ಕನ್ನಡಪ್ರಭ ವಾರ್ತೆ ಮಂಡ್ಯ
ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ತೀವ್ರವಾದ ಶಿಕ್ಷೆಗೆ ಒಳಪಡಿಸಬೇಕು ಎಂದು ಮಹಿಳಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್ ಆಗ್ರಹಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತಲ್ಲಣ ಮೂಡಿಸಿರುವ ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ವಿಕೃತ ಮನಸ್ಸಿನಿಂದ ಮಹಿಳೆಯರ ಮಾನಹಾನಿಗೆ ಕಾರಣನಾಗಿದ್ದಾನೆ ಎಂದು ದೂರಿದರು.
ಮಹಿಳೆಯರ ಹಕ್ಕು ಜವಾಬ್ದಾರಿ ಗೌರವವನ್ನು ಬೀದಿಪಾಲು ಮಾಡುವ ಮೂಲಕ ತಾನೊಬ್ಬ ಮಹಿಳಾ ವಿರೋಧಿ ಎಂಬುದನ್ನು ತೋರ್ಪಡಿಸಿದ್ದಾನೆ. ಈ ನೆಲದ ಕಾನೂನು ವ್ಯಾಪ್ತಿಯಲ್ಲಿ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಶೀಘ್ರದಲ್ಲೇ ನೊಂದ ಮಹಿಳೆಯರಿಗೆ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕಾರ್ಯೋನ್ಮುಕವಾಗಿದೆ ಎಂದರು.ಈಗಾಗಲೇ ಎಸ್ಐಟಿ ರಚನೆ ಮಾಡಿರುವುದನ್ನು ಅಭಿನಂದಿಸುತ್ತೇವೆ. ತುರ್ತಾಗಿ ಆ ವರದಿ ಆಧಾರದ ಮೇಲೆ ಇವನನ್ನು ಸಾರ್ವಜನಿಕ ಜೀವನದಿಂದ ವಜಾಗೊಳಿಸಲು ಸರ್ಕಾರ ಮತ್ತು ಜೆಡಿಎಸ್ ಮುಂದಾಗಬೇಕು. ಈ ರೀತಿ ಮನಸ್ಥಿತಿ ಇರುವ ಈತನ ಎಲ್ಲಾ ಹಗರಣಗಳು ಹೊರಗೆ ಬರಬೇಕು. ಮಹಿಳೆಯರ ವಿಡಿಯೋ ಹರಿ ಬಿಟ್ಟವರ ವಿರುದ್ಧವೂ ಸೂಕ್ತ ತನಿಖೆ ನಡೆಸಿ ಕಾನೂನು ರೀತಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಪಕ್ಷದವರು ಈ ಕೃತ್ಯವನ್ನು ಕಂಡು ಕೂಡ ಕಾಣದಂತೆ ವರ್ತಿಸುತ್ತಿರುವುದನು ನೋಡಿದರೆ ಅವರ ಮನಸ್ಥಿತಿ ಏನೆಂಬುದು ತೋರ್ಪಡಿಸುತ್ತದೆ. ಬಿಜೆಪಿ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸಬೇಕು. ಇಲ್ಲವಾದಲ್ಲಿ ಈ ಕೃತ್ಯಕ್ಕೆ ತಾವು ಕೂಡ ಪೂರ್ಣ ಜವಾಬ್ದಾರರು ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಸುದ್ಧಿಗೋಷ್ಠಿಯಲ್ಲಿ ಇಂದಿರಾ ಸತೀಶ್ ಬಾಬು, ನೀಲಾಮೂರ್ತಿ, ಪದ್ಮ ಮೋಹನ್, ಸುವರ್ಣಾವತಿ, ಹೀನಾ ಕೌಸರ್ ಇದ್ದರು.
ಪೆನ್‌ಡ್ರೈವ್ ಪ್ರಕರಣ ಸಂಸದ ಪ್ರಜ್ವಲ್‌ರೇವಣ್ಣಗೆ ಶಿಕ್ಷೆಯಾಗಲಿಮಂಡ್ಯ:ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣ ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಇದಕ್ಕೆ ತಕ್ಕ ಶಿಕ್ಷೆಯಾಗಬೇಕು ಎಂದು ಬಿಎಸ್ಪಿ ಮುಖಂಡ ಶಿವಶಂಕರ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಷ್ಟ್ರದ ಘನತೆ, ಗೌರವವನ್ನು ಎತ್ತಿಯಿಡಿಯಬೇಕಿರುವ ಒಂದು ಪ್ರತಿಷ್ಠಿತ ಕುಟುಂಬದ ಪ್ರಜ್ವಲ್ ಸಂಸದನಾಗಿ ಈತ ಮಾಡಿರುವ ಕೃತ್ಯ ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತದ್ದಾಗಿದೆ. ತನ್ನ ಹಣಬಲ ಹಾಗೂ ಅಧಿಕಾರ ಬಲ ಉಪಯೋಗಿಸಿ ತನ್ನ ಮೋಜಿಗೆ ಹೆಣ್ಣು ಮಕ್ಕಳನ್ನು ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧವೇ ಸರಿ ಎಂದು ಕಿಡಿಕಾರಿದ್ದಾರೆ.ಸಂಸದ ಪ್ರಜ್ವಲ್ ಬಂಧನಕ್ಕಾಗಿ ಸಿಐಟಿಯೂ ಪ್ರತಿಭಟನೆಕನ್ನಡಪ್ರಭ ವಾರ್ತೆ ಮಂಡ್ಯಪೆನ್‌ಡ್ರೈವ್ ಪ್ರಕರಣದ ಸಂಬಂಧ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಸೇರಿದ ಕಾರ್ಯಕರ್ತರು ಪ್ರಜ್ವಲ್ ರೇವಣ್ಣ ವಿರುದ್ಧ ಘೋಷಣೆ ಕೂಗಿದರು. ನಂತರ ಹೆದ್ದಾರಿ ಮೂಲಕ ಗಾಂಧಿ ಭವನದವರೆಗೂ ಮೆರವಣಿಗೆ ನಡೆಸಿದರು.ಪ್ರಜ್ವಲ್ ರೇವಣ್ಣ ಯಾವುದೇ ದೇಶದಲ್ಲಿದ್ದರೂ ಅವರನ್ನು ಪತ್ತೆ ಮಾಡಿ ಬಂಧಿಸಬೇಕು. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಘೋರ ಅಪರಾಧ ಎಸಗಿದ ಪ್ರಜ್ವಲ್ ಅವರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ವಿಧಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಹಾಸನದಲ್ಲಿ ಒಂದು ರೀತಿಯ ಪಾಳೇಗಾರಿಕೆ ಸಂಸ್ಕೃತಿ ತಾಂಡವವಾಡುತ್ತಿದೆ. ಮಹಿಳೆಯರನ್ನು ನಿಕೃಷ್ಟವಾಗಿ ಬಳಸಿಕೊಳ್ಳುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಕಳೆದ 5 ವರ್ಷಗಳಿಂದಲೂ ಹೆಣ್ಣು ಮಕ್ಕಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಕಿಡಿಕಾರಿದರು.ತಕ್ಷಣ ಆರೋಪಿ ಮತ್ತು ಇಂತಹ ಕೃತ್ಯಕ್ಕೆ ಸಹಕಾರ ನೀಡಿದ ಎಲ್ಲರನ್ನೂ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಖಜಾಂಚಿ ಮಹದೇವಮ್ಮ, ಮುಖಂಡರಾದ ಟಿ.ಎಲ್.ಕೃಷ್ಣೇಗೌಡ, ಸಿ.ಪ್ರದೀಪ್, ಶಶಿಪ್ರಕಾಶ್, ಪ್ರಮಿಳಾ ಕುಮಾರಿ ಇತರರು ಭಾಗವಹಿಸಿದ್ದರು.