ಪುನೀತ್ ಸಮಾಜಮುಖಿ ಕಾರ್ಯ ಇಂದಿಗೂ ಜೀವಂತ

KannadaprabhaNewsNetwork |  
Published : Oct 31, 2026, 02:15 AM IST
ಕೊಟ್ಟೂರಿನಲ್ಲಿ ದಿ. ಪುನೀತ್ ರಾಜ್ ಕುಮಾರ ರವರ 5ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸುಕನ್ಯಾ ಸಮೃದ್ದಿ ಕಾರ್ಡ್ ಗಳನ್ನು ಅಭಿಮಾನಿ ಬಳಗದಿಂದ ವಿತರಿಸಲಾಯಿತು. | Kannada Prabha

ಸಾರಾಂಶ

ಪುನೀತ್ ರಾಜಕುಮಾರ್ ನಿತ್ಯ ಸ್ಮರಿಸುತ್ತ ಪ್ರೇರಣೆಗೊಂಡಿರುವ ಪ್ರಕಾಶ್ ನಿತ್ಯ ಟೈಲ್ಸ್ ಹಮಾಲಿ ಮಾಡಿ ಬಂದ ಹಣದಲ್ಲಿ ಇಂತಹ ಅದ್ಭುತ ಕಾರ್ಯಕ್ರಮ ಜತೆಗೆ ಉಪಯುಕ್ತ ಯೋಜನೆ ನೀಡುತ್ತಿರುವುದು ನಿಜಕ್ಕೂ ಆಶ್ಚರ್ಯಕರ

ಕೊಟ್ಟೂರು: ದಿ.ನಟ ಪುನೀತ್ ರಾಜಕುಮಾರ್ ಸಿನಿಮಾದಲ್ಲಿ ರೀಲ್ ಹೀರೊ ಮಾತ್ರವಲ್ಲ, ನಿಜ ಜೀವನದಲ್ಲಿ ಕೂಡ ರಿಯಲ್ ಹೀರೊ, ಇವರ ಸಮಾಜಮುಖಿ ಕಾರ್ಯಕ್ರಮಗಳು ಇಂದಿಗೂ ಜೀವಂತವಾಗಿವೆ ಎಂದು ಮುಖಂಡ ಬದ್ದಿ ಮರಿಸ್ವಾಮಿ ಹೇಳಿದರು.

ಪಟ್ಟಣದ ಬಸವೇಶ್ವರ ತೇರು ಬಯಲು ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಪುನೀತ್ ರಾಜಕುಮಾರ್ 5ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ದಿ. ನಟ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ರುದ್ರಮ್ಮ ಜೋಗತಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬದ್ದಿ ದುರುಗೇಶ್, ದಿ.ಪುನೀತ್ ರಾಜಕುಮಾರ್ ಧರ್ಮ ನಿಷ್ಠೆ ನಿಷ್ಕಲ ಮನಸ್ಸಿನಿಂದ ಮಾಡಿದ ಸಹಾಯಗಳಿಂದ ಪ್ರೇರಣಗೊಂಡ ರಾಂಪುರದ ಪ್ರಕಾಶ್ ಪ್ರತಿ ವರ್ಷ ಲಕ್ಷಾಂತರ ವೆಚ್ಚಗಳಲ್ಲಿ ಹಲವಾರು ಉಪಯುಕ್ತ ಯೋಜನೆ ಜನರಿಗೆ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುವುದರ ಮೂಲಕ ಪುನೀತ್ ರಾಜಕುಮಾರ್ ಹೆಸರನ್ನು ಅಜರಾಮರವಾಗಿ ಉಳಿಸಿದ್ದಾರೆ ಎಂದರು.

ಮಾಜಿ ಸೈನಿಕ ಅಜ್ಜಪ್ಪ ಮಾತನಾಡಿ, ವೃದ್ಧಾಶ್ರಮ ಗೋಶಾಲೆ ಉಚಿತ ಶಿಕ್ಷಣ ಅಂತಹ ಹಲವಾರು ಸಮಾಜಮುಖಿ ಕೆಲಸ ಸದ್ದಿಲ್ಲದೆ ಮಾಡಿರುವ ಪುನೀತ್ ರಾಜಕುಮಾರ್ ನಿತ್ಯ ಸ್ಮರಿಸುತ್ತ ಪ್ರೇರಣೆಗೊಂಡಿರುವ ಪ್ರಕಾಶ್ ನಿತ್ಯ ಟೈಲ್ಸ್ ಹಮಾಲಿ ಮಾಡಿ ಬಂದ ಹಣದಲ್ಲಿ ಇಂತಹ ಅದ್ಭುತ ಕಾರ್ಯಕ್ರಮ ಜತೆಗೆ ಉಪಯುಕ್ತ ಯೋಜನೆ ನೀಡುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಎಂದರು.

ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿ ರಾಂಪುರದ ಪ್ರಕಾಶ್, ಪತ್ರಕರ್ತ ಉಜ್ಜಿನಿ ರುದ್ರಪ್ಪ, ಆರ್. ಅಮರೇಶ್, ಹಸಿರು ಹೊನಲು ಸಂಘ ಅಧ್ಯಕ್ಷ, ಪ್ರಕಾಶ್, ತಿಪ್ಪೇರುದ್ರಸ್ವಾಮಿ ಟೈಲ್ಸ್ ಮಾಲೀಕರು, ಕೊಲ್ಲಪ್ಪ, ಶಿಕ್ಷಕ, ಮುತ್ತೇಶ್, ಶಿವಕುಮಾರ್, ಬಿ. ಹುಚ್ಚಂಗಪ್ಪ, ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ