ಕಾಮ, ಕ್ರೋಧ ಗೆಲ್ಲುವುದೇ ಬದುಕಿನ ನಿಜವಾದ ಯಶಸ್ಸು: ಡಾ. ಪ್ರಸನ್ನಕುಮಾರ

KannadaprabhaNewsNetwork |  
Published : Sep 04, 2025, 01:01 AM IST
ಹಾನಗಲ್ಲಿನಲ್ಲಿ ಶರಣ ಸಂಗಮ ಕಾರ್ಯಕ್ರಮವನ್ನು ಪುರಸಭೆ ಅಭಿಯಂತರ ನಾಗರಾಜ ಮಿರ್ಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾಮ ಕ್ರೋಧಗಳನ್ನು ಗೆಲ್ಲುವುದೇ ಬದುಕಿನ ನಿಜವಾದ ಯಶಸ್ಸು. ನಮ್ಮ ಮನಸ್ಸನ್ನು ಮೃಗತ್ವಕ್ಕೆ ಅಂಟಿಸದೇ ಸಾತ್ವಿಕತೆಗೆ ಒಳಪಡಿಸಬೇಕು.

ಹಾನಗಲ್ಲ: ಸರಳ ಸಜ್ಜನಿಕೆಯನ್ನೂ ಒಳಗೊಂಡು ಪವಾಡ ಸದೃಶ್ಯ ಜೀವನದ ಮೂಲಕ ಬಿಜ್ಜಳನ ಸಾಮ್ರಾಜ್ಯದಲ್ಲಿದ್ದು ಕೂಡ ತಮ್ಮ ಆದಾಯದ ಬಹುಭಾಗವನ್ನು ಜಂಗಮ ಸೇವೆಗೆ ಮೀಸಲಿಟ್ಟಿದ್ದ ಶರಣ ಚೋದರ ಮಾಯಣ್ಣ ಬಸವಣ್ಣನ ಆಪ್ತರಲ್ಲಿ ಆಪ್ತರಾಗಿದ್ದರು ಎಂದು ಡಾ. ಎಂ. ಪ್ರಸನ್ನಕುಮಾರ ತಿಳಿಸಿದರು.ಪಟ್ಟಣದ ಕುಮಾರೇಶ್ವರ ವಿರಕ್ತಮಠದಲ್ಲಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಚೋದರ ಮಾಯಣ್ಣನ ಶರಣ ಧರ್ಮ ಪಾಲನೆ ಕುರಿತು ಮಾತನಾಡಿ, ಕಾಮ ಕ್ರೋಧಗಳನ್ನು ಗೆಲ್ಲುವುದೇ ಬದುಕಿನ ನಿಜವಾದ ಯಶಸ್ಸು. ನಮ್ಮ ಮನಸ್ಸನ್ನು ಮೃಗತ್ವಕ್ಕೆ ಅಂಟಿಸದೇ ಸಾತ್ವಿಕತೆಗೆ ಒಳಪಡಿಸಬೇಕು. ಚೋದರ ಮಾಯಣ್ಣನ ಕೇವಲ 3 ವಚನಗಳು ಲಭ್ಯವಿದ್ದರೂ ಅದರಲ್ಲಿ ಅದ್ಭುತವಾದ ಜೀವನ ವಿಧಾನವನ್ನು ಅರುಹಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭೆ ಅಭಿಯಂತರ ನಾಗರಾಜ ಮಿರ್ಜಿ, ಸಾಮಾಜಿಕ ಹಿತಕ್ಕೆ ಪೂರಕವಾದ ಚಿಂತನೆಗಳು ಬೇಕಾಗಿವೆ. ಎಲ್ಲ ಕಾಲಕ್ಕೂ ಸಲ್ಲುವ ವಚನಗಳಲ್ಲಿ ಕೇವಲ ಬೌದ್ಧಿಕ ಬರಹ ಮಾತ್ರವಲ್ಲ, ಅಂತರಂಗ ಅರಳಲು, ಬದುಕನ್ನು ಹದಗೊಳಿಸಿಕೊಂಡು ಸೌಹಾರ್ದದಿಂದ ಬದುಕುವ ಸಂದೇಶಗಳಿವೆ. ವಚನಗಳಲ್ಲಿನ ಸತ್ಯಗಳನ್ನು ಅರಿತು ಅಳವಡಿಸಿಕೊಳ್ಳವ ತೀರ ಅಗತ್ಯವಿದೆ ಎಂದರು.

ಆಶಯ ನುಡಿಗಳನ್ನಾಡಿದ ಶಿಕ್ಷಕಿ ಶೋಭಾ ಪಾಟೀಲ, ಶರಣ ಸಾಹಿತ್ಯ ಪರಿಷತ್ತು ವಚನಗಳ ಸಾರವನ್ನು ಮನೆ ಮನೆಗೆ ತಲುಪಿಸುವ ಕೈಂಕರ್ಯದಲ್ಲಿದೆ ಎಂದರು.ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಕೆ. ಕಲ್ಲನಗೌಡರ, ನಗರ ಘಟಕದ ಕಾರ್ಯದರ್ಶಿ ಸುಭಾಸ ಹೊಸಮನಿ, ಕದಳಿ ಮಾಜಿ ಅಧ್ಯಕ್ಷೆ ಅಕ್ಕಮ್ಮ ಕುಂಬಾರಿ, ಸುಮಂಗಲಾ ಕಟ್ಟಿಮಠ, ಲೀಲಾವತಿ ಪೂಜಾರ, ಅಕ್ಕಮ್ಮ ಶೆಟ್ಟರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ