ಬಾಳೆಹೊನ್ನೂರಲ್ಲಿ ಪುಷ್ಯ ಮಳೆಯ ಆರ್ಭಟ

KannadaprabhaNewsNetwork |  
Published : Jul 20, 2024, 12:45 AM IST
೧೯ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ಮಹಲ್ಗೋಡು ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿರುವ ಕಾರಣ ಪಿಎಸ್‌ಐ ರವೀಶ್ ನೇತೃತ್ವದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನಗಳು ತೆರಳದಂತೆ ನಿರ್ಬಂಧಿಸಿದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಕಳೆದ ಆರು ದಿನಗಳಿಂದ ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರುಣನ ಅಬ್ಬರ ಶುಕ್ರವಾರವೂ ಮುಂದುವರಿದಿದ್ದು, ಪುಷ್ಯ ಮಳೆ ಮೊದಲ ದಿನವೇ ಆರ್ಭಟಿಸಿದೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಳೆದ ಆರು ದಿನಗಳಿಂದ ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರುಣನ ಅಬ್ಬರ ಶುಕ್ರವಾರವೂ ಮುಂದುವರಿದಿದ್ದು, ಪುಷ್ಯ ಮಳೆ ಮೊದಲ ದಿನವೇ ಆರ್ಭಟಿಸಿದೆ.ಬಾಳೆಹೊನ್ನೂರು ಸಮೀಪದ ಮಾಗುಂಡಿ ಮೂಲಕ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತುವೆ ಮೇಲ್ಭಾಗದಲ್ಲಿ ಶುಕ್ರವಾರವೂ ಭದ್ರಾನದಿ ನೀರು ಉಕ್ಕಿ ಹರಿದಿದ್ದು, ಆ ಭಾಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಇನ್ನು ಈ ಸೇತುವೆ ಸೈಡ್ ವಾಲ್‌ಗಳ ಬದಿಯಲ್ಲಿ ಕುಸಿತವೂ ಆಗುತ್ತಿದ್ದು ಸೇತುವೆಗೆ ಹಾನಿಯಾಗುವ ಆತಂಕ ಎದುರಾಗಿದೆ.ಬಾಳೆಹೊನ್ನೂರು ಪಿಎಸ್‌ಐ ರವೀಶ್ ನೇತೃತ್ವದಲ್ಲಿ ಪೊಲೀಸರು ಮಹಲ್ಗೋಡಿಗೆ ತೆರಳಿ ಸೇತುವೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳು ಸಂಚರಿಸದಂತೆ ನಿರ್ಬಂಧ ವಿಧಿಸಿದರು. ಹೊರನಾಡು ಕಳಸ ತೆರಳುವ ಪ್ರಯಾಣಿಕರು ಬದಲಿ ಮಾರ್ಗವಾಗಿ ಬಾಳೆಹೊನ್ನೂರು-ಮಾಗುಂಡಿ- ಬಾಳೂರು- ಹಿರೇಬೈಲು- ಕಳಸ- ಹೊರನಾಡು ಹಾಗೂ ಬಾಳೆ ಹೊನ್ನೂರು- ಜಯಪುರ- ಬಸರೀಕಟ್ಟೆ- ಬಾಳೆಹೊಳೆ- ಕಳಸ- ಹೊರನಾಡುಗೆ ಹೋಗುವಂತೆ ಸೂಚಿಸಿದರು.ಮಾಗುಂಡಿ ಸಮೀಪದ ತೆಪ್ಪದಗಂಡಿ ಬಳಿಯೂ ಮುಖ್ಯರಸ್ತೆಯಲ್ಲಿ ಭದ್ರಾ ನದಿ ನೀರು ಬಂದು ನಿಂತಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಭದ್ರಾನದಿಯಲ್ಲಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿರುವುದಲ್ಲದೇ ಹಲವು ತೋಟ, ಗದ್ದೆಗಳಿಗೆ ನೀರು ನುಗ್ಗಿದ್ದು, ಹಲವಾರು ಗಂಟೆಗಳ ಕಾಲ ಪ್ರವಾಹದ ನೀರು ಜಮೀನುಗಳಲ್ಲಿ ಇತ್ತು.ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಮುಖ್ಯರಸ್ತೆಗೆ ಶುಕ್ರವಾರ ಮಧ್ಯಾಹ್ನದ ವೇಳೆಗೆ ಬಿದ್ದಿದ್ದ ಮರವನ್ನು ಕೂಡಲೇ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮಳೆಯೊಂದಿಗೆ ನಿರಂತರ ಗಾಳಿಯೂ ಬೀಸುತ್ತಿದ್ದು, ಹಲವು ಕಡೆಗಳಲ್ಲಿ ಪುನಃ ವಿದ್ಯುತ್ ಕಂಬಗಳು ಧರೆಗುರುಳಿ ಹಾನಿಯಾಗಿವೆ. ಹಲವಾರು ಗ್ರಾಮಗಳು ಕಳೆದ ಎರಡ್ಮೂರು ದಿನಗಳಿಂದ ವಿದ್ಯುತ್ ಇಲ್ಲದೇ ಕತ್ತಲಲ್ಲಿ ಮುಳುಗಿವೆ.

೧೯ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಮಹಲ್ಗೋಡು ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿರುವ ಕಾರಣ ಪಿಎಸ್‌ಐ ರವೀಶ್ ನೇತೃತ್ವದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನಗಳು ತೆರಳದಂತೆ ನಿರ್ಬಂಧಿಸಿದರು.

೧೯ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಮಹಲ್ಗೋಡು ಸೇತುವೆ ಬದಿಯಲ್ಲಿ ಕುಸಿತಗೊಂಡಿರುವುದು

೧೯ಬಿಹೆಚ್‌ಆರ್ ೩:

ಬಾಳೆಹೊನ್ನೂರಿನಿಂದ ಹಲಸೂರು ಮಾರ್ಗವಾಗಿ ಮಾಗುಂಡಿ-ಮಹಲ್ಗೋಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಿರು ಹಳ್ಳದ ಮೇಲೆ ನೀರು ಉಕ್ಕಿ ಹರಿದು, ಮರ ಬಿದ್ದು ಅಡಚಣೆ ಉಂಟಾಗಿರುವುದನ್ನು ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ತೆರವುಗೊಳಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ