ಪುತ್ತೂರು ಕೋ ಆಪರೇಟಿವ್‌ ಟೌನ್ ಬ್ಯಾಂಕ್‌ ಶೇ. 12 ಲಾಭಾಂಶ

KannadaprabhaNewsNetwork |  
Published : Aug 07, 2026, 03:00 AM IST
ಫೋಟೋ: ೪ಪಿಟಿಆರ್-ಟೌನ್ ಬ್ಯಾಂಕ್ ಪುತ್ತೂರು ಟೌನ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

Puttur Cooperative Town Bank Sh. 12 dividend

ಪುತ್ತೂರು: ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ ೭೪,೮೬,೭೦,೬೬೫ ಕೋಟಿ ರು. ಸದಸ್ಯರ ಪಾಲು ಬಂಡವಾಳವಿದ್ದು, ವರ್ಷಾಂತ್ಯದಲ್ಲಿ ೮೮,೩೦,೬೯,೭೩೫ ಕೋಟಿ ರು. ಠೇವಣಿ ಇದೆ.

ಬ್ಯಾಂಕ್ ಠೇವಣಾತಿ ವಿಮೆ ಕಾನೂನಿನ ವ್ಯಾಪ್ತಿಗೆ ಒಳಪಟ್ಟಿದ್ದು, ಇದರ ಪ್ರಕಾರ ಠೇವಣಿದಾರರ ಠೇವಣಿಗಳ ವಿಮಾ ಭದ್ರತೆಗಾಗಿ ಬ್ಯಾಂಕಿನ ವೆಚ್ಚದಿಂದ ೧೦,೩೧,೬೯೨ ರು. ಸಂದಾಯವಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಕಿಶೋರ್ ಕೊಳತ್ತಾಯ ಎನ್. ಹೇಳಿದರು.

ಮೊಳಹಳ್ಳಿ ಶಿವರಾಯರು ಸ್ಥಾಪಿಸಿದ ಶತಮಾನ ಕಂಡ ‘ದಿ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್’ನ ೨೦೨೫-೨೬ನೇ ಸಾಲಿನ ೧೧೭ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿಯೂ ೧೫೦ ಕೋಟಿ ರು. ವಾರ್ಷಿಕ ವ್ಯವಹಾರ ಮತ್ತು ೧,೩೨,೩೩,೬೩೬.೪೦ ಕೋಟಿ ರು. ಲಾಭ ಗಳಿಸುವ ಮೂಲಕ ದಾಖಲೆಯ ಲಾಭ ಗಳಿಸಿದೆ. ವರದಿ ವರ್ಷದ ಅಂತ್ಯಕ್ಕೆ ವಾಯಿದೆ ದಾಟಿದ ಸಾಲಗಳು ೫೫,೨೧,೩೦೧ ರು. ಆಗಿದ್ದು, ಸಾಲ ಬಾಕಿ ಮಾಡಿಕೊಂಡಿರುವ ಸದಸ್ಯರು ಕೂಡಲೇ ಸಾಲವನ್ನು ಮರುಪಾವತಿಸುವಂತೆ ವಿನಂತಿಸಿದರು. ಸದಸ್ಯರಿಗೆ ಈ ಬಾರಿ ಶೇ.೧೨ ಡಿವಿಡೆಂಡ್ ಘೋಷಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ್ ಶೆಟ್ಟಿ ೨೦೨೫-೨೬ನೇ ಸಾಲಿನ ವರದಿ, ಅಂಕಿ ಅಂಶಗಳನ್ನು ಮಂಡಿಸಿದರು.

ಹಿರಿಯ ಸದಸ್ಯರಿಗೆ ಸನ್ಮಾನ: ಬ್ಯಾಂಕ್‌ನ ಹಿರಿಯ ಸದಸ್ಯರಾದ ಪಡೀಲ್ ನಿವಾಸಿ ರಿಕ್ಷಾ ಚಾಲಕ ವಾಲ್ಟರ್ ಡಿಸೋಜ, ಜೋನ್ ಪಾಯಿಸ್, ಬೆಳ್ಳಾರೆ ನಿವಾಸಿ ನಿವೃತ್ತ ಚಾಲಕ ಕಮಲಾಕ್ಷ ಬಲ್ಯಾಯ, ಜಗದೀಶ್ ಶೆಣೈ ಎಂ., ಬೊಳುವಾರು ನಿವಾಸಿ ಗಣಪತಿ ಪ್ರಭು, ಹಿರಿಯ ನ್ಯಾಯವಾದಿ ಗೋಪಾಲಕೃಷ್ಣ ಎಂ, ಉದ್ಯಮಿ ಅಬೂಬಕ್ಕರ್ ಪಿ., ಕುರಿಯ ಅಮ್ಮುಂಜೆ ಸಂಜೀವ ಪೂಜಾರಿ, ವೀರಕಂಬ ನಿವಾಸಿ ಸುರೇಶ್ ಎಂ. ಅವರನ್ನು ಬ್ಯಾಂಕ್ ನ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಟೌನ್‌ಬ್ಯಾಂಕ್ ಸಂಸ್ಥಾಪಕ ಮೊಳಹಳ್ಳಿ ಶಿವರಾಯರ ನೆನಪಿಗಾಗಿ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನಿರ್ದೇಶಕ ಕುಡ್ಗಿ ವಿಶ್ವಾಸ್ ಶೆಣೈ, ರಾಮಚಂದ್ರ ಕಾಮತ್, ಹರೀಶ್ ಬಿಜತ್ರೆ, ಮಲ್ಲೇಶ್ ಕುಮಾರ್, ಶ್ರೀಧರ್ ಪಟ್ಲ, ಸೀಮಾನಾಗರಾಜ್, ರಾಜು ಬ್ಯಾಂಕ್‌ನ ನಿರ್ದೇಶಕ ಸುಜೀಂದ್ರ ಪ್ರಭು, ವೃತ್ತಿಪರ ನಿರ್ದೇಶಕ ಸಿ.ಎ ಅರವಿಂದಕೃಷ್ಣ ಬಿ., ಕಿರಣ್ ಕುಮಾರ್ ರೈ ಇದ್ದರು. ಬ್ಯಾಂಕ್‌ನ ಉಪಾಧ್ಯಕ್ಷ ಶ್ರೀಧರ್ ಗೌಡ ಕಣಜಾಲು ಸ್ವಾಗತಿಸಿದರು. ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನ ಕಟ್ಟಿಕೊಳ್ಳಿ; ವ್ಯಸನ ಅಲ್ಲ: ರಾಜೇಂದ್ರ ಬಿ.
ಬರಹ ಪಠ್ಯಕ್ಕೆ ಸೀಮಿತ ಆಗದಿರಲಿ: ಡಾ.ರಾಜೇಶ್‌