ಕನ್ನಡಪ್ರಭ ವಾರ್ತೆ ಹಳೇಬೀಡುಹುಟ್ಟು ಆಕಸ್ಮಿಕ, ಸಾವು ಖಚಿತ. ಅದರಲ್ಲಿ ಮನುಷ್ಯನ ಜನ್ಮ ಅದರಲೂ ರೈತನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಹಲವಾರು ಕಷ್ಟ ಸುಖಗಳು ಬರುತ್ತದೆ. ಅದನ್ನು ಇದ್ದು ಸಾಧಿಸಬೇಕು ಎಂದು ಪುಷ್ಪಗಿರಿ ಮಹಾ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ತಿಳಿಸಿದರು.ಹಳೇಬೀಡು ಸಮೀಪದ ಕಟ್ಟೆ ಸೋಮನಹಳ್ಳಿ ಗ್ರಾಮದ ಕೃಷಿ ಸಾಲ ಹಾಗೂ ಬೆಳೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರಮೇಶ್ ಎಂಬುವವರ ಮನೆಗೆ ಭೇಟಿ ನೀಡಿ ಪುಷ್ಪಗಿರಿ ಮಹಾಸಂಸ್ಥಾನ ಮತ್ತು ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ವತಿಯಿಂದ ಅವರ ಕುಟುಂಬಕ್ಕೆ ಧನಸಹಾಯ ನೀಡುತ್ತಾ ರಮೇಶ ಊರಿನ ಹಿತವನ್ನು ಕಾಪಾಡುವಂತ ವ್ಯಕ್ತಿಯಾಗಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂದಾಳತ್ವವನ್ನು ನಡೆಸಿಕೊಂಡು ನಮ್ಮ ಮಠದ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಅವರ ಮಕ್ಕಳ ಮುಂದಿನ ಜೀವನಕ್ಕೆ ಹಣ ಸಹಾಯವನ್ನು ಮಾಡಿ ಸರ್ಕಾರದ ಸೌಲಭ್ಯಗಳು ಏನು ಬರುವುದು ತಿಳಿದುಕೊಂಡು ಅಧಿಕಾರಿಗೆ ಸೂಚನೆ ನೀಡುತ್ತೇನೆ. ಯಾವ ಬ್ಯಾಂಕಿನ ಅಧಿಕಾರಿಗಳು ಸಹ ರೈತರಿಗೆ ಈ ರೀತಿ ತೊಂದರೆ ಕೊಡಬೇಡಿ. ರೈತನ ಜೀವನದಲ್ಲಿ ಒಂದು ಬಾರಿ ಹಣ ಸಿಕ್ಕರೆ ನಾಲ್ಕು ಬಾರಿ ನಷ್ಟವಾಗಿರುತ್ತದೆ. ರೈತರ ಆತ್ಮಹತ್ಯೆ ಜಾಸ್ತಿಯಾಗಿದೆ. ಹಾಗಾಗಿ ಬ್ಯಾಂಕಿನ ಅಧಿಕಾರಿಗಳು ಅವರ ಕುಟುಂಬವನ್ನು ನೋಡಬೇಕು. ದೇಶಕ್ಕೆ ಅನ್ನ ನೀಡುವ ರೈತ ಹೀಗೆ ಆತ್ಮಹತ್ಯೆ ಮಾಡಿಕೊಂಡರೆ ಮುಂದೆ ದೇಶಕ್ಕೆ ಅನ್ನ ನೀಡದವರು ಯಾರು ಎಂದು ಪ್ರಶ್ನಿಸಿದರು.