ಶ್ರೀಕೃಷ್ಣನ ಆದರ್ಶ ಪಾಲಿಸಿ, ಧರ್ಮ ಮಾರ್ಗದಲ್ಲಿ ನಡೆಯಿರಿ: ಡಾ.ಜೆ.ಎನ್.ರಾಮಕೃಷ್ಣೇಗೌಡ

KannadaprabhaNewsNetwork |  
Published : Aug 30, 2024, 01:09 AM IST
29ಕೆಎಂಎನ್ ಡಿ14 | Kannada Prabha

ಸಾರಾಂಶ

ಮಕ್ಕಳ ಶ್ರೀಕೃಷ್ಣ-ರಾಧೆಯಲ್ಲಿ ನೋಡಿ ನಿಜವಾದ ಕೃಷ್ಣನನ್ನೇ ನೋಡಿದ್ದಷ್ಟು ಖುಷಿಯಾಗಿದೆ. ಮನೆಗಳಲ್ಲಿ ಮಕ್ಕಳು ತುಂಟಾಟ, ಚೇಸ್ಟೆ ಮಾಡುವುದು ಸಾಮಾನ್ಯ. ಅದಕ್ಕಾಗಿ ಪೋಷಕರು ಮಕ್ಕಳ ಮೇಲೆ ಸಿಟ್ಟಾಗಬಾರದು, ತುಂಟಾಟವಾಡುವ ಮಕ್ಕಳು ಸದಾ ಆರೋಗ್ಯವಾಗಿರುತ್ತಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳು ಶ್ರೀಕೃಷ್ಣನ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಧರ್ಮಮಾರ್ಗದಲ್ಲಿ ನಡೆಯಬೇಕು ಎಂದು ಬಿಜಿಎಸ್ ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.

ತಾಲೂಕಿನ ಚಿನಕುರಳಿಯ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಅಂಗವಾಗಿ ಮಕ್ಕಳ ಶ್ರೀಕೃಷ್ಣ-ರಾಧೆ ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ವಿಷ್ಣುವಿನ ಹಲವು ಅವತಾರಗಳಲ್ಲಿ ಶ್ರೀಕೃಷ್ಣನ ಅವತಾರವು ಸಹ ಒಂದಾಗಿದೆ ಎಂದರು. ಧರ್ಮಸ್ಥಾಪನೆಗಾಗಿ ಜನ್ಮತಾಳಿದ ಅವರು ದುಸ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಣೆ ಮಾಡುತ್ತಿದ್ದರು. ಅದಕ್ಕಾಗಿಯೇ ಅವರು ಕುರುಕ್ಷೇತ್ರ ಯುದ್ದದಲ್ಲಿ ಧರ್ಮದ ಪರವಾದ ಪಾಂಡವ ಕಡೆಗೆ ನಿಂತು ಕೌರವರನ್ನು ಸಂಹರಿಸಿದರು. ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದರು ಎಂದರು.

ಮಕ್ಕಳ ಶ್ರೀಕೃಷ್ಣ-ರಾಧೆಯಲ್ಲಿ ನೋಡಿ ನಿಜವಾದ ಕೃಷ್ಣನನ್ನೇ ನೋಡಿದ್ದಷ್ಟು ಖುಷಿಯಾಗಿದೆ. ಮನೆಗಳಲ್ಲಿ ಮಕ್ಕಳು ತುಂಟಾಟ, ಚೇಸ್ಟೆ ಮಾಡುವುದು ಸಾಮಾನ್ಯ. ಅದಕ್ಕಾಗಿ ಪೋಷಕರು ಮಕ್ಕಳ ಮೇಲೆ ಸಿಟ್ಟಾಗಬಾರದು, ತುಂಟಾಟವಾಡುವ ಮಕ್ಕಳು ಸದಾ ಆರೋಗ್ಯವಾಗಿರುತ್ತಾರೆ ಎಂದರು.

ಬಿಜಿಎಸ್ ಶಿಕ್ಷಣ ಸಂಸ್ಥೆಯೂ ಮಕ್ಕಳ ಮಕ್ಕಳ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.

ಹಿರಿಯ ಪತ್ರಕರ್ತ ಬಿ.ಎಸ್.ಜಯರಾಮು ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯೂ ಪ್ರತಿಬಾರಿ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ನಡೆಸುತ್ತಿದೆ. ಇಂದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಪತ್ರಕರ್ತ ಚನ್ನಮಾದೇಗೌಡ ಮಾತನಾಡಿ, ಶ್ರೀಕೃಷ್ಣ ಧರ್ಮಪಾಲನೆಗಾಗಿ ಅವತಾರತಾಳಿದರು. ಸದಾ ಸತ್ಯ, ನ್ಯಾಯದ ಪರವಾಗಿ ನಿಲ್ಲುತ್ತಿದ್ದ ಶ್ರೀಕೃಷ್ಣನ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಸತ್ಯ, ನ್ಯಾಯ, ಧರ್ಮವಾಗಿ ನಡೆಯಬೇಕೆಂದು ಸಲಹೆ ನೀಡಿದರು.

ಮತ್ತೊರ್ವ ಎಸ್.ರಾಜು ಮಾತನಾಡಿ, ಮನೆಗಳಲ್ಲಿ ಮಕ್ಕಳು ಹೆಚ್ಚು ಮೊಬೈಲ್ ಗೀಳಿಗೆ ಒಳಗಾಗುತ್ತಿದ್ದಾರೆ. ಪೋಷಕರ ಸಾಧ್ಯವಾದಷ್ಟು ಮಕ್ಕಳಿಗೆ ರಾಮಾಯಣ, ಮಹಾಭಾರತದ ಬಗ್ಗೆ ಅರಿವು ಮೂಡಿಸಬೇಕೆಂದರು.

ಶಾಲೆಯನ್ನು ಮಕ್ಕಳು ನೃತ್ಯದ ಮೂಲಕ ಕುರುಕ್ಷೇತ್ರದ ಯುದ್ಧವನ್ನು ಪ್ರದರ್ಶಿಸಿದ ಪರಿ ಎಲ್ಲರನ್ನು ಗಮನ ಸೆಳೆಯಿತು. ಬಳಿಕ ಶ್ರೀಕೃಷ್ಣ-ರಾಧೆ ವೇಷಧಾರಿಗಳು ಹಲವು ಹಾಡಿಗೆ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಉತ್ತಮ ಕೃಷ್ಣ-ರಾಧೆ ವೇಷಾಧಾರಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಮಾರಂಭದಲ್ಲಿ ಗ್ರಾಪಂ ಮಾಜಿ ಸದಸ್ಯ ಸಿ.ಡಿ.ಮಹದೇವು, ಪತ್ರಕರ್ತರಾದ ಎಸ್.ನಾಗಸುಂದರ್, ಎಸ್.ರವಿಕುಮಾರ್, ಶ್ರೀಕಾಂತ್, ಪ್ರಾಂಶುಪಾಲ ಚಿದಂಬರ್ ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ಪೋಷಕರು ಹಾಜರಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?