ಪುನರೂರು ಕ್ಷೇತ್ರ ಬ್ರಹ್ಮಕಲಶ ಲಾಂಛನ ಬಿಡುಗಡೆ

KannadaprabhaNewsNetwork |  
Published : Oct 15, 2026, 02:45 AM IST
ಪುನರೂರು ಕ್ಷೇತ್ರ ಬ್ರಹ್ಮಕಲಶ ಪೂರ್ವಭಾವಿ ಸಭೆ | Kannada Prabha

ಸಾರಾಂಶ

ಭಕ್ತರ ಹಾಗೂ ದಾನಿಗಳ ಸಹಕಾರ ಮತ್ತು ವಿವಿಧ ಸಮಿತಿಯ ಸದಸ್ಯರು ನಿಸ್ವಾರ್ಥ ಸೇವೆ ಮಾಡಿದರೆ ಬ್ರಹ್ಮಕಲಶೋತ್ಸವ ಯಶಸ್ಸು ಸಾಧ್ಯ ಎಂದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಹೇಳಿದರು.

ಮೂಲ್ಕಿ: ಭಕ್ತರ ಹಾಗೂ ದಾನಿಗಳ ಸಹಕಾರ ಮತ್ತು ವಿವಿಧ ಸಮಿತಿಯ ಸದಸ್ಯರು ನಿಸ್ವಾರ್ಥ ಸೇವೆ ಮಾಡಿದರೆ ಬ್ರಹ್ಮಕಲಶೋತ್ಸವ ಯಶಸ್ಸು ಸಾಧ್ಯ ಎಂದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಹೇಳಿದರು.

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಸಮಿತಿಯ ಹಾಗೂ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಕಾರ್ಯಾಧ್ಯಕ್ಷ ಪುರಂದರ ಶೆಟ್ಟಿಗಾರ್, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಸಮಿತಿಯ ಉಷಾ ಹರಿಕೃಷ್ಣ ಪುನರೂರು, ಪದಾಧಿಕಾರಿಗಳಾದ ಸುರೇಶ್ ರಾವ್ ನೀರಳಿಕೆ, ಶಂಕರ್ ಮಾಸ್ಟರ್ ಗೋಳಿ ಜೋರಾ, ರವಿ ಶೆಟ್ಟಿ ಪುನರೂರು ಗುತ್ತು, ಸುರೇಶ್ ಶೆಟ್ಟಿ, ಮಾಧವ ಶೆಟ್ಟಿಗಾರ್ ರಾಜೇಶ್ ಪಿ ಆರ್ ಕೆರೆಕಾಡು ಮತ್ತಿತರರಿದ್ದರು.

ಮಹಿಳಾ ಮಂಡಳಿ ಸಹಿತ ಸಮಗ್ರ ಸಮಿತಿ ರಚನೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು ಬ್ರಹ್ಮಕಲಶೋತ್ಸವ ಲಾಂಛನ ಬಿಡುಗಡೆ ನಡೆಯಿತು. ಸಮಿತಿಯ ಸುಧಾಕರ ರಾವ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂಟಿಕಾನಮಠ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ
ಕೂಟ ಮಹಾಜಗತ್ತು ಕೇಂದ್ರ ಮಹಾಧಿವೇಶನ ಕೃತಜ್ಞತಾ ಸಭೆ