ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಹರಳೆಣ್ಣೆ ಕೊಟ್ರ ಬಸಪ್ಪ (ರಾಂ ಅಂಡ್ ಕೋ) ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು. 2019ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಇಂತಹ ಕೃತ್ಯಕ್ಕೆ ಕೈಹಾಕಿತ್ತು ಎಂದು ಅಂದು ರಾಜ್ಯಪಾಲರಾಗಿದ್ದ ಬಿಜೆಪಿಯವರೇ ಆರೋಪ ಮಾಡಿದ್ದರು. ದಾಳಿ ಬಗ್ಗೆ ಇಂದಿಗೂ ಸಹ ಸಮರ್ಪಕವಾದ ತನಿಖೆ ಹೊರಬಾರದಿರುವುದನ್ನು ನೋಡಿದರೆ ಈ ಆರೋಪ ಸತ್ಯವೆನಿಸಲಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ರಾಜಕೀಯ ಷಡ್ಯಂತ್ರಕ್ಕೆ 40 ವೀರ ಸೈನಿಕರು ಸಾವನ್ನಪ್ಪಿದರು. ಇದೀಗ ಈ ದಾಳಿ ನಡೆದು ಆರು ವರ್ಷಗಳಾಗಿದ್ದು, ದುರಂತದ ಪ್ರಮಾಣವು ಇಡೀ ರಾಷ್ಟ್ರವನ್ನು ಆಘಾತಗೊಳಿಸಿತು, ಇದರೊಂದಿಗೆ ವ್ಯಾಪಕ ದುಃಖ ಮತ್ತು ಆಕ್ರೋಶಕ್ಕೆ ಕಾರಣವಾದರೂ ಸಹ ಕೇಂದ್ರ ಸರ್ಕಾರ ಅದನ್ನು ಚುನಾವಣೆಗೆ ಬಳಸಿಕೊಂಡಿತೆ ವಿನಃ ತನಿಖೆ ಮುಂದಾಗಲಿಲ್ಲ ಎಂದು ದೂರಿದರು.ಈ ಸಂದರ್ಭ ಮಹಾನಗರ ಪಾಲಿಕೆ ಸದಸ್ಯರಾದ ಎ.ನಾಗರಾಜ, ಜಿ.ಎಸ್. ಮಂಜುನಾಥ, ಸಾಗರ್ ಎಲ್.ಎಚ್., ಮಹಿಳಾ ಕಾಂಗ್ರೆಸ್‌ನ ಮಂಗಳಮ್ಮ. ದ್ರಾಕ್ಷಾಯಣಮ್ಮ, ರಾಜೇಶ್ವರಿ, ರಾಜು ಭಂಡಾರಿ, ಶ್ರೀಕಾಂತ್, ಯುವರಾಜ್, ಶ್ರೀನಿವಾಸ್, ಚೇತನ್, ಪ್ರವೀಣ್, ಸತೀಶ್, ಶಿವರಾಜ್, ಆಸೀಫ್ ಮತ್ತಿತರರಿದ್ದರು.