇಣ್ಣವರ, ಬಸವರಾಜ ಬಾತಾಖಾನಿ, ಬಸವರಾಜ ಬಡ್ನಿ, ಮನಸ್ಸೂರ ಹಣಗಿ, ಕೆ.ಎಲ್‌. ಕರಿಗೌಡರ, ಮಹಾಂತಪ್ಪ ನೀಲಗುಂದ, ಹಮ್ಮೀದ ಮುಜಾವರ ಪ್ರವಾಸೋದ್ಯಮ ಇಲಾಖೆಯ ಕೊಟ್ರೇಶ ವಿಭೂತಿ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಸೇರಿದಂತೆ ಅಧಿಕಾರಿಗಳು, ಪಪಂ ಮಾಜಿ ಸದಸ್ಯರು, ಪುರದ ಬಸವೇಶ್ವರ ಯುವಕ ಮಂಡಳ ಸದಸ್ಯರು ಇದ್ದರು. ಕಡಲೆ ಖರೀದಿ ಅವಧಿ ವಿಸ್ತರಣೆ ಮಾಡಿ: ಸಿ.ಸಿ. ಪಾಟೀಲ

ನರಗುಂದ: 2025- 26ನೇ ಸಾಲಿನ ಸರ್ಕಾರ ದ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿನ ಕಡಲೆ ಖರೀದಿ ಅವಧಿ ವಿಸ್ತರಣೆ ಮಾಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಂಗಾರು ಹಂಗಾಮಿನ ಕಡಲೆ ಖರೀದಿಗಾಗಿ ಜಿಲ್ಲಾದ್ಯಂತ 72 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಈ ವರೆಗೆ ಒಟ್ಟು 19133 ಜನ ರೈತರು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಈವರೆಗೆ ಒಟ್ಟು 15510 ಜನ ರೈತರು ಕಡಲೆ ಮಾರಾಟ ಮಾಡಿದ್ದಾರೆ. ಇನ್ನೂ 3623 ರೈತರು ಕಡಲೆ ಮಾರಾಟ ಮಾಡಬೇಕಾಗಿದೆ. ಆದೇಶದಲ್ಲಿ ಸೂಚಿಸಿರುವ ಷರತ್ತುಗಳನ್ವಯ ಕಡಲೆ ನೋಂದಣಿ ಮತ್ತು ಖರೀದಿ 90 ದಿನಗಳವರೆ ಕಾಲಾವಧಿ ನಿಗದಿಪಡಿಸಲಾಗಿತ್ತು. ನಾಪೇಡ್ ಅವರಿಂದ ಖಾಲಿ ಗೋಣಿ ಚೀಲ ಮತ್ತು ಕ್ಯೂ ಆರ್ ಕೋಡ್ ನಿಗದಿತ ಸಮಯಕ್ಕೆ ಬಾರದೇ ಇರುವುದರಿಂದ ಖರೀದಿ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ 2025- 26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈತರ ಹಿತದೃಷ್ಟಿಯಿಂದ ಈಗಾಗಲೇ ನೋಂದಣಿ ಆಗಿರುವ ರೈತರ ಕಡಲೆ ಖರೀದಿ ಕಾಲಾವಧಿ ವಿಸ್ತರಿಸಲು ಜಿಲ್ಲಾಧಿಕಾರಿಗಳ ಮೂಲಕ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪಚುನಾವಣೆಯಲ್ಲಿ ಗೆಲುವು, ಕೈ ಕಾರ್ಯಕರ್ತರಿಂದ ವಿಜಯೋತ್ಸವ
ಚುನಾವಣೆಯಲ್ಲಿ ಭರ್ಜರಿ ಗೆಲುವು, ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ