ಹಾವೇರಿ: ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸೋಮವಾರ ನಗರದ ಎಂ.ಜಿ.ವೃತ್ತದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಪಕ್ಷ ಇಂದು ದಾಖಲೆ ನಿರ್ಮಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ಕಾರ್ಯವೈಖರಿಗೆ ಜನ ಬೆಂಬಲ ಸೂಚಿಸಿ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮತ ನೀಡಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಮತಾ ಬ್ಯಾನರ್ಜಿ ಹಲವು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರರಿಗೆ ಸಹಾಯ, ಸಹಕಾರ ನೀಡುವ ಮೂಲಕ ಪಶ್ಚಿಮ ಬಂಗಾಳದಲ್ಲಿ ವಾಸಿಸಲು ಅವಕಾಶ ನೀಡಿ ದೇಶದ ಭದ್ರತೆಗೆ ಆತಂಕ ಸೃಷ್ಠಿಸಿದ್ದರು. 2026ರ ಚುನಾವಣೆಯಲ್ಲಿ ಮತದಾರರು ದೇಶದ ಪರವಾಗಿ ಮತ ಚಲಾಯಿಸುವ ಮೂಲಕ ಮಮತಾ ಬ್ಯಾನರ್ಜಿಗೆ ತಕ್ಕ ಉತ್ತರ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿ ದೇಶದ ಜನರಿಗೆ ಇನ್ನೂ ಅಧಿಕ ಸೇವೆ ಸಲ್ಲಿಸುವ ಮೂಲಕ ಇನ್ನೂ ಹಲವು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಪಕ್ಷ ಇಂದು ವಿಶ್ವದ ಬಲಿಷ್ಠ ಪಕ್ಷವಾಗಿ ಬೆಳದಿದೆ. ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಬಹುಮತ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ದುರಾಡಳಿತಕ್ಕೆ ಬೇಸತ್ತ ಜನರು ರಾಷ್ಟ್ರ ಸುರಕ್ಷತೆಯ ದೃಷ್ಠಿಯಿಂದ ಬಿಜೆಪಿಗೆ ಮತ ನೀಡಿದ್ದಾರೆ. ಅಲ್ಲದೇ ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ಬಹುಮತ ಪಡೆದಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚು ಮತಗಳನ್ನು ಗಳಿಸಲು ಸಫಲವಾಗಿದೆ ಎಂದರು.ಬಿಜೆಪಿ ಇಂದು ಬಡವರ ಹಾಗೂ ಜನಸಾಮಾನ್ಯರ ಪಕ್ಷವಾಗಿ ಜನರ ವಿಸ್ವಾಸ ಗಳಿಸುವಲ್ಲಿ ಸಫಲವಾಗಿದೆ. ಮುಂಬರುವ ದಿನಗಳಲ್ಲಿ ದೇಶದಲ್ಲಿರುವ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಮಾಧ್ಯಮ ಪ್ರಮುಖ ವಿಜಯಕುಮಾರ ಚಿನ್ನಿಕಟ್ಟಿ, ಲತಾ ಬಡ್ನಿಮಠ, ಮಂಜುನಾಥ ಮಡಿವಾಳರ, ಗುಡ್ಡಪ್ಪ ಭರಡಿ, ನಾಗರಾಜ ಹರಿಗೋಲ, ಮಧುಕೇಶ ಹಂದ್ರಾಳ, ಕುಮಾರ ಹತ್ತಿ, ಶಂಭುಲಿAಗ ಹತ್ತಿ, ರೋಹಿಣಿ ಪಾಟೀಲ, ರಾಮಕ್ಕ ವಡ್ಡರ, ರೇಣುಕಾ ಗೌಳಿ, ನಖೀಲ್ ಡೊಗ್ಗಳಿ, ಮಂಜು ಮಲಗೋಡ, ಶ್ರೀಕಾಂತ ವಡ್ಡರ, ಭಾಗ್ಯಶ್ರೀ ಮೋರೆ, ಫಕ್ಕಿರೇಶ ಯಾದವ, ವಿ.ಬಿ.ಕುಲುಮಿ, ಸುನೀಲ ರಾಯ್ಕರ, ಸದಾನಂದ ಸುರಳಿಹಳ್ಳಿ, ಎಂ.ಎಸ್. ಪಾಟೀಲ, ಉಜನೇಶ ಮೇಟಿ, ಚಂದ್ರಶೇಖರ ಅಗಡಿ, ಪವನ ಎರೆಸೀಮಿ, ಕುಶಾಲ್ ಕನವಳ್ಳಿ, ವಿಶ್ವನಾಥ ಕಿತ್ತೂರಮಠ, ಆನಂದ ಕಲಾಲ, ಕಿರಣ ಖಂಡೆಲವಾಲ, ಮುತ್ತಣ್ಣ ಮುಷ್ಠಿ, ಯಲ್ಲಪ್ಪ ಮಡಿವಾಳರ, ಅಕ್ಕಮ ಹರ್ತಿ, ಶ್ರೀದೇವಿ ಹಿರೇಮಠ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.