ಪುತ್ತೂರಿನಲ್ಲಿ ವಾಣಿಜ್ಯ ಭಯೋತ್ಪಾದನೆ: ಜಗದೀಶ್ ಕಾರಂತ್

KannadaprabhaNewsNetwork |  
Published : Aug 28, 2026, 03:00 AM IST
ಫೋಟೋ: ೨೬ಪಿಟಿಆರ್-ಜಗದೀಶ್ ಕಾರಂತ್ ೧ಗಾಯಾಳು ಅಂಜನಾ ಪೈ ಅವರನ್ನು ಜಗದೀಶ್ ಕಾರಂತ್ ಭೇಟಿಯಾದರು. ಫೋಟೋ: ೨೬ಪಿಟಿಆರ್-ಜಗದೀಶ್ ಕಾರಂತ್ ೨ಮಾದ್ಯಮಗಳೊಂದಿಗೆ ಜಗದೀಶ್ ಕಾರಂತ್ ಮಾತನಾಡಿದರು. | Kannada Prabha

ಸಾರಾಂಶ

ಪುತ್ತೂರಿನ ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಅನಿರೀಕ್ಷಿತವಲ್ಲ. ಇದು ಮತಾಂಧತೆಯ ಮನಸ್ಥಿತಿಯ ಪ್ರದರ್ಶನವಾಗಿದ್ದು, ಪುತ್ತೂರಿನಲ್ಲಿ ಆರಂಭವಾಗಿರುವ ವಾಣಿಜ್ಯ ಭಯೋತ್ಪಾದನೆಯ ಮೊದಲ ಘಟನೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಜಗದೀಶ್ ಕಾರಂತ್ ಆರೋಪಿಸಿದ್ದಾರೆ. : ಪುತ್ತೂರಿನ ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಅನಿರೀಕ್ಷಿತವಲ್ಲ. ಇದು ಮತಾಂಧತೆಯ ಮನಸ್ಥಿತಿಯ ಪ್ರದರ್ಶನವಾಗಿದ್ದು, ಪುತ್ತೂರಿನಲ್ಲಿ ಆರಂಭವಾಗಿರುವ ವಾಣಿಜ್ಯ ಭಯೋತ್ಪಾದನೆಯ ಮೊದಲ ಘಟನೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಜಗದೀಶ್ ಕಾರಂತ್ ಆರೋಪಿಸಿದ್ದಾರೆ.

ಪುತ್ತೂರು: ಪುತ್ತೂರಿನ ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಅನಿರೀಕ್ಷಿತವಲ್ಲ. ಇದು ಮತಾಂಧತೆಯ ಮನಸ್ಥಿತಿಯ ಪ್ರದರ್ಶನವಾಗಿದ್ದು, ಪುತ್ತೂರಿನಲ್ಲಿ ಆರಂಭವಾಗಿರುವ ವಾಣಿಜ್ಯ ಭಯೋತ್ಪಾದನೆಯ ಮೊದಲ ಘಟನೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಜಗದೀಶ್ ಕಾರಂತ್ ಆರೋಪಿಸಿದ್ದಾರೆ. ಅವರು ನಗರದ ದರ್ಬೆಯಲ್ಲಿ ಆ. 21ರಂದು ನಡೆದ ಘಟನೆಯಲ್ಲಿ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಜನಾ ಪೈ ಅವರನ್ನು ಬುಧವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಅವರ ಪತಿ ಸದಾಶಿವ ಪೈ ಅವರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಹಿಂದೂಗಳು ಪುತ್ತೂರಿನ ವ್ಯಾಪಾರ ಕ್ಷೇತ್ರದಿಂದ ಹಿಂದೆ ಸರಿಯಬೇಕು ಎಂಬ ಮನೋಭಾವದ ಹಿನ್ನೆಲೆಯಲ್ಲಿ ನಡೆದಿರುವ ವಾಣಿಜ್ಯ ಭಯೋತ್ಪಾದನೆಯ ಮೊದಲ ಘಟನೆ ಇದಾಗಿದೆ. ಜರಾಕ್ಸ್ ಅಂಗಡಿಯಲ್ಲಿ ಸಣ್ಣ ಚೀಟಿ ಸುಟ್ಟುಹೋದ ವಿಚಾರಕ್ಕೆ ಕ್ಷಣಾರ್ಧದಲ್ಲಿ ನೂರಾರು ಮಂದಿ ಆಗಮಿಸಿ ದಾಳಿ ನಡೆಸಿರುವುದರ ಹಿಂದಿನ ದುರುದ್ದೇಶ ಮೊದಲು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ಎಲ್ಲಾ ಅಂಗಡಿಗಳಲ್ಲಿಯೂ ಕೆಲವೊಮ್ಮೆ ತಪ್ಪುಗಳು ಸಂಭವಿಸುತ್ತವೆ. ಅದಕ್ಕೆ ಪ್ರತಿಯಾಗಿ ಗುಂಡಾಗಿರಿ ಅಥವಾ ಹಲ್ಲೆ ನಡೆಸುವುದೇ ಉತ್ತರವಾದರೆ ಮುಂದಿನ ದಿನಗಳಲ್ಲಿ ರಸ್ತೆ-ರಸ್ತೆಗಳಲ್ಲಿ ಕಾದಾಟಗಳು ನಡೆಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಸಾಮಾಜಿಕ ಶಾಂತಿ ಕಾಪಾಡಲು ಸಾಮಾಜಿಕ ಪ್ರಜ್ಞೆ ಇರುವವರು ಈ ವಿಚಾರವನ್ನು ಗಂಭೀರವಾಗಿ ಗಮನಿಸಬೇಕು ಎಂದು ಹೇಳಿದರು.

ಆ.31ಕ್ಕೆ ಪುತ್ತೂರು ಚಲೋ ಕಾರ್ಯಕ್ರಮ

ಹಿಂದೂ ಸಮಾಜಕ್ಕೆ ಪ್ರಾಮಾಣಿಕವಾಗಿ ನ್ಯಾಯ ಮತ್ತು ರಕ್ಷಣೆ ದೊರೆಯದಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯವನ್ನು ಹುಡುಕುವ ಹಾಗೂ ಅದನ್ನು ಪಡೆಯುವ ಹಕ್ಕು ಮತ್ತು ಶಕ್ತಿ ಹಿಂದೂ ಸಮಾಜಕ್ಕಿದೆ. ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನ್ಯಾಯದ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ.31ರಂದು ‘ಪುತ್ತೂರು ಚಲೋ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಹತ್ತಿಕ್ಕುವ ರೀತಿಯಲ್ಲಿ ರಾಜಕೀಯ ಮುಂದುವರಿದರೆ ಹಿಂದೂ ಸಮಾಜದ ತಾಳ್ಮೆ ಯಾವ ಹಂತದಲ್ಲಾದರೂ ತಪ್ಪಬಹುದು ಎಂದು ಎಚ್ಚರಿಸಿದರು.

ರಾಜಕೀಯ ಬಕೆಟ್‌ಗಿರಿಯನ್ನು ಜಾಗೃತ ಸಮಾಜ ಸಹಿಸುವುದಿಲ್ಲ. ಮೊದಲು ಭಯೋತ್ಪಾದನಾ ಮನೋಭಾವವನ್ನು ನಿಲ್ಲಿಸಬೇಕು. ನಿಮ್ಮ ದಕ್ಷತೆಗೆ ಹಾಗೂ `ಸಿಂಗಂ‘ಗಿರಿಗೆ ಇದೊಂದು ಸವಾಲಾಗಿದೆ ಎಂದು ಜಗದೀಶ್ ಕಾರಂತ್ ಹೇಳಿದರು.

ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ರವಿರಾಜ್ ಶೆಟ್ಟಿ ಕಡಬ, ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು, ಸುಪ್ರಿತ್, ಪ್ರಶಾಂತ್ ಕೆಂಪುಗುಡ್ಡೆ, ಅಜಿತ್ ರೈ ಹೊಸಮನೆ ಮತ್ತಿತರರು ಜೊತೆಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ: ಐಶ್ವರ್ಯ, ಸ್ನೇಹಾ ಪ್ರಥಮ
ಕೇಸರೆಕರ ದಂಪತಿ ಹತ್ಯೆ ಪ್ರಕರಣ ಸಿಬಿಐಗೆ ಹಸ್ತಾಂತರಿಸಲು ಆಗ್ರಹ