ಕನ್ನಡಪ್ರಭವಾರ್ತೆ ಮೂಲ್ಕಿ
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಮಾತನಾಡಿ, ಸದ್ದಿಲ್ಲದೆ ಸಂಘಟನೆಯನ್ನು ಬಲಪಡಿಸಿ ಪ್ರಚಾರ ವಿಲ್ಲದ ಉತ್ತಮ ಕೆಲಸ ಮಾಡುತ್ತಿರುವ ಗುರುಬ್ರಹ್ಮ ಪ್ರೆಂಡ್ಸ್ ಇತರ ಸಂಘ ಸಂಸ್ಥೆಗಳಿಗೆ ಪ್ರೇರಣೆ ಎಂದು ಹೇಳಿದರು.
ಪಠೇಲ ವಿಶ್ವನಾಥ ರಾವ್ , ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್, ರವಿ ಶೆಟ್ಟಿ ಪುನರೂರು ಗುತ್ತು, ಪುನರೂರು ಬ್ರಹ್ಮ ಮುಗೇರ ದೈವಸ್ಥಾನದ ಮುತ್ತಪ್ಪ ಗುರಿಕಾರ, ಶ್ರೀ ಬ್ರಹ್ಮ ಮುಗೇರ ದೈವಸ್ಥಾನ ಟ್ರಸ್ಟ್ ರಘುರಾಮ ಮುಕ್ಕಾಲ್ದಿ, ಎನ್ಐಟಿಕೆಯ ಉಮೇಶ ಪಿ, ಉದ್ಯಮಿ ಅನಂತಕೃಷ್ಣ ಶೆಟ್ಟಿಗಾರ್, ಉದ್ಯಮಿ ರಾಜೇಂದ್ರ ಸಾಲ್ಯಾನ್, ಹೇಮಾನಂದ ಶೆಟ್ಟಿಗಾರ್, ಶ್ರಿಶೋಲ್ ಪುನರೂರು, ರಾಕೇಶ್ ಸಾಲ್ಯಾನ್ ಪುನರೂರು , ಕೊಡುಗು ಎಸ್ ಸಿ ಮೋರ್ಚಾದ ರವಿ ಎಮ್ ಡಿ, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಪುನರೂರು, ನಾಗಶ್ರೀ ಮಹಿಳಾ ಸಮಿತಿ ಅಧ್ಯಕ್ಷೆ ಕೃಷ್ಣಮ್ಮ ಪುನರೂರು ಉಪಸ್ಥಿತರಿದ್ದರು.ಸಂಘಟಕ ಗೋಪಾಲಕೃಷ್ಣ ಪುನರೂರು ಸ್ವಾಗತಿಸಿದರು. ಶ್ರೀಶ ಸರಾಪ್ ಐಕಳ ಕಾರ್ಯಕ್ರಮ ನಿರೂಪಿಸಿದರು. ರಾಕೇಶ್ ವಂದಿಸಿದರು. ವಾಲಿಬಾಲ್ , ತ್ರೋಬಾಲ್ , ಪುರುಷರ, ಮಹಿಳೆಯರ ಹಗ್ಗ ಜಗ್ಗಾಟ , ಮಕ್ಕಳಗೆ ವಿವಿಧ ಸ್ಪರ್ಧೆ ನಡೆಯಿತು.