ಶಿವಮೊಗ್ಗ ದಸರಾ: 16ರಂದು ಪುನೀತ್‌ ಪುಣ್ಯಸ್ಮರಣೆ ಚಲನಚಿತ್ರೋತ್ಸವ

KannadaprabhaNewsNetwork | Published : Oct 14, 2023 1:00 AM

ಸಾರಾಂಶ

ಬೆಳಗ್ಗೆ 9 ಗಂಟೆಗೆ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ನಿರ್ದೇಶಕ ಪನ್ನಗಾಭರಣ ಚಾಲನೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ದಸರಾ ಅಂಗವಾಗಿ ನಡೆಯುವ ಅ.16ರಂದು ನಡೆಯುವ ಪುನೀರತ್‌ ರಾಜಕುಮಾರ್‌ ಪುಣ್ಯಸ್ಮರಣೆಯ ಚಲನ ಚಿತ್ರೋತ್ಸವದಲ್ಲಿ ಚಲನಚಿತ್ರ ನಟಿ ಮೇಘನಾ ರಾಜ್, ನಿರೂಪಕಿ ಸಂಧ್ಯಾ ಭಟ್, ಕಿರುತೆರೆ ಕಲಾವಿದೆ ರೂಪಿಕಾ ಪಾಲ್ಗೊಳ್ಳುತ್ತಿದ್ದಾರೆ ಎಂದು ಚಲನಚಿತ್ರ ದಸರಾ ಸಮಿತಿಯ ಅಧ್ಯಕ್ಷೆ ಸುವರ್ಣಾ ಶಂಕರ್ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಾಲಿಕೆ, ಜಿಲ್ಲಾಡಳಿತ, ಬೆಳ್ಳಿಮಂಡಲ, ಸಿಹಿಮೊಗೆ, ಶಿವಮೊಗ್ಗ ಚಿತ್ರಸಮಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ದಸರಾ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. 16ರಂದು ಬೆಳಗ್ಗೆ 9 ಗಂಟೆಗೆ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ನಿರ್ದೇಶಕ ಪನ್ನಗಾಭರಣ ಸಮಾರಂಭ ಉದ್ಘಾಟಿಸುವರು. ಮೇಯರ್ ಎಸ್. ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ ನಾಯಕ್, ಶಾಸಕ ಡಿ.ಎಸ್. ಅರುಣ್, ಆಯುಕ್ತ ಮಾಯಣ್ಣ ಗೌಡ, ಸದಸ್ಯರಾದ ಎಸ್.ಜ್ಞಾನೇಶ್ವರ್, ಮೇಹಕ್ ಶರೀಫ್ ಮಂಜುನಾಥ್, ರಮೇಶ್ ಹೆಗಡೆ, ವಿಶ್ವನಾಥ್, ಲತಾ ಹೆಗಡೆ ಮತ್ತು ವಾರ್ತಾಧಿಕಾರಿ ಆರ್.ಮಾರುತಿ, ಬೆಳ್ಳಿ ಮಂಡಲ ಸಂಚಾಲಕ ವೈದ್ಯನಾಥ್, ಚಿತ್ರಮಂದಿರದ ಮಾಲೀಕರಾದ ಎನ್.ಜೆ. ವೀರಣ್ಣ, ಶೈಲೇಶ್ ಇರಲಿದ್ದಾರೆ ಎಂದು ತಿಳಿಸಿದರು. ಚಲನಚಿತ್ರೋತ್ಸವ ಅಂಗವಾಗಿ ಅ.16ರಂದು ಬೆಳಗ್ಗೆ 9 ಗಂಟೆಗೆ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ತತ್ಸಮ- ತದ್ಭವ ಹಾಗೂ 17ರಂದು ಬೆಳಗ್ಗೆ 9 ಗಂಟೆಗೆ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಕಾಂತಾರ ಚಲನಚಿತ್ರ ಉಚಿತ ಪ್ರದರ್ಶನವಿರುತ್ತದೆ. ಜೊತೆಗೆ 17ರಂದು ಬೆಳಗ್ಗೆ 10ಕ್ಕೆ ಅಂಬೇಡ್ಕರ್ ಭವನದಲ್ಲಿ ದಸರಾ ಚಲನಚಿತ್ರ ರಸಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವರು. ಮೇಯರ್, ಉಪಮೇಯರ್ ಸೇರಿದಂತೆ ಚಲನಚಿತ್ರ ದಸರಾ ಸಮಿತಿಯ ಸದಸ್ಯರು ಹಾಜರಿರುವರು ಎಂದರು. ಕಾರ್ಯಾಗಾರದಲ್ಲಿ ನಾಲ್ಕು ಉಪನ್ಯಾಸಗಳನ್ನು ಏರ್ಪಡಿಸಿದ್ದು, ಚಲನಚಿತ್ರ ಮತ್ತು ಸಾಹಿತ್ಯ ಕುರಿತು ಚಿಂತಕ ಶಾಂತಾರಾಮ್ ಪ್ರಭು, ಕಿರುಚಿತ್ರ ನಿರ್ಮಾಣ ಕುರಿತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಿ. ಸತ್ಯಪ್ರಕಾಶ್, ಚಲನಚಿತ್ರ ಛಾಯಾಗ್ರಹಣ ಕುರಿತು ಜಿ.ಎಸ್. ಭಾಸ್ಕರ್, ಹಾಡು ಹುಟ್ಟಿದ ಬಗೆ ಕುರಿತು ಎನ್.ಎಸ್. ಶ್ರೀಧರ ಮೂರ್ತಿ ಮಾತನಾಡುವರು. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಇರುತ್ತದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಸದಸ್ಯ ವಿಶ್ವನಾಥ್, ಬೆಳ್ಳಿಮೋಡ ಸಂಚಾಲಕ ವೈದ್ಯನಾಥ್ ಎಚ್.ಯು., ಅಧಿಕಾರಿಗಳಾದ ಯಶವಂತ್, ಮಂಜಪ್ಪ, ಕುಪ್ಪುರಾಜ್, ರಂಗನಾಥ್ ಇದ್ದರು. - - -

Share this article