ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತಿಮ ನಮನ

KannadaprabhaNewsNetwork |  
Published : Dec 10, 2025, 02:00 AM IST
ಶಾಸಕ ಭಿಮಸೇನ ಚಿಮ್ಮನಕಟ್ಟಿ ವೀರಯೋಧನಿಗೆ ಅಚಿತಿಮ ನಮನ ಸಲ್ಲಿಸಿದರು. | Kannada Prabha

ಸಾರಾಂಶ

ದೆಹಲಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತರಾದ ಯೋಧ ದುರ್ಗಪ್ಪ ಮಾದರ ಅವರನ್ನು ಸ್ವಗ್ರಾಮ ಬಾದಾಮಿ ತಾಲೂಕಿನ ಅಡಗಲ್‌ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾದಾಮಿ

ದೆಹಲಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತರಾದ ಯೋಧ ದುರ್ಗಪ್ಪ ಮಾದರ ಅವರನ್ನು ಸ್ವಗ್ರಾಮ ಬಾದಾಮಿ ತಾಲೂಕಿನ ಅಡಗಲ್‌ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಯೋಧನ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವರು, ದುರ್ಗಪ್ಪ ಮಾದರ ಅವರು ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ವೀರ ಸೈನಿಕ. ಅಂತಹ ಮಹಾನ್ ಯೋಧನ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಸರ್ಕಾರದ ಪರವಾಗಿ ಎಲ್ಲ ಬಗೆಯ ಸಹಾಯ ಮತ್ತು ಸಾಂತ್ವನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಭೀಮಶೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಟಿ. ಪಾಟೀಲ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಹಣಮಂತ ಮಾವಿನಮರದ, ಗ್ರಾಮದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಹೊನ್ನಯ್ಯ ಹಿರೇಮಠ ಮಾತನಾಡಿದರು.

ಸೇನೆಯ ನಿವೃತ್ತ ಸುಬೇದಾರ್‌ ಮೇಜರ್‌ ಹುಚ್ಚಪ್ಪ ಬೆಳ್ಳಿಗುಂಡಿ, ಮುತ್ತು ಉಳ್ಳಾಗಡ್ಡಿ, ಗ್ರಾಪಂ ಅಧ್ಯಕ್ಷೆ ನಾಗವ್ವ ಮುಷ್ಟಿಗೇರಿ, ಗ್ರಾಮದ ಹಿರಿಯರಾದ ಭರಮಪ್ಪ ಕಾಟಣ್ಣವರ, ಯಲ್ಲಪ್ಪ ಕಲಾದಗಿ, ವೈ.ಆರ್. ಪಾಟೀಲ, ಕೋಣಪ್ಪ ಕಾಟಣ್ಣವರ, ಹುಚ್ಚಪ್ಪ ಹದ್ದಣ್ಣವರ, ಶಂಕ್ರಪ್ಪ ಮಾದರ, ಪರಸಪ್ಪ ನಾಯ್ಕರ, ನೀಲಪ್ಪ ಗೊರವರ ರಂಗಪ್ಪ ಕೊಳ್ಳಣ್ಣವರ ಗ್ರಾಮದ ಮುಖಂಡರು, ಯುವಕರು, ಗ್ರಾಮಸ್ಥರು, ಜಿಲ್ಲಾ ಆಡಳಿತದವರು, ಮಾಜಿ ಸೈನಿಕರು, ಮಾಜಿ ಸೈನಿಕರು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಹಾಗೂ ಅಪಾರ ಸಂಖ್ಯೆಯಲ್ಲಿ ಜನರು ಕಿಕ್ಕಿರಿದು ಭಾಗವಹಿಸಿ ವೀರಯೋಧನಿಗೆ ಕಂಬನಿ ಮಿಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸೆಂಬರ್ 13ರಂದು ಲಕ್ಷ್ಮೇಶ್ವರಕ್ಕೆ ಸಿಎಂ ಸಿದ್ದರಾಮಯ್ಯ
ಕೊಪ್ಪಳದಲ್ಲಿ ಶುರುವಾಗಲಿದೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಬ್ಯಾಂಕ್