ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ಡಾ.ದೀಪಕಕುಮಾರ ಆಗ್ರಹ

KannadaprabhaNewsNetwork |  
Published : Aug 18, 2024, 01:48 AM IST
ಡಾ.ದೀಪಕಕುಮಾರ | Kannada Prabha

ಸಾರಾಂಶ

ಕೋಲ್ಕತಾ ಆರ್‌ಜಿ ಕರ್‌ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮಾನವೀಯ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಬಿಎಲ್‌ಡಿ ಐಟಿ ಮುಖ್ಯಸ್ಥರು, ಸೇವಾ ಆಸ್ಪತ್ರೆಯ ಮುಖ್ಯಸ್ಥ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ-2024ರ ಪ್ರಶಸ್ತಿ ಪುರಸ್ಕೃತರಾದ ಡಾ.ದೀಪಕಕುಮಾರ ಚವ್ಹಾಣ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕೋಲ್ಕತಾ ಆರ್‌ಜಿ ಕರ್‌ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮಾನವೀಯ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಬಿಎಲ್‌ಡಿ ಐಟಿ ಮುಖ್ಯಸ್ಥರು, ಸೇವಾ ಆಸ್ಪತ್ರೆಯ ಮುಖ್ಯಸ್ಥ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ-2024ರ ಪ್ರಶಸ್ತಿ ಪುರಸ್ಕೃತರಾದ ಡಾ.ದೀಪಕಕುಮಾರ ಚವ್ಹಾಣ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಇಂತಹ ಕೃತ್ಯಗಳು ಈ ಹಿಂದೆ ನಡೆದಾಗ ಪ್ರಕರಣದಲ್ಲಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸದೇ ಆರೋಪಿಗಳ ಬೆನ್ನಿಗೆ ನಿಂತಿರುವುದೇ ಇಂತಹ ಕೃತ್ಯಗಳು ಹೆಚ್ಚಾಗುತ್ತಿವೆ. ಇಂಥ ಕೃತ್ಯಗಳಿಗೆ ಕಠಿಣ ಕಾನೂನುಗಳನ್ನು ತರುವುದಲ್ಲದೇ ತ್ವರಿಗತಿಯಲ್ಲಿ ಶಿಕ್ಷೆಗಳು ಆಗಬೇಕು ಎಂದು ಆಗ್ರಹಿದ್ದಾರೆ.ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಎಚ್ಚರಿಕಾ ಕ್ರಮಗಳನ್ನು ಸರ್ಕಾರಗಳು ತೆಗೆದುಕೊಳ್ಳಬೇಕು. ದುಷ್ಕೃತ್ಯಗಳಲ್ಲಿ ತೊಡಗಿರುವ ಆರೋಪಿಗಳನ್ನು ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮಕ್ಕೆ ಸರ್ಕಾರಗಳು ಮುಂದಾಗಬೇಕು. ವೈದ್ಯರಿಗೆ ಹಾಗೂ ಮಹಿಳೆಯರಿಗೆ ವಿಶೇಷ ಕಾಳಜಿ ವಹಿಸುವ ಮೂಲಕ ರಕ್ಷಣೆ ನೀಡವಂತ ಕಾರ್ಯಕ್ಕೆ ಸರ್ಕಾರಗಳು ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.ವೈದ್ಯರ ಮೇಲಿನ ಅತ್ಯಾಚಾರ ಹಾಗೂ ಕೊಲೆಗಳು ಹೀಗೆ ಮುಂದುವರೆದರೇ ಮುಂಬರುವ ದಿನಗಳಲ್ಲಿ ವೈದ್ಯಕೀಯ ಕೋರ್ಸ್‌ನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ಹಿಂಜರಿಯುತ್ತಾರೆ. ಈ ಮೂಲಕ ವೈದ್ಯರ ಸಂಖ್ಯೆ ಭವಿಷ್ಯದಲ್ಲಿ ಕಡಿಯಾಗುತ್ತದೆ. ಆದಕಾರಣ ವೈದ್ಯಕೀಯ ಸೇವೆಯೂ ಕ್ರಮೇಣ ಕ್ಷೀಸುತ್ತದೆ. ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ವೈದ್ಯರ ಸೇವೆ ಅನನ್ಯವಾಗಿದ್ದು, ದೇಶದ ಸಮುದ್ಧಿ ಹಾಗೂ ಅಭಿವೃದ್ಧಿಗೆ ವೈದ್ಯರ ಕೊಡುಗೆ ಅಪಾರವಾಗಿರುವುದರಿಂದ ಕೂಡಲೇ ಸರ್ಕಾರ ಹಾಗೂ ಜನಪ್ರತಿನಿಧಿಗಳು ಡಾಕ್ಟರ್‌ ಮೇಲಿನ ಅತ್ಯಾಚಾರ ಹಾಗೂ ಹಲ್ಲೆ ಮಾಡುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕು.

-ಡಾ.ದೀಪಕಕುಮಾರ ಚವ್ಹಾಣ್‌, ಸೇವಾ ಆಸ್ಪತ್ರೆಯ ಮುಖ್ಯಸ್ಥರು.

PREV

Recommended Stories

ವಿಕ್ಟೋರಿಯಾ ಆಸ್ಪತ್ರೆಗೆ ಸಿದ್ದರಾಮಯ್ಯ ದಿಢೀರ್ ಭೇಟಿ
ಇಂದು ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ : ಇಲ್ಲೆಲ್ಲಾ ವಾಹನಗಳಿಗೆ ನಿಷೇಧ