ಕನ್ನಡಪ್ರಭ ವಾರ್ತೆ ಮೈಸೂರು
ನಗರದ ದೇವರಾಜ ಅರಸು ರಸ್ತೆಯಲ್ಲಿ ಪುನೀತ್ ರಾಜಕುಮಾರ್ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಪುನೀತ್ ಸಾವಿಗೂ ಮೊದಲು ರಾಜ್ಯದ ಬಹಳಷ್ಟು ಜನತೆಗೆ ಅವರು ಮಾಡಿದ್ದ ಸಾಮಾಜಿಕ ಸೇವೆ ಗೊತ್ತಿರಲಿಲ್ಲ. ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎಂಬ ರೀತಿಯಲ್ಲಿ ಅಸಹಾಯಕರ ನೆರವಿಗೆ ನಿಂತಿದ್ದರು. ಚಿತ್ರಗಳು ಹಾಗೂ ಸಾಮಾಜಿಕ ಸೇವೆ ಮೂಲಕ ಮುಗಿಲೆತ್ತ ರಕ್ಕೆ ಬೆಳೆದು ನಿಂತಿದ್ದರು. ಪುನೀತ್ ಜನ್ಮದಿನವನ್ನು ಸ್ಫೂರ್ತಿದಿನ ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.ದೇವರಾಜ ಮೊಹಲ್ಲಾ ಯುವಕರ ಬಳಗದ ವತಿಯಿಂದ ಸಾರ್ವಜನಿಕರಿಗೆ ಗೀ ರೈಸ್ ಹಾಗೂ ಚಿಕನ್ ಚಾಪ್ಸ್ ವನ್ನು ಶಾಸಕ ಹರೀಶ್ ಗೌಡ ಸಾರ್ವಜನಿಕರಿಗೆ ವಿತರಿಸಿದರು.
ಪುನೀತ್ ರಾಜ್‌ಕುಮಾರ್ ಜನ್ಮದಿನೋತ್ಸವ: ಮಜ್ಜಿಗೆ, ಸಿಹಿ ವಿತರಣೆ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನೋತ್ಸವದ ನೆನಪಿಗಾಗಿ ಶ್ರೀರಾಮ ಗೆಳಯರ ಬಳಗದ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಸಿಹಿ ಕೊಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಿತು.
ಸೇವಾಮನೋಭಾವದ ದೃಷ್ಟಿಯಲ್ಲಿ ಆರೋಗ್ಯ ಶಿಬಿರ, ರಕ್ತದಾನ, ನೇತ್ರದಾನ, ಸಾಮೂಹಿಕ ವಿವಾಹ ಸೇರಿದಂತೆ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ, ಅನ್ನ ದಾಸೋಹ ಕಾರ್ಯಕ್ರಮಗಳನ್ನ ಆಯೋಜಿಸುತ್ತಾ ಬಂದಿದ್ದಾರೆ. ಪರಿಸರ ಕಾಳಜಿ ಮತ್ತು ಕನ್ನಡ ಭಾಷೆಗಾಗಿ ಅವರ ಸೇವೆ ಅವಿಸ್ಮರಣೀಯ ಎಂದರು.