ಹೊನ್ನಾಳಿ: ವಿಜಯ ಕಾಲೇಜಿಗೆ ಶೇ.98 ಫಲಿತಾಂಶ

KannadaprabhaNewsNetwork |  
Published : Apr 09, 2025, 12:32 AM IST
ಹೊನ್ನಾಳಿ ಫೋಟೋ 8ಎಚ್.ಎಲ್.ಐ2ಎ.ಸಾಕ್ಷಿ 577. | Kannada Prabha

ಸಾರಾಂಶ

ಪಟ್ಟಣದ ವಿಜಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.98ರಷ್ಟು ಫಲಿತಾಂಶ ಪಡೆದಿದ್ದು, ಅವಳಿ ತಾಲೂಕಿನಲ್ಲಿ ಕಾಲೇಜು ಪ್ರಥಮ ಸ್ಥಾನ ಪಡೆಯಲು ಕಾರಣರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ವಿಜಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.98ರಷ್ಟು ಫಲಿತಾಂಶ ಪಡೆದಿದ್ದು, ಅವಳಿ ತಾಲೂಕಿನಲ್ಲಿ ಕಾಲೇಜು ಪ್ರಥಮ ಸ್ಥಾನ ಪಡೆಯಲು ಕಾರಣರಾಗಿದ್ದಾರೆ.

ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ ಸೇರಿ 177 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 57 ಅತ್ಯುನ್ನತ ಶ್ರೇಣಿ, 100 ಪ್ರಥಮ ಶ್ರೇಣಿ, 16 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, 4 ಜನ ಅನುತ್ತೀರ್ಣರಾಗಿ, ಕಾಲೇಜಿಗೆ ಶೇ.98 ಫಲಿತಾಂಶ ಲಭಿಸಿದೆ.

ವಿಜ್ಞಾನ ವಿಭಾಗದ ದಿವ್ಯ ವಿ.ಎಸ್. 600ಕ್ಕೆ 586 ಅಂಕಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ ಸಹನ ಎ.ಜಿ. 600ಕ್ಕೆ 574 ಅಂಕಗಳ ಗಳಿಸಿ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕುಗಳಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲ ವಸಂತ್ ಕುಮಾರ್ ಎಸ್. ತಿಳಿಸಿದ್ದಾರೆ.

ನೂರಕ್ಕೆ ನೂರು ಅಂಕ ಸಾಧನೆ:

100ಕ್ಕೆ 100 ಅಂಕ ಗಳಿಸಿದವರು 3 ವಿದ್ಯಾರ್ಥಿಗಳು, ಜೀವಶಾಸ್ತ್ರದಲ್ಲಿ 2, ರಸಾಯನ ಶಾಸ್ತ್ರ 1, ಲೆಕ್ಕಶಾಸ್ತ್ರದಲ್ಲಿ 1 ಹಾಗೂ 100ಕ್ಕೆ 99 ಅಂಕ ಗಳಿಸಿದವರು 11 ವಿದ್ಯಾರ್ಥಿಗಳಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ದಿವ್ಯ ವಿ.ಎಸ್.- 586, ಸಾಕ್ಷಿ- 577, ದಿವ್ಯ ಎಂ.- 576. ವಾಣಿಜ್ಯ ವಿಭಾಗದಲ್ಲಿ

ಸಹನ- 574, ಶ್ರೇಯಾ- 566, ಪೂಜಾ- 555 ಅಂಕ.

- - -

-8ಎಚ್.ಎಲ್.ಐ2: ದಿವ್ಯ ವಿ.ಎಸ್.

-8ಎಚ್.ಎಲ್.ಐ2ಎ.: ಸಾಕ್ಷಿ

-8ಎಚ್.ಎಲ್.2: ಬಿ.ದಿವ್ಯ ಎಂ.

-8ಎಚ್.ಎಲ್.ಐ2ಸಿ: ಸಹನ

-8ಎಚ್.ಎಲ್.ಐ2ಡಿ: ಶ್ರೇಯಾ

-8ಎಚ್.ಎಲ್.ಐ2ಇ: ಪೂಜಾ

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ