ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜ ಆಶ್ರಯದಲ್ಲಿ ನಟ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು.ಕುಶಾಲನಗರ ಗೌಡ ಸಮಾಜದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಶಿಬಿರವನ್ನು ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಉದ್ಘಾಟಿಸಿದರು.
ಶಿಬಿರದಲ್ಲಿ ಸುಮಾರು 50ಕ್ಕೂ ಅಧಿಕ ರಕ್ತದಾನಿಗಳು ಪಾಲ್ಗೊಂಡಿದ್ದರು. ರಕ್ತ ನಿಧಿ ಕೇಂದ್ರದ ಡಾ. ಮಹಮ್ಮದ್ ಮತ್ತು ಸಿಬ್ಬಂದಿ ಕಾರ್ಯಕ್ರಮ ನಡೆಸಿಕೊಟ್ಟರು.ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುಮನ್ ಬಾಲಚಂದ್ರ, ಪ್ರಮುಖರಾದ ಟಿ ಕೆ ರಾಜಶೇಖರ್, ಕೊಡಗನ ಹರ್ಷ, ನಿತಿನ್ ಎನ್ ಗುಪ್ತ ,ವಲಯ ಅಧ್ಯಕ್ಷರಾದ ಸತೀಶ್ ಕುಮಾರ್, ಗೌಡ ಸಮಾಜದ ಪದಾಧಿಕಾರಿಗಳಾದ ದೊರೆ ಗಣಪತಿ, ಕಾಶಿ ಪೂವಯ್ಯ, ಕುಲ್ಲಚನ ಹೇಮಂತ್, ಗೌಡ ಸಮಾಜ ಮತ್ತು ಲಯನ್ಸ್ ಕ್ಲಬ್ ಪದಾಧಿಕಾರಿಗಳು ಸದಸ್ಯರು ಮತ್ತಿತರರು ಇದ್ದರು.22ರಿಂದ ಬಿಳಿಗೇರಿ ಶ್ರೀ ಭಗವತಿ ದೇವರ ವಾರ್ಷಿಕೋತ್ಸವ:
ತಾಲೂಕಿನ ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವ ಮಾ.22ರಿಂದ ಮಾ.26ರ ವರೆಗೆ ನಡೆಯಲಿದೆ.ಉತ್ಸವದ ಅಂಗವಾಗಿ 22ರಂದು ಬೆಳಗ್ಗೆ 10 ಗಂಟೆಯಿಂದ ಗಣಪತಿ ಹೋಮ, ಮಹಾಪೂಜೆ, ಸಂಜೆ ಆರು ಗಂಟೆಗೆ ಪ್ರಾರ್ಥನೆ, ತಕ್ಕರ ಮನೆಯಿಂದ ಭಂಡಾರ ತೆಗೆದುಕೊಂಡು ಬರುವುದು, ಅಂದಿಬೆಳಕು, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.23ರಂದು ಬೆಳಗ್ಗೆ 6 ಗಂಟೆಗೆ ದೇವರು ಬಲಿ ಬರುವುದು, ಮಹಾಪೂಜೆ, ಸಂಜೆ 6 ಗಂಟೆಗೆ ದೇವರು ಬಲಿ ಬರುವುದು, ಅಂದಿ ಬೆಳಕು, ಮಹಾಪೂಜೆ, ನಂತರ ಶ್ರೀ ಪರದೇವರ ಕೋಟದಲ್ಲಿ ಕೊಟ್ಟಿಪಾಡುವುದು ಕಾರ್ಯಕ್ರಮಗಳು ಜರುಗಲಿವೆ.
24ರಂದು ಬೆಳಗ್ಗೆ 6ಗಂಟೆಗೆ ದೇವರು ಬಲಿ ಬರುವುದು, ಅಯ್ಯಪ್ಪ ದೇವರ ಪೂಜೆ, ಮಹಾಪೂಜೆ, ಸಂಜೆ 6 ಗಂಟೆಗೆ ಬೆಳಕು, ದೇವರು ಬಲಿ ಬರುವುದು, ಅಂದಿಬೆಳಕು, ಪ್ರಸಾದ ವಿತರಣೆ ನಡೆಯಲಿದೆ. 25ರಂದು ಪಟ್ಟಣಿ, ಬೆಳಗ್ಗೆ 6 ಗಂಟೆಗೆ ಶ್ರೀ ದೇವರ ನೃತ್ಯ ಬಲಿ, ಶ್ರೀ ಪರದೇವರ ಮುಡಿ ತರುವುದು, ಶ್ರೀ ಅಯ್ಯಪ್ಪ ದೇವರ ಭಂಡಾರ ತರುವುದು, ಶ್ರೀ ಕುಟ್ಟಿಚಾತ ದೇವರ ಎಡೆಮಡಗುವುದು, ಎತ್ತು ಪೋರಾಟ, ಹಬ್ಬದ ಕಟ್ಟು ಮುರಿಯುದು, ತೆಂಗೆಪೋರು, ಮಹಾಪೂಜೆ, ಅನ್ನ ಸಂತರ್ಪಣೆ, ಶ್ರೀ ದೇವರ ನೆರಪು ಬಲಿ, ಶ್ರೀ ಪರದೇವರ, ಅಯ್ಯಪ್ಪ ದೇವರ, ಕುಟ್ಟಿ ಚಾತ ದೇವರ ಕೋಲ ನಡೆಯಲಿದೆ.26ರಂದು ಸಂಜೆ 4 ಗಂಟೆಗೆ ಬೆಳಕು, ಶ್ರೀ ದೇವರ ಬಲಿ, ದೇವರ ಜಳಕ ಕಾರ್ಯ, ನಂತರ ಮೆಟ್ಟಿಲು ಪೂಜೆ, ನೃತ್ಯ ಬಲಿ, ಅನ್ನ ಸಂತರ್ಪಣೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.