ಕೇಂದ್ರದ ಯೋಜನೆಗಳ ಕುರಿತು ಜಾಗೃತಿ ಮೂಡಿಸುವುದೆ ಯಾತ್ರೆ ಉದ್ದೇಶ: ಮಲ್ಲಿಕಾರ್ಜುನ ಹಾರಕೊಡ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೊಡ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಪ್ರಭ ವಾರ್ತೆ ಚಿತ್ತಾಪುರ ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು ಎಂಬುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದು ಪುರಸಭೆ ವ್ಯವಸ್ಥಾಪಕಾರ ಮಲ್ಲಿಕಾರ್ಜುನ ಹಾರಕೊಡ ಹೇಳಿದರು.

ವಾಡಿ ಪಟ್ಟಣದ ರೈಲ್ವೆ ನಿಲ್ದಾಣದ ಹತ್ತಿರ ಆಯೋಜಿಸಿದ ವಿಕಸಿತ ಭಾರತದ ಸಂಕಲ್ಪ ಯಾತ್ರೆಯಲ್ಲಿ ‌ಭಾಗವಹಿಸಿ ಮಾತನಾಡಿದ ಅವರು, ವಿಕಸಿಕ ಭಾರತ ಸಂಕಲ್ಪ ಅಭಿಯಾನ ದೇಶದಾದ್ಯಂತ ನಡೆಯುತ್ತಿದ್ದು, ಇದು ಬರುಬ ಜ.೨೫ ರವರೆಗೆ ನಡೆಯಲಿದೆ. ಜಿಲ್ಲೆಯ ಪ್ರತಿ ಗ್ರಾಮ ಮತ್ತು ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಹಾಗೂ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಸಂಚರಿಸಲಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು.

ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ಅನಿಲ ದೊಡ್ಡಮನಿ, ಕೆನರಾ ಬ್ಯಾಂಕ್ ನ ಪ್ರಾಯೋಜಕರಾದ ರೇಖಾ ತಲ್ವಾರ, ಬಿಜೆಪಿ ತಾಲೂಕು ಎಸ್.ಸಿ ಮೋರ್ಚಾಚ ಅಧ್ಯಕ್ಷ ರಾಜು ಮುಕ್ಕಣ್ಣ, ಬಿಜೆಪಿ ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ, ಪುರಸಭೆ ಸಿಬ್ಬಂದಿ ಮುತ್ತಣ್ಣ ಭಂಡಾರಿ, ಮನೋಜ್ ಕುಮಾರ ಹೀರೋಳ್ಳಿ, ಮಾತನಾಡಿದರು. ರೇಣುಕಾ ಪ್ರಧಾನಿ ಸ್ವಾಗತಿಸಿ ನಿರೂಪಿಸಿದರು.

ಉಜ್ವಲ ಯೋಜನೆಯ ಫಲಾನುಭವಿ ಸುಜಾತ ವಿಶ್ವನಾಥ ಅವರಿಗೆ ಗ್ಯಾಸ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಭಗವತ ಸುಳೆ, ಅನ್ವರ ಸರ್, ರೈಲ್ವೆ ಸ್ಟೇಷನ್ ಮಾಸ್ಟರ್‌ ಜೆ.ಎನ್ ಪರಿಡಾ, ಎಸ್ ಬಿಐ ಬ್ರ‍್ಯಾಂಚ್ ವ್ಯವಸ್ಥಪಕರಾದ ಸಂದೀಪ್ ಪಿ ಹಾಗೂ ಪಟ್ಟಣದ ಮುಖಂಡರಾದ ರ‍್ಜುನ ಕಾಳೆಕರ, ಸಿದ್ದಣ ಕಲ್ಲಶೆಟ್ಟಿ, ಗಿರಿಮಲ್ಲಪ್ಪ ಕಟ್ಟಿಮನಿ, ಕಿಶನ ಜಾಧವ, ಶರಣಗೌಡ ಚಾಮನೂರ, ಹರಿ ಗಲಾಂಡೆ, ಅಶೋಕ ದಹಿಹಂಡೆ, ರವಿ ನಾಯಕ, ಅಂಬದಾಸ ಜಾಧವ, ಭಾಗಣ್ಣ ದೊರೆ, ಅಭಿಷೇಕ ರಾಠೋಡ, ಪ್ರಮೋದ್ ಚೊಪಡೆ, ವಿ.ಕೆ ಕದಲಯ್ಯ, ಜಯದೇವ ಜೊಗಿಕಲಮಠ, ಅಶೋಕ ಕಾನಕರ‍್ತೆ, ಶಿವಶಂಕರ ಕಾಶೇಟ್ಟಿ, ಜಯಂತ ಪವಾರ,ಶಿವು ಹೂಗಾರ, ಮಾರೆಡ್ಡಿ, ಪ್ರಕಾಶ ಪುಜಾರಿ, ದೌವಲತ್ತರಾವ ಚಿತ್ತಾಪುರಕರ, ದತ್ತ ಕೈರೆ, ಭರತ ರಾಠೋಡ, ಮಹೇಶ್ ಕುರಕುಂಟ, ಸತೀಶ ಸಾವಳಗಿ ಸೇರಿದಂತೆ ಅನೇಕರು ಇದ್ದರು.

Share this article