ಕನ್ನಡಪ್ರಭ ವಾರ್ತೆ ಉಡುಪಿ
ಮಲ್ಪೆ ಭಾಗದ ಮೊಗವೀರ ಸಮುದಾಯ, ಮಣಿಪಾಲ ಪರ್ಕಳ ಭಾಗದ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮುದಾಯ ಮತ್ತು ಇತರ ಸಮುದಾಯದವರು ಸಾವಿರಾರು ಸಂಖ್ಯೆಯಲ್ಲಿ ತೆಂಗಿನಕಾಯಿ, ಅಕ್ಕಿ, ಬಾಳೆಹಣ್ಣು ಇತ್ಯಾದಿ ತರಕಾರಿಗಳನ್ನು ತಂದೊಪ್ಪಿಸಿದರು.
ಸ್ವತಃ ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರು, ಜೋಡುಕಟ್ಟೆಯಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ, ಹೊರಕಾಣಿಕೆ ತಂದ ಭಕ್ತರನ್ನು ಅಭಿನಂದಿಸಿದರು.ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಘುಪತಿ ಭಟ್, ಕೋಶಾಧಿಕಾರಿ ರಂಜನ್ ಕಲ್ಕೂರ, ಶ್ರೀಮಠದ ದಿವಾಣರಾದ ನಾಗರಾಜ ಆಚಾರ್ಯ ಮುಂತಾದವರು ಹೊರೆಕಾಣಿಕೆಯನ್ನು ಬರಮಾಡಿಕೊಂಡರು.
ಸಂಜೆ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ರಾಜರಾಜೇಶ್ವರಿ ಭಜನಾ ಮಂಡಳಿ ಕುಂಜಿಬೆಟ್ಟು ಇವರಿಂದ ಭಜನೆ, ಕೃಷ್ಣರಾಜ ಭಟ್ ಕುತ್ಪಾಡಿ ಹಾಗೂ ವಿದುಷಿ ಅರುಂಧತಿ ವಶಿಷ್ಠ ಅವರಿಂದ ಹರಿಕಥಾಮೃತಮ್, ವಿದುಷಿ ಲಕ್ಷ್ಮೀ ಗುರುರಾಜ್ ಮತ್ತು ಬಳಗದವರಿಂದ ಭರತನಾಟ್ಯ ಪ್ರದರ್ಶನವನ್ನು ಕಿಕ್ಕಿರಿದ ಪ್ರೇಕ್ಷಕರು ಆನಂದಿಸಿದರು.
ಆರೆಸ್ಸೆಸ್ ಕಚೇರಿಗೆ ಶ್ರೀಗಳ ಭೇಟಿ
ಸಂಜೆ ಕಾರ್ಕಳದ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನ ಮತ್ತು ಅನಂತಪದ್ಮನಾಭ ದೇವಾಲಯಗಳಿಗೆ ಪುತ್ತಿಗೆ ಉಭಯ ಶ್ರೀಗಳು ಭೇಟಿ ನೀಡಿ ದೇವರ ದರ್ಶನ ಪಡೆದರು.