ಜಿಲ್ಲೆಯ ರಾಸುಗಳಿಗೆ ವಿಮೆ (ಇನ್ಸೂರೆನ್ಸ್) ಮಾಡಲು ವರ್ಷಕ್ಕೆ ೩ ಬಾರಿ ಅವಕಾಶ ರೈತರ ಹಿತದೃಷ್ಟಿಯಿಂದ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಹೈನೋದ್ಯಮ ರೈತರಿಗೆ ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ಲೀಟರ್ ಹಾಲಿಗೆ ೨ ರು.ಗಳನ್ನು ಹೆಚ್ಚಳ ಮಾಡುವ ಮೂಲಕ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿಯನ್ನು ನೀಡಿದೆ ಎಂದು ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.ತಾಲೂಕಿನ ಬೆಳಗಾನಹಳ್ಳಿಯ ಕೋಮುಲ್ ಹಾಲು ಒಕ್ಕೂಟದ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಳೆಯಿಂದ ಜಾರಿಗೆ ಬರುವ ರೀತಿಯಲ್ಲಿ ಪ್ರತೀ ಲೀಟರ್‌ಗೆ ಹಾಲು ಉತ್ಪಾದಕರಿಗೆ ಒಂದು ಲೀಟರ್ ಹಾಲಿಗೆ ೩೭.೪೦ ಪೈಸೆ ಇದ್ದನ್ನು, ಕೋಮುಲ್ ಆಡಳಿತ ಮಂಡಳಿ ಸಭೆಯಲ್ಲಿ ೩೯.೪೦ ರುಪಾಯಿ ನೀಡಲು ತೀರ್ಮಾನ ಮಾಡಿದೆ ಎಂದು ತಿಳಿಸಿದರು.ಜಿಲ್ಲೆಯ ರಾಸುಗಳಿಗೆ ವಿಮೆ (ಇನ್ಸೂರೆನ್ಸ್) ಮಾಡಲು ವರ್ಷಕ್ಕೆ ೩ ಬಾರಿ ಅವಕಾಶ ರೈತರ ಹಿತದೃಷ್ಟಿಯಿಂದ ಅನುಕೂಲ ಮಾಡಿಕೊಡಲಾಗಿದೆ ಎಂದರು.ಜತೆಯಲ್ಲಿ ರೈತರಿಗೆ ಈ ಮೊದಲು ರಾಸುಗಳ ಇನ್ಸೂರೆನ್ಸ್ ೭೦ ಸಾವಿರ ರು.ಗಳನ್ನು ನಮ್ಮ ಆಡಳಿತ ಮಂಡಳಿಯಲ್ಲಿ ಈಗ ರಾಸುಗಳ ಇನ್ಸೂರೆನ್ಸ್ ೮೦ ಸಾವಿರ ರು.ಗಳಿಗೆ ಹೆಚ್ಚಳ ಮಾಡಲಾಗಿದೆ. ಬೇಸಿಗೆ ಕಾಲ ಪ್ರಾರಂಭವಾಗಿರುವ ನಿಟ್ಟಿನಲ್ಲಿ ಹಸಿರುಮೇವು ಬೆಳೆಯಲು ಒಂದು ಎಕರೆಗೆ ೩ ಸಾವಿರ ರೂಪಾಯಿ ಪ್ರೋತ್ಸಾಹಧನ ರೈತರಿಗೆ ನೀಡಲಾಗುತ್ತದೆ ಎಂದರು.
ಜಿಲ್ಲೆಯ ಎಂವಿಕೆ ಗೋಲ್ಡನ್ ಡೇರಿ ಮತ್ತು ಸೋಲಾರ್ ಪ್ಲಾಂಟ್ ಅನ್ನು 2-3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸಿಎಂ, ಡಿಸಿಎಂ ಸೇರಿದಂತೆ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರು ಸೇರಿದಂತೆ, ಸಂಸದರು ಸಹಕಾರ ನೀಡಿದ್ದು ಉದ್ಘಾಟನೆಗೆ ಆಹ್ವಾನ ನೀಡಲಾಗುವುದೆಂದರು.ಹಾಲು ಉತ್ಪಾದಕರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ನಿವೃತ್ತಿ ವೇತನ ೫ ಲಕ್ಷಗಳಿಗೆ ಕೋಮುಲ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದರಲ್ಲದೆ, ನಮ್ಮ ಸಂಸ್ಥೆಯಲ್ಲಿ ೨೦೨ ಖಾಯಂ ಸಿಬ್ಬಂದಿ ಇದ್ದು, ಅವರಿಗೆ ೭೫ ಸಾವಿರ ರೂಪಾಯಿ ಬೋನಸ್ ಕೊಡಲಾಗುವುದು ಎಂದು ಹೇಳಿದರು.ಗುತ್ತಿಗೆ ಕಾರ್ಮಿಕರು ೧೧೦೫ ಜನ ಇದ್ದು, ಒಟ್ಟು ೩.೫ ಕೋಟಿ ರೂ ಬೋನಸ್ ನೀಡಲು ತೀರ್ಮಾನವಾಗಿದೆ.೬೮ ಕೋಟಿ ವೆಚ್ಚದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ: ೫.೫ ಲಕ್ಷ ಯೂನಿಟ್ ಹೆಚ್ಚಿಗೆ ಇದೆ. ೨೪೩ ಬಿಎಂಸಿಗಳು ನಮ್ಮಲ್ಲಿ ಇದೆ ಹೆಚ್ಚುವರಿ ಯುನಿಟ್‌ನನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕ್ರಮ ವಹಿಸಿದ್ದೇವೆ ಎಂದು ಮಾಹಿತಿ ನೀಡಿದರು.ಸೋಲಾರ್ ಪ್ಲಾಂಟ್‌ನಿಂದ ೧ ಕೋಟಿ ೨೦ ಲಕ್ಷ ರೂಪಾಯಿ ಒಂದು ತಿಂಗಳಿಗೆ ಉಳಿತಾಯ ಆಗ್ತಿದೆ ಎಂದು ನುಡಿದರು.ಸುದ್ದಿಗೋಷ್ಠಿಯಲ್ಲಿ ಕೋಮಲ್ ನಿರ್ದೇಶಕರಾದ ಡಾ.ಹನುಮೇಶ್, ಚೆಲುವನಹಳ್ಳಿ ನಾಗರಾಜ್, ಮಹಾಲಕ್ಷ್ಮಿ ಪ್ರಸಾದ್ ಬಾಬು, ಕೆ.ಕೆ.ಮಂಜು, ಮಹಮದ್ ಶರೀಫ್, ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲ ಮೂರ್ತಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.