ಪಿಯುಸಿ: ಫಲಿತಾಂಶ ಕುಸಿದರೂ ಉಡುಪಿ ರಾಜ್ಯಕ್ಕೆ ಪ್ರಥಮ

KannadaprabhaNewsNetwork |  
Published : Apr 09, 2025, 12:32 AM IST
ಆಸ್ತಿ | Kannada Prabha

ಸಾರಾಂಶ

ಕಳೆದ ಬಾರಿ ಜಿಲ್ಲೆ ಶೇ.96.70 ಸಾಧನೆಯೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿತ್ತು. ಈ ಬಾರಿ ಪ್ರಥಮ ಸ್ಥಾನ ಪಡೆದಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೇ ಒಟ್ಟಾರೆ ಸಾಧನೆಯಲ್ಲಿ ಶೇ.2.90 ರಷ್ಟು ಕುಸಿತವಾಗಿದೆ. ಆದರೆ ರಾಜ್ಯದ ಒಟ್ಟು ತೇರ್ಗಡೆ ಫಲಿತಾಂಶ ಶೇ.73.45ಕ್ಕೆ ಹೋಲಿಸಿದರೆ ಉಡುಪಿ ಜಿಲ್ಲೆ ಶೇ.20.45ರಷ್ಟು ಮುಂದಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ ಶೇ.93.90ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.

ಕಳೆದ ಬಾರಿ ಜಿಲ್ಲೆ ಶೇ.96.70 ಸಾಧನೆಯೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿತ್ತು. ಈ ಬಾರಿ ಪ್ರಥಮ ಸ್ಥಾನ ಪಡೆದಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೇ ಒಟ್ಟಾರೆ ಸಾಧನೆಯಲ್ಲಿ ಶೇ.2.90 ರಷ್ಟು ಕುಸಿತವಾಗಿದೆ. ಆದರೆ ರಾಜ್ಯದ ಒಟ್ಟು ತೇರ್ಗಡೆ ಫಲಿತಾಂಶ ಶೇ.73.45ಕ್ಕೆ ಹೋಲಿಸಿದರೆ ಉಡುಪಿ ಜಿಲ್ಲೆ ಶೇ.20.45ರಷ್ಟು ಮುಂದಿದೆ.

ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆ ಶೇ.97.37 ಸಾಧನೆಯೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದರೆ, ಈ ಬಾರಿ ಶೇ.93.57 ಸಾಧನೆಯೊಂದಿಗೆ ದ್ವಿತೀಯ ಸ್ಥಾನಕ್ಕಿಳಿದಿದೆ. ಒಟ್ಟಾರೆ ಪದವಿಪೂರ್ವ ಶಿಕ್ಷಣದಲ್ಲಿ ಅವಿಭಜಿತ ದ.ಕ. ಜಿಲ್ಲೆ ತಮ್ಮ ಪಾರಮ್ಯವನ್ನು ಮುಂದುವರಿಸಿದೆ.ಅಲ್ಲದೇ ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗದಲ್ಲಿ ತಲಾ ಐವರು ವಿದ್ಯಾರ್ಥಿಗಳು ಟಾಪ್‌ 10ರಲ್ಲಿ ಸ್ಥಾನ ಪಡೆದಿದ್ದಾರೆ.

10 ಮಂದಿ ಟಾಪರ್‌ಗಳು

ವಿಜ್ಞಾನ ವಿಭಾಗ

ಆಸ್ತಿ ಎಸ್. ಶೆಟ್ಟಿ (596) ಜ್ಞಾನಸುಧಾ ಕಾಲೇಜು ಕಾರ್ಕಳ

ಅಪೂರ್ವ್ ವಿ. ಕುಮಾರ್ (595) ಜ್ಞಾನಸುಧಾ ಕಾಲೇಜು ಉಡುಪಿ

ಭೂಮಿಕಾ ಆರ್. ಹೆಗ್ಡೆ (595) ಎಂ.ಜಿ.ಎಂ. ಕಾಲೇಜು ಉಡುಪಿ

ಶ್ರೀರಕ್ಷಾ ಬಿ. ನಾಯಕ್ (595) ಜ್ಞಾನಸುಧಾ ಕಾಲೇಜು ಕಾರ್ಕಳ

ವಿಶ್ವಾಸ್‌ ಅತ್ರೇಯಾ (594), ಜ್ಞಾನಸುಧಾ ಕಾಲೇಜು ಕಾರ್ಕಳವಾಣಿಜ್ಯ ವಿಭಾಗ

ಸುಧೀಕ್ಷಾ ಶೆಟ್ಟಿ (595) ಕ್ರೈಸ್ಟ್ ಕಿಂಗ್ ಪಪೂ ಕಾಲೇಜು ಕಾರ್ಕಳ

ಪ್ರಣವಿ ಎಚ್. ಸುವರ್ಣ (595) ವಿದ್ಯೋದಯ ಕಾಲೇಜು ಉಡುಪಿ

ಸಹನಾ ನಾಯಕ್ (594), ಜ್ಞಾನಸುಧಾ ಕಾಲೇಜು ಕಾರ್ಕಳ

ಸುಧಾ ತನ್ವಿ ರಾವ್ (594), ಜ್ಞಾನಸುಧಾ ಕಾಲೇಜು ಕಾರ್ಕಳ

ಅರ್ಚನಾ ಎಸ್. ಶೆಟ್ಟಿ (594) ತ್ರಿಶಾ ಪಿಯು ಕಾಲೇಜು ಕಟಪಾಡಿ

------------------

ಭೂಮಿಕಾಗೆ ವೈದ್ಯೆಯಾಗುವ ಆಸೆ

ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದಿರುವ ನಗರದ ಎಂಜಿಎಂ ಕಾಲೇಜಿನ ಭೂಮಿಕಾ ಆರ್. ಹೆಗ್ಡೆ ಮುಂದೆ ತಾನು ವೈದ್ಯೆ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ತನ್ನ ಸಾಧನೆಗೆ ಮನೆಯಲ್ಲಿ ಒತ್ತಡ ಇರಲಿಲ್ಲ, ತಾನೇ ನಿರಂತರ ಓದು ಅಭ್ಯಾಸದಿಂದ ಈ ಅಂಕ ಪಡೆದಿದ್ದೇನೆ. ಜೀವಶಾಸ್ತ್ರ ನನ್ನ ಆಸಕ್ತಿಯ ವಿಷಯ, ಅದರಲ್ಲಿ ಉತ್ತಮ ಶಿಕ್ಷಣ ಪಡೆಯಬೇಕು ಎಂದು ನಾನು ಬಳ್ಳಾರಿಯಿಂದ ಉಡುಪಿಗೆ ಬಂದು ಎಂಜಿಎಂ ಕಾಲೇಜಿಗೆ ಸೇರಿದ್ದೆ. ಇಲ್ಲಿನ ಕಾಲೇಜಿನಲ್ಲಿ ಕಲಿಕೆಗೆ ಉತ್ತಮ ವಾತಾವರಣವಿದೆ, ಪ್ರಾಧ್ಯಾಪಕರ ಉತ್ತಮ ಬೆಂಬಲ ಇತ್ತು. ಇಷ್ಟು ಅಂಕಗಳನ್ನು ನಾನು ನಿರೀಕ್ಷೆ ಮಾಡಿದ್ದೆ, ಗಣಿತದಲ್ಲಿ ಒಂದು ಅಂಕ ಕಡಿಮೆ ಆಯಿತು ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ