ಲಾರಿ ಚಕ್ರದಡಿ ಸಿಲುಕಿಪಂಜಾಬ್ ಮೂಲದ ಯೋಧ ಪ್ರಿನ್ಸಿಪಲ್ ಸಿಂಗ್ ಸಾವು

KannadaprabhaNewsNetwork |  
Published : Sep 23, 2026, 01:30 AM IST
ಪೋಟೋ 7 : ಅಪಘಾತದಲ್ಲಿ ಮೃತಪಟ್ಟ ಯೋಧ ಪ್ರಿನ್ಸಿಪಲ್ ಸಿಂಗ್ | Kannada Prabha

ಸಾರಾಂಶ

ಪಂಜಾಬ್ ಮೂಲದ ಪ್ರಿನ್ಸಿಪಲ್ ಸಿಂಗ್ (35) ಮೃತಪಟ್ಟ ಯೋಧನಾಗಿದ್ದು, ಇವರು ದಾಬಸ್‍ಪೇಟೆಯಲ್ಲಿರುವ ಸಿಐಎಸ್‍ಎಫ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದು, ಸಿಐಎಸ್‍ಎಫ್‍ನಲ್ಲಿ ಕಾನ್‍ಸ್ಟೇಬಲ್ ರ್‍ಯಾಂಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ದಾಬಸ್‍ಪೇಟೆ: ಮಿಲಿಟರಿ ಕ್ವಾಟ್ರಸ್ ಗೆ ಅಗತ್ಯ ಸಾಮಗ್ರಿಗಳನ್ನು ತರಲು ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಿಐಎಸ್‍ಎಫ್ ಯೋಧನೊಬ್ಬ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ- 48ರ ಲಕ್ಕೂರು ಬ್ರಿಡ್ಜ್ ಬಳಿ ನಡೆದಿದೆ. ಪಂಜಾಬ್ ಮೂಲದ ಪ್ರಿನ್ಸಿಪಲ್ ಸಿಂಗ್ (35) ಮೃತಪಟ್ಟ ಯೋಧನಾಗಿದ್ದು, ಇವರು ದಾಬಸ್‍ಪೇಟೆಯಲ್ಲಿರುವ ಸಿಐಎಸ್‍ಎಫ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದು, ಸಿಐಎಸ್‍ಎಫ್‍ನಲ್ಲಿ ಕಾನ್‍ಸ್ಟೇಬಲ್ ರ್‍ಯಾಂಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಲಾಖೆಗೆ ಅಗತ್ಯವಿದ್ದ ಎಲೆಕ್ಟ್ರಿಕ್ ಸಾಮಗ್ರಿಗಳನ್ನು ತರಲು ತಮ್ಮ ಬೈಕ್‍ನಲ್ಲಿ ದಾಬಸ್‍ಪೇಟೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಲಕ್ಕೂರು ಬಳಿ ಅವರ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‍ನಿಂದ ರಸ್ತೆಗೆ ಬಿದ್ದ ಸಿಂಗ್ ಅವರು ಲಾರಿಯ ಚಕ್ರದಡಿ ಸಿಲುಕಿದ್ದಾರೆ. ಅಪಘಾತದ ತೀವ್ರತೆಗೆ ಯೋಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪಘಾತದ ಮಾಹಿತಿ ತಿಳಿದ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿ.ಎಫ್: ಕಾರ್ಮಿಕರ ವೇತನ‌ಮಿತಿ ₹ 25,000ಕ್ಕೆ ಹೆಚ್ಚಳ: ಪಿಎಫ್ ಆಯುಕ್ತ ಎಂ. ಸುಬ್ರಹ್ಮಣ್ಯಂ
ವಿದ್ಯಾರ್ಥಿಗಳು ಶಿಸ್ತು ಅಳವಡಿಸಿ: ಡಾ. ಕಣ್ಣೂರ್