ಪುಟ್ಟರಾಜರ ಆದರ್ಶ ಸರ್ವರಿಗೂ ಪ್ರೇರಣೆ

KannadaprabhaNewsNetwork |  
Published : Sep 04, 2025, 01:01 AM IST
೦೩ ವೈಎಲ್‌ಬಿ ೦೪ಯಲಬುರ್ಗಾ ತಾಲೂಕಿನ ಕರಮುಡಿಯಲ್ಲಿ ಗಜಾನನ ಮಹೋತ್ಸವ ಹಾಗೂ ಪಂ.ಪುಟ್ಟರಾಜ ಗವಾಯಿಗಳ ೧೫ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ, ಸಾಧಕರಿಗೆ ಸನ್ಮಾನ ಶಾಸಕ ಬಸವರಾಜ ರಾಯರಡ್ಡಿ ಭಾಗವಹಿಸಿದ್ದರು. | Kannada Prabha

ಸಾರಾಂಶ

ಗವಾಯಿಗಳ ಆಶ್ರಮದಲ್ಲಿ ನೆಲೆಸಿ, ಸಂಗೀತ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡ ಸಹಸ್ರಾರು ಅಂಧ, ಅನಾಥ ಕಲಾವಿದರು ಜಗತ್ತಿನಲ್ಲಿ ಹೆಸರು ಮಾಡಿದ್ದಾರೆ. ಅಂಥ ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು.

ಯಲಬುರ್ಗಾ:

ಲಕ್ಷಾಂತರ ಅಂಧರ ಬಾಳಿಗೆ ಬೆಳಕು ನೀಡಿದ ಪಂ. ಪುಟ್ಟರಾಜ ಗವಾಯಿಗಳ ಆದರ್ಶ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಕರಮುಡಿ ಗ್ರಾಮದ ಕರ್ನಾಟಕ ಯುವಕ ಮಂಡಳಿಯಿಂದ ಗಜಾನನ ಮಹೋತ್ಸವ ಹಾಗೂ ಪಂ. ಪುಟ್ಟರಾಜ ಗವಾಯಿಗಳ ೧೫ನೇ ಪುಣ್ಯಸ್ಮರಣೆ ಅಂಗವಾಗಿ ಕೆಎಸ್‌ ಆಸ್ಪತ್ರೆ ಮತ್ತು ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಗವಾಯಿಗಳ ಆಶ್ರಮದಲ್ಲಿ ನೆಲೆಸಿ, ಸಂಗೀತ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡ ಸಹಸ್ರಾರು ಅಂಧ, ಅನಾಥ ಕಲಾವಿದರು ಜಗತ್ತಿನಲ್ಲಿ ಹೆಸರು ಮಾಡಿದ್ದಾರೆ. ಅಂಥ ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು. ಎಲ್ಲರೂ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದರು.

ಈ ವೇಳೆ ಕಳಕಪ್ಪ ಕುರಿ ಮಾಸ್ತರ್, ರಾಮಣ್ಣ ಹೊಕ್ಕಳದ, ಶಕುಂತಲಾದೇವಿ ಮಾಲಿಪಾಟೀಲ್, ಚನ್ನಮ್ಮ ಪಾಟೀಲ್, ರಾಮಣ್ಣ ಮಾನಶೆಟ್ಟರ್, ಲಿಂಗರಾಜ ಉಳ್ಳಾಗಡ್ಡಿ, ಬಸವರಾಜ ನಿಡಶೇಸಿ, ಇಮಾಮ್‌ಸಾಬ್ ಗುಳೇದಗುಡ್ಡ, ರವಿಚಂದ್ರ ಕೆಂಚರೆಡ್ಡಿ, ನಿಖಿಲ್ ಗೊಂಗಡಶೆಟ್ಟಿ, ಮಂಜುನಾಥ ಕುಕನೂರ, ಗೌಡಪ್ಪ ಕೆಂಚರೆಡ್ಡಿ, ಬಿ.ಎನ್. ಪಾಟೀಲ್, ಶರಣಗೌಡ ಪೊಲೀಸ್‌ಪಾಟೀಲ್, ಪರಸಪ್ಪ ಲಮಾಣಿ, ಗೌಡಪ್ಪ ಬಲಕುಂದಿ, ನಾಗರಾಜ ಸುಣಗಾರ, ಶರಣಪ್ಪ ಕುರಿ, ಹುಚ್ಚೀರಪ್ಪ ಲಮಾಣಿ, ಮಂಜಯ್ಯಸ್ವಾಮಿ ಗದುಗಿನಮಠ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಡಿಎ ಮೈತ್ರಿ ಕೂಟದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ
ಪತ್ರಕರ್ತರಿಗೆ ಸ್ಪಂದಿಸುತ್ತಿದ್ದ ಶಾಮನೂರು ಸದಾ ಸ್ಮರಣೀಯ