ಬನ್ನಿ ಗಿಡಕ್ಕೆ ತಾಲೂಕಾಡಳಿತದಿಂದ ಪೂಜೆ

KannadaprabhaNewsNetwork |  
Published : Oct 13, 2024, 01:08 AM IST
ಬನ್ನಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ನಾಗೂರ ರಸ್ತೆಯಲ್ಲಿನ ಬಸವನ ಕಟ್ಟೆಯ ಬನ್ನಿ ಮರಕ್ಕೆ ಸಂಪ್ರದಾಯದಂತೆ ತಾಲೂಕಾಡಳಿತದಿಂದ ಪೂಜೆ ಸಲ್ಲಿಸಿದ ನಂತರ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ವಿಜಯದಶಮಿ ಹಬ್ಬದ ಪೂಜಾ ಕಾರ್ಯವನ್ನು ರಾಮಾಚಾರಿ ಯಜುರ್ವೇದಿ ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ನಾಗೂರ ರಸ್ತೆಯಲ್ಲಿನ ಬಸವನ ಕಟ್ಟೆಯ ಬನ್ನಿ ಮರಕ್ಕೆ ಸಂಪ್ರದಾಯದಂತೆ ತಾಲೂಕಾಡಳಿತದಿಂದ ಪೂಜೆ ಸಲ್ಲಿಸಿದ ನಂತರ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ವಿಜಯದಶಮಿ ಹಬ್ಬದ ಪೂಜಾ ಕಾರ್ಯವನ್ನು ರಾಮಾಚಾರಿ ಯಜುರ್ವೇದಿ ನಡೆಸಿಕೊಟ್ಟರು.ಪಟ್ಟಣದ ಬಸವೇಶ್ವರ ದೇವಸ್ಥಾನ ಹಾಗೂ ಮಾರುತಿ ದೇವಸ್ಥಾನದಿಂದ ಬಸವೇಶ್ವರ, ಮಾರುತಿ ದೇವರ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಾಗೂರ ರಸ್ತೆಯಲ್ಲಿ ಇರುವ ಬಸವನ ಕಟ್ಟೆಗೆ ಊರಿನ ಪ್ರಮುಖರು ತೆರಳಿದರು. ನಂತರ ಬನ್ನಿ ಮರಕ್ಕೆ, ಎರಡು ಪಲ್ಲಕ್ಕಿಗಳಿಗೆ ತಾಲೂಕಾಡಳಿತ ಪರವಾಗಿ ಕಂದಾಯ ನಿರೀಕ್ಷಕ ಸಂತೋಷ ದೇಸಾಯಿ ಬನ್ನಿ ಮುಡಿಯುವ ಸಂಪ್ರದಾಯಬದ್ದವಾಗಿ ನೆರವೇರಿಸಿದರು.ಪಲ್ಲಕ್ಕಿ ಉತ್ಸವ ಮೆರವಣಿಗೆ ಮರಳಿ ದೇವಸ್ಥಾನ ಆಗಮಿಸಿದ ನಂತರ ಜನರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಬನ್ನಿ ತಗೊಂಡು ಬಂಗಾರದಂಗ ಇರೋಣ ಎಂದು ಪರಸ್ಪರ ಹೇಳುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಈ ಉತ್ಸವ ಮೆರವಣಿಗೆಯಲ್ಲಿ ಬಸನಗೌಡ ಪಾಟೀಲ, ಗ್ರಾಮ ಸಹಾಯಕರಾದ ಅಲ್ಲಾಭಕ್ಷ ವಾಲೀಕಾರ, ಸತೀಶ ವಾಲೀಕಾರ, ಮಹಿಬೂಬ ಕೊರಬು, ಹಿರಿಯರಾದ ಚಂದ್ರಶೇಖರ ಮುರಾಳ, ಆರ್.ಜಿ.ಅಳ್ಳಗಿ, ಅವ್ವಪ್ಪ ರಜಪೂತ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು