ಬುದ್ಧಿಮಾಂದ್ಯರ ಶಾಲೆಯಲ್ಲಿ ಪುನೀತ್‌ ರಾಜ್‌ಕುಮಾರ ಜನ್ಮದಿನ

KannadaprabhaNewsNetwork |  
Published : Mar 21, 2024, 01:03 AM IST
20ಎಚ್‌ಪಿಟಿ4- ಹೊಸಪೇಟೆಯಲ್ಲಿ ಡಾ.ಪುನೀತ್ ರಾಜ್‌ಕುಮಾರ ಅವರ ಜನ್ಮದಿನ ನಿಮಿತ್ತ ಸಾಧ್ಯ ವಿಶೇಷ ಮಕ್ಕಳ (ಬುದ್ಧಿ ಮಾಂದ್ಯ) ಶಾಲೆಯ ಉಸ್ತುವಾರಿ ಆರತಿ ಅವರನ್ನು ವಿಜಯನಗರ ಜನಪರ ಬಳಗದಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನಾವು ಸಹ ಪುನೀತ್ ರಾಜ್‌ಕುಮಾರ್ ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು. ಅವರ ಮಾರ್ಗದರ್ಶನ ಪ್ರತಿಯೊಬ್ಬರಿಗೆ ಮಾದರಿಯಾಗಬೇಕು.

ಹೊಸಪೇಟೆ: ನಗರದ ವಿಜಯನಗರ ಜನಪರ ಬಳಗದಿಂದ ಡಾ.ಪುನೀತ್ ರಾಜ್‌ಕುಮಾರ ಜನ್ಮದಿನವನ್ನು ಸಾಧ್ಯ ವಿಶೇಷ ಮಕ್ಕಳ (ಬುದ್ಧಿಮಾಂದ್ಯ) ಶಾಲೆಯಲ್ಲಿ ಆಚರಿಸಲಾಯಿತು.

ಶಾಲೆಯ 75 ಮಕ್ಕಳಿಗೆ ಟೀ ಶರ್ಟ್‌ಗಳನ್ನು ವಿತರಿಸಿ ಅನ್ನಸಂತರ್ಪಣೆ ನಡೆಸಲಾಯಿತು. ಈ ವೇಳೆ ಡಾ.ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ವಿಜಯನಗರ ಜನಪರ ಬಳಗದ ಅಧ್ಯಕ್ಷ ಕಲ್ಗುಡಿ ಸಂತೋಷ್‌ ಮಾತನಾಡಿ, ನಾವು ಸಹ ಪುನೀತ್ ರಾಜ್‌ಕುಮಾರ್ ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು. ಅವರ ಮಾರ್ಗದರ್ಶನ ಪ್ರತಿಯೊಬ್ಬರಿಗೆ ಮಾದರಿಯಾಗಬೇಕು. ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ಏನೇ ಕೆಲಸವಿದ್ದರೂ ನಾವು ಚಾಚೂ ತಪ್ಪದೇ ಮಾಡಿಕೊಡುತ್ತೇವೆ ಎಂದರು.ಸಾಧ್ಯ ವಿಶೇಷ ಮಕ್ಕಳ ವಸತಿ ಶಾಲೆಯ ಉಸ್ತುವಾರಿ ಆರತಿ ಮಾತನಾಡಿ, ಡಾ.ಪುನೀತ್ ರಾಜ್‌ಕುಮಾರ್ 49ನೇ ವರ್ಷದ ಹುಟ್ಟು ಹಬ್ಬವನ್ನು ನಮ್ಮ ಶಾಲೆಗೆ ಆಗಮಿಸಿ ನಮ್ಮ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಹಾಗೂ ಟೀ ಶರ್ಟ್‌ಗಳನ್ನು ಕೊಡುಗೆ ನೀಡಿರುವುದು ಉತ್ತಮ ಕೆಲಸವಾಗಿದೆ. ಶಾಲೆಯಿಂದ ಈಗಾಗಲೇ 195 ವಿಶೇಷ ಮಕ್ಕಳಿಗೆ ತರಬೇತಿ ನೀಡಿದ್ದೇವೆ, ಮುಂದಿನ ದಿನಗಳಲ್ಲಿ 500 ವಿಶೇಷ ಮಕ್ಕಳಿಗೆ ತರಬೇತಿ ನೀಡಲು ಕಟ್ಟಡ ನಿರ್ಮಿಸುತ್ತಿದ್ದೇವೆ ಎಂದರು.ಸವಿತಾ ಸಮಾಜದ ಯುವ ನಾಯಕ ಆರ್.ಬಾಲಾಜಿ ಜಿಲ್ಲೆಯ ಅನಾಥ ಮಕ್ಕಳಿಗೆ ಹಾಗೂ ವೃದ್ದರಿಗೆ, ದೃಷ್ಟಿಮಾಂಧ್ಯರಿಗೆ ಉಚಿತವಾಗಿ ಕೇಶ ಅಲಂಕಾರವನ್ನು ಮಾಡುತ್ತಿದ್ದಾರೆ. ಇವರ ಸೇವೆ ಗುರುತಿಸಿ ವಿಜಯನಗರ ಜನಪರ ಬಳಗದಿಂದ ಅವರಿಗೆ ಸನ್ಮಾನಿಸಲಾಯಿತು.ಮುಖಂಡರಾದ ಕಣ್ಣಿ ಶ್ರೀಕಂಠ, ಪ್ರಕಾಶ ಮೆಹರವಾಡೆ, ಶಂಕರ್, ಎನ್.ಹನುಮಂತ, ಗುಂಡಿಮೂರ್ತಿ, ಸೋಮ ಮಹಾರಾಜ್, ಬಾಣದ ಅರುಣ, ಬಡಗಿ ರಮೇಶ, ಕಿಚ್ಚಿಡಿ ಭರತ್, ಬಂಗಿ ರಮೇಶ, ಯಲ್ಲಪ್ಪ, ಜಂಬಣ್ಣ, ನಾಗರಾಜ, ಡಿ.ಎಸ್.ಪ್ರಭು, ಡಿ.ವಿರೂಪಾಕ್ಷ ನಾಯಕ, ವೆಂಕಟೇಶ ದೇವರಮನೆ ಮತ್ತಿತರರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ