ಗೋಕರ್ಣ: ವೇದ- ಪುರಾಣ ಕಾಲದಿಂದಲೂ ಚುಟುಕು ಸಾಹಿತ್ಯ ತನ್ನದೇ ಆದ ಛಾಪು ಮೂಡಿಸಿದೆ. ಅದು ನಿರಂತರವಾಗಿ ಬೆಳೆಯಲಿ ಎಂದು ರಾಘವೇಶ್ವರ ಭಾರತೀ ಸ್ವಾಮಿಗಳು ಆಶೀರ್ವದಿಸಿ ಅನುಗ್ರಹಿಸಿದರು.ಕಚುಸಾಪ ರಾಜ್ಯ ಹಾಗೂ ಜಿಲ್ಲಾಘಟಕದ ಪದಾಧಿಕಾರಿಗಳಿಗೆ ಗೌರವಿಸಿ ಶುಭ ಕೋರಿದರು. ಅಶೋಕೆಯ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾವೇಶಗೊಂಡ ಕಚುಸಾಪ ಉತ್ತರ ಕನ್ನಡ ಜಿಲ್ಲೆಯ ೭ನೇ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಚಿಂತಕ ಮೋಹನ ಹಬ್ಬು ಅವರು, ಜನಪದ, ವಚನ ಸಾಹಿತ್ಯದಲ್ಲಿ ಚುಟುಕಿನ ಛಾಯೆ ಕಂಡುಬರುತ್ತದೆ ಎಂದರು. ಮಕ್ಕಳನ್ನು ಚುಟುಕು ಸಾಹಿತ್ಯದತ್ತ ವಾಲುವಂತೆ ಮಾಡಲು ಗ್ರಾಮೀಣ ಪ್ರದೇಶಗಳ ಶಾಲೆಯಲ್ಲಿ ಪರಿಷತ್ತು ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಎಂದರು.
ವಿಚಾರಗೋಷ್ಠಿ: ಹಿರಿಯ ಚಿಂತಕ ಗಣಪತಿ ಭಟ್ಟ ವರ್ಗಾಸರ ಅಧ್ಯಕ್ಷತೆ ಯಲ್ಲಿ ಕೃಷ್ಣ ಪದಕಿ, ದಾಕ್ಷಾಯಿಣಿ ಪಿ.ಸಿ. ಮತ್ತು ಜನಾರ್ದನ ನಾಯಕ ಉಪನ್ಯಾಸ ನೀಡಿದರು. ನಂತರ ವಸಂತ ಕೆ. ನಾಯಕ ಅಧ್ಯಕ್ಷತೆಯಲ್ಲಿ ವಿಠ್ಠಲ ಗಾಂವಕರ ಆಶಯ ಭಾಷಣ ಮಾಡಿದರು. ಡಾ. ಪ್ರಭುಸ್ವಾಮಿ ಹಾಲಿವಾಡಿಮಠ ಅತಿಥಿಗಳಾಗಿದ್ದರು. ಇಪ್ಪತ್ತು ಜನ ಕವನ ವಾಚನ ಮಾಡಿದರು. ಉದಯ ಮಡಿವಾಳ ನಿರೂಪಿಸಿದರು.