ವದಂತಿಗಳಿಗೆ ಕಿವಿಗೊಡದೆ ರಸಗೊಬ್ಬರ ಖರೀದಿಸಿ

KannadaprabhaNewsNetwork |  
Published : Jul 07, 2026, 01:30 AM IST
ಪೋಟೋ 8 : ದಾಬಸ್‍ಪೇಟೆ ಪಟ್ಟಣದ ಸೋಂಪುರ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಹಾಗೂ ನಿರ್ದೇಶಕರು ಮಾತನಾಡಿದರು  | Kannada Prabha

ಸಾರಾಂಶ

ದಾಬಸ್‍ಪೇಟೆ: ಸೋಂಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದಲ್ಲಿ ರೈತರ ಅನುಕೂಲಕ್ಕಾಗಿ ರಸಗೊಬ್ಬರ ಮಾರಾಟ ಮಾಡಲಾಗುತ್ತಿದ್ದು, ವದಂತಿಗಳಿಗೆ ಕಿವಿಗೊಡದೆ ರೈತರು ಸಂಘದಲ್ಲಿ ಲಭ್ಯವಿರುವ ರಸಗೊಬ್ಬರ ಖರೀದಿಸಬಹುದೆಂದು ಸಂಘದ ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದರು

ದಾಬಸ್‍ಪೇಟೆ: ಸೋಂಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದಲ್ಲಿ ರೈತರ ಅನುಕೂಲಕ್ಕಾಗಿ ರಸಗೊಬ್ಬರ ಮಾರಾಟ ಮಾಡಲಾಗುತ್ತಿದ್ದು, ವದಂತಿಗಳಿಗೆ ಕಿವಿಗೊಡದೆ ರೈತರು ಸಂಘದಲ್ಲಿ ಲಭ್ಯವಿರುವ ರಸಗೊಬ್ಬರ ಖರೀದಿಸಬಹುದೆಂದು ಸಂಘದ ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲಮಂಗಲ ತಾಲೂಕಿನಲ್ಲಿ 19 ಸಂಘಗಳಿದ್ದು ಅದರಲ್ಲಿ 6 ಸಂಘಗಳು ಮಾತ್ರವೇ ರಸಗೊಬ್ಬರ ಮಾರಾಟ ಮಾಡಲು ಅನುಮತಿ ದೊರೆತಿದ್ದು, ನಮ್ಮ ಸಂಘದಲ್ಲಿ ಈ ವರ್ಷ 45 ಟನ್ ಯೂರಿಯಾ, 15 ಟನ್ ಡಿಎಪಿ, 15 ಟನ್ 20:20 ಗೊಬ್ಬರವನ್ನು ಮಾರಾಟ ಮಾಡುತ್ತಿದ್ದು ಈಗಾಗಲೇ ಸುಮಾರು 450ಕ್ಕೂ ಹೆಚ್ಚು ರೈತರು ತಮ್ಮ ಎಪ್‌ಐಡಿ ಹಾಗೂ ಆಧಾರ್ ಕಾರ್ಡ್ ನೀಡಿ ರಸಗೊಬ್ಬರ ಖರೀದಿಸಿದ್ದು, ರಸಗೊಬ್ಬರ ಖರೀದಿಸಿ ಸಾಗಾಣಿಕೆ ವೆಚ್ಚ ಹಾಗೂ ಕೂಲಿ ವೆಚ್ಚ ಸೇರಿ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ಆದಾಗ್ಯೂ ಕೆಲವು ಮಾಧ್ಯಮಗಳಲ್ಲಿ ಸತ್ಯಕ್ಕೆ ದೂರವಾದ ವರದಿ ಪ್ರಕಟಿಸಿರುವುದು ವಿಷಾದನೀಯ ಎಂದರು.

ನಿರ್ದೇಶಕ ವೀರಸಾಗರ ಗಂಗರುದ್ರಯ್ಯ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಡಿ ನಾವು ರೈತರ ಅನುಕೂಲಕ್ಕಾಗಿ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ಕೆಲವೊಮ್ಮೆ ಸರ್ವರ್ ಸಮಸ್ಯೆಯಾಗಿ ರೈತರಿಗೆ ರಸಗೊಬ್ಬರ ವಿತರಿಸಲು ಸಮಸ್ಯೆಯಾಗಿದೆ. ಶುರುವಿನಲ್ಲಿ ರೈತರು ಗೊಬ್ಬರದ ಅಭಾವವಿದೆ ಎಂದು ಏಕಕಾಲದಲ್ಲಿ ಬಂದಿದ್ದರಿಂದ ಪ್ರತಿ ರೈತರ ಎಫ್‌ಐಡಿಗೆ ಅನುಗುಣವಾಗಿ ರಸಗೊಬ್ಬರ ನೀಡಿದ್ದು, ಈಗಲೂ ಗೊಬ್ಬರ ಲಭ್ಯವಿದ್ದು ರೈತರು ವದಂತಿಗಳಿಗೆ ಕಿವಿಗೊಡದೆ ಖರೀದಿಸಬಹುದು. ಮಾದ್ಯಮಗಳಲ್ಲಿ ಬಂದಿರುವ ವರದಿ ಸುಳ್ಳಾಗಿದ್ದು, ಇಂತಹ ವರದಿಯಿಂದ ರೈತರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಸಂಘದ ಸಿಇಒ ಭಾನುಪ್ರಕಾಶ್, ನಿರ್ದೇಶಕರಾದ ಶಶಿಧರ್, ಚಂದ್ರಶೇಖರ್, ಕೆಂಪರಾಜು, ಕೃಷ್ಣಮೂರ್ತಿ, ಮಂಜುನಾಥ್ ಇತರರಿದ್ದರು.

ಪೋಟೋ 8 :

ಸೋಂಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ಸಿಇಒ ಭಾನುಪ್ರಕಾಶ್, ನಿರ್ದೇಶಕರಾದ ಶಶಿಧರ್, ಚಂದ್ರಶೇಖರ್, ಕೆಂಪರಾಜು, ಕೃಷ್ಣಮೂರ್ತಿ, ಮಂಜುನಾಥ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3000ಕ್ಕೂ ಅಧಿಕ ಪಿಂಚಣಿ ಕಾರ್ಡ್ ರದ್ದುಗೊಳಿಸಿ ವಂಚನೆ: ನವೀನ್
ರಾಷ್ಟ್ರದ ಹಿತದೃಷ್ಟಿಯಿಂದ ಎಸ್‌ಐಆರ್ ಅಭೂತಪೂರ್ವ ಕಾರ್ಯಕ್ರಮ