ದ್ವೇಷ ಭಾಷಣ, ದ್ವೇಷ ಅಪರಾಧ ನಿಯಂತ್ರಣ ಮಸೂದೆ ಹಿಂಪಡೆಯುವಂತೆ ಪುತ್ತಿಲ ಆಗ್ರಹ

KannadaprabhaNewsNetwork |  
Published : Dec 10, 2025, 02:00 AM IST
ಫೋಟೋ: ೬ಪಿಟಿಆರ್-ಪುತ್ತಿಲ | Kannada Prabha

ಸಾರಾಂಶ

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ಮಸೂದೆ ೨೦೨೫, ಗೋಹತ್ಯಾ ನಿಷೇಧ ಕಾನೂನು ಸಡಿಲಗೊಳಿಸುವ ಮಸೂದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿ ಆಗ್ರಹಿಸಿದ್ದಾರೆ.

ಪುತ್ತೂರು: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ಮಸೂದೆ ೨೦೨೫, ಗೋಹತ್ಯಾ ನಿಷೇಧ ಕಾನೂನು ಸಡಿಲಗೊಳಿಸುವ ಮಸೂದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿ ಆಗ್ರಹಿಸಿದ್ದಾರೆ. ಈ ಮಸೂದೆ ಜಾರಿಗೊಳಿಸಲು ಮುಂದಾಗುವ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಹಿಂದೂ ವಿರೋಧಿ ಅನ್ನುವುದನ್ನು ಸಾಬೀತುಪಡಿಸಿದೆ, ಮುಂದಿನ ಚುನಾವಣೆಯಲ್ಲಿ ಮುಸ್ಲಿಮರ ಮತ ಪಡೆಯುವಂತಹ ಹುನ್ನಾರ ಮತ್ತು ಹಿಂದೂ ಸಂಘಟನೆಗಳನ್ನು ಮತ್ತು ಹಿಂದೂ ನಾಯಕರನ್ನು,ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನದ ಒಂದು ಭಾಗ ಈ ಮಸೂದೆಯಾಗಿವೆ. ಈ ಮಸೂದೆಯನ್ನ ಹಿಂದೂ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು. ರಾಜ್ಯ ಸರ್ಕಾರ ಅಕ್ರಮ ಗೋಸಾಗಾಟ ವಿರುದ್ಧ ಇರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಮತ್ತು ಸಂರಕ್ಷಣಾ ವಿಧೇಯಕ-೨೦೨೦ಕ್ಕೆ ಬದಲಾವಣೆ ತರಲು ಯೋಚಿಸುತ್ತಿದ್ದು ಮತ್ತೆ ಇದರಿಂದ ಗೋ ಹತ್ಯೆ ಮಾಡಲು ಪರೋಕ್ಷವಾಗಿ ಬೆಂಬಲ ನೀಡುವ ತಂತ್ರಗಾರಿಕೆಯೂ ಅಡಗಿದೆ. ಈ ಮೂಲಕ ಇನ್ಮುಂದೆ ರಾಜ್ಯದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸಿ, ಸಿಕ್ಕಿಬಿದ್ದರೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಲಿದೆ, ಪೊಲೀಸರು ವಶಪಡಿಸಿಕೊಂಡ ಅಕ್ರಮ ಗೋಸಾಗಾಟ ನಡೆಸುತ್ತಿದ್ದ ವಾಹನಗಳು ಆರೋಪಿಗಳಿಗೆ ಸುಲಭವಾಗಿ ಮರಳಿ ಸಿಗಲಿದೆ. ಈ ಮೂಲಕ ಮತ್ತೊಮ್ಮೆ ತನ್ನ ಓಲೈಕೆ ರಾಜಕಾರಣದ ಪರಾಕಾಷ್ಠೆಯಿಂದ ಹಿಂದೂ ವಿರೋಧಿ ನೀತಿಯನ್ನು ರಾಜ್ಯ ಸರಕಾರ ಜಗಜ್ಜಾಹೀರು ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಇದರಿಂದ ಸಂಘರ್ಷದ ವಾತಾವರಣ ನಿರ್ಮಾಣ ಆಗುವ ಆತಂಕ ಎದುರಾಗಿದ್ದು ಈ ಮಸೂದೆಯನ್ನು ಹಿಂಪಡೆಯಬೇಕು ಮತ್ತು ಸರ್ಕಾರ ರಾಜಧರ್ಮವನ್ನು ಪಾಲನೆ ಮಾಡಬೇಕೆಂದು ಆಗ್ರಹಿಸಿದರು. ಈ ಮಸೂದೆಗಳು ಸಚಿವ ಸಂಪುಟದಲ್ಲಿ ಅಂಗೀಕಾರವಾದರೂ ಹಿಂದುತ್ವದ ಮತ್ತು ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ರಾಜಕಾರಣಿಗಳು ಮೌನ ವಹಿಸಿರುವುದು ವಿಷಾದನೀಯ ಎಂದು ಅವರು ಖಂಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸೆಂಬರ್ 13ರಂದು ಲಕ್ಷ್ಮೇಶ್ವರಕ್ಕೆ ಸಿಎಂ ಸಿದ್ದರಾಮಯ್ಯ
ಕೊಪ್ಪಳದಲ್ಲಿ ಶುರುವಾಗಲಿದೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಬ್ಯಾಂಕ್