ಗುಂಡ್ಲುಪೇಟೇಲಿ ಉಪ್ಪಾರ ಭವನಕ್ಕೆ ಪುಟ್ಟರಂಗಶೆಟ್ಟಿ, ಗಣೇಶ್‌ ಪ್ರಸಾದ್‌ ಭೂಮಿ ಪೂಜೆ

KannadaprabhaNewsNetwork |  
Published : Aug 17, 2025, 01:38 AM IST
ಉಪ್ಪಾರ ಭವನಕ್ಕೆ ಶಾಸಕ ಪುಟ್ಟರಂಗಶೆಟ್ಟಿ,ಗಣೇಶ್‌ ಭೂಮಿ ಪೂಜೆ  | Kannada Prabha

ಸಾರಾಂಶ

ಪಟ್ಟಣದಲ್ಲಿ ₹೭ ಕೋಟಿ ವೆಚ್ಚದಲ್ಲಿ ಭಗೀರಥ ಉಪ್ಪಾರ ಸಮುದಾಯ ಭವನಕ್ಕೆ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಜೊತೆಗೂಡಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಪಟ್ಟಣದಲ್ಲಿ ₹೭ ಕೋಟಿ ವೆಚ್ಚದಲ್ಲಿ ಭಗೀರಥ ಉಪ್ಪಾರ ಸಮುದಾಯ ಭವನಕ್ಕೆ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಜೊತೆಗೂಡಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ಪಟ್ಟಣದ ನಾಲ್ಕನೇ ವಿಭಾಗ ಪಿ.ಕೆ ಕಾಲೋನಿಯ ನಿವೇಶನದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ನಾನು ಸಚಿವನಾಗಿದ್ದ ಸಮಯದಲ್ಲಿ ಉಪ್ಪಾರ ಸಮುದಾಯ ಭವನಕ್ಕೆ ₹೩೦ ಲಕ್ಷ ಅನುದಾನ ಮಂಜೂರು ಮಾಡಿಸಿದ್ದೇ ಎಂದರು.

ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕೂಡ ಉಪ್ಪಾರರ ನಿವೇಶನ ಖರೀದಿಸಲು ವೈಯಕ್ತಿಕವಾಗಿ ₹೮ ಲಕ್ಷ ದಾನ ನೀಡಿದ್ದರು. ಈಗ ಶಾಸಕರ ಅನುದಾನದಲ್ಲಿ ನಿವೇಶನಕ್ಕೆ ಸುತ್ತುಗೋಡೆ ಹಾಕಿಸಿದ್ದರು ಎಂದರು.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಶ್ರಾವಣ ಶನಿವಾರ ಗುದ್ದಲಿ ಪೂಜೆ ನಡೆದಿದ್ದು ಸಂತಸ. ಉಪ್ಪಾರ ಭವನ ನಿರ್ಮಾಣಕ್ಕೆ ಅನುದಾನ ನೀಡುತ್ತೇನೆ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಎಂದು ಶುಭ ಕೋರಿದರು.

ಭೂಮಿಪೂಜೆ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮಧು, ಉಪಾಧ್ಯಕ್ಷ ಅಣ್ಣಯ್ಯ ಸ್ವಾಮಿ, ಜಿಪಂ ಮಾಜಿ ಸದಸ್ಯ ಡಿ.ನಾಗರಾಜು, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಜಿ.ಶಿವಕುಮಾರ್‌, ಎಪಿಎಂಸಿ ಸದಸ್ಯ ಅರಸಶೆಟ್ಟಿ, ಯಜಮಾನರಾದ ಶಿವಯ್ಯ ಶೆಟ್ಟಿ,ಡಿ.ಮಹೇಶ್ ,ಜೆ.ಮಹೇಶ್, ಚಿಕ್ಕಬೆಳ್ಳ ಶೆಟ್ಟಿ, ಮಲಿಯ ಶೆಟ್ಟಿ, ಕೃಷ್ಣಸ್ವಾಮಿ, ಮುಖಂಡರಾದ ಡಿ.ರವಿ,ನಂಜ ಶೆಟ್ಟಿ, ಗಜ ಮಲ್ಲು,ಅಣ್ಣಯ್ಯ, ಸಾಗಡೆ ಬಸವಣ್ಣ, ಶಿವಪುರ ಶಿವಶೆಟ್ಟಿ, ಪುರಸಭೆ ಸದಸ್ಯರಾದ ಎನ್.ಕುಮಾರ್‌, ಅಲ್ಲಾಹು ಸೇರಿದಂತೆ ತಾಲೂಕಿನ ಉಪ್ಪಾರ ಸಮುದಾಯದ ಗ್ರಾಮಸ್ಥರು,ಯಜಮಾನರು ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

21 ರಿಂದ 24ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ: ಚೇತನಾ ಯಾದವ್
ವೀರಾಂಜನೇಯ ಸ್ವಾಮಿಯ 13ನೇ ವರ್ಷದ ಜಯಂತ್ಯುತ್ಸವ