ಪುತ್ತೂರು: ಲಿಂಗ ತಾರತಮ್ಯತೆಯ ಪಿಡುಗು ಸಮಾಜದಿಂದ ಇನ್ನೂ ಪೂರ್ಣ ಪ್ರಮಾಣದಲ್ಲಿ ತೊಲಗಿಲ್ಲ. ಇದನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕು ಎಂದು ಪ್ರಧಾನ ಹಿರಿಯ ವ್ಯವಾಹಾರಿಕ ನ್ಯಾಯಾಧೀಶೆ, ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷೆ ಪ್ರಕೃತಿ ಕಲ್ಯಾಣಪುರ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಕೀಲರ ಸಂಘದ ಅಧ್ಯಕ್ಷ ಜಿ. ಜಗನ್ನಾಥ ರೈ ಅವರು ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಮರ್ಪಣ ಭಾವದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ವಿಶ್ವ ಮಹಿಳಾ ದಿನಾಚರಣೆ ಮೂಲಕ ಅವರನ್ನು ನೆನಪಿಸುವುದು ಉತ್ತಮ ಕಾರ್ಯ ಎಂದರು. ವೇದಿಕೆಯಲ್ಲಿ ಹೆಚ್ಚುವರಿ ಹಿರಿಯ ವ್ಯವಾಹಾರಿಕ ನ್ಯಾಯಧೀಶ ದೇವರಾಜ್ ವೈ ಎಚ್., ಪ್ರಧಾನ ವ್ಯವಾಹಾರಿಕ ನ್ಯಾಯಧೀಶರ ಶಿವಣ್ಣ ಎಚ್. ಆರ್., ಸರಕಾರಿ ಅಭಿಯೋಜಕಿ ಜಯಂತಿ, ಅಧಿವ್ಯಕ್ತ ಪರಿಷತ್ ಅಧ್ಯಕ್ಷ ಜಯಪ್ರಕಾಶ್ ಎನ್, ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ಎಂ., ಪ್ರಧಾನ ಕಾರ್ಯದರ್ಶಿ ಚಿನ್ಮಯ ರೈ, ಜತೆ ಕಾರ್ಯದರ್ಶಿ ಮಮತಾ ಸುವರ್ಣ, ಕ್ರೀಡಾ ಕಾರ್ಯದರ್ಶಿ ರಾಕೇಶ್ ಜೆ. ಮಸ್ಕರೇನ್ಹಸ್, ಶಿರೆಸ್ತಾದಾರೆ ಅನಿತಾ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನಾಟಿ ವೈದ್ಯರಾದ ಮೋನಕ್ಕ ಉದರಡ್ಕ, ಕಮಲ ಶಾಂತಪ್ಪ ಪೂಜಾರಿ, ಯಮುನಾ ಪುರುಷರಕಟ್ಟೆ, ಕ್ರೀಡಾಪಟು ವಸಂತಿ ಮೆದು, ಪೌರ ಕಾರ್ಮಿಕೆ ಯಶೋದಾ ಅವರನ್ನು ಸಮ್ಮಾನಿಸಲಾಯಿತು. ವಕೀಲರ ಸಂಘದ ಕೋಶಾಧಿಕಾರಿ ಮಹೇಶ್ ಕೆ. ಸವಣೂರು ಸಮ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷೆ ಪ್ರಕೃತಿ ಕಲ್ಯಾಣಪುರ, ಸರಕಾರಿ ಅಭಿಯೋಜಕಿ ಜಯಂತಿ, ವಕೀಲರ ಸಂಘದ ಜತೆ ಕಾರ್ಯದರ್ಶಿ ಮಮತಾ ಸುವರ್ಣ, ಐದನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಶಿರೆಸ್ತಾದಾರೆ ಅನಿತಾ, ವಿದ್ಯಾ ಅವರನ್ನು ಸನ್ಮಾನಿಸಲಾಯಿತು.
ಪ್ರಧಾನ ವ್ಯವಹಾರಿಕ ನ್ಯಾಯಧೀಶ ಶಿವಣ್ಣ ಎಚ್. ಆರ್, ಉಮೇಶ್ ಮತ್ತು ತಂಡ ಮಾತೃಗೀತೆ ಹಾಡಿದರು. ವಕೀಲರ ಸಂಘದ ಮಾಜಿ ಜತೆ ಕಾರ್ಯದರ್ಶಿ ಸೀಮಾ ನಾಗರಾಜ್ ಸ್ವಾಗತಿಸಿದರು. ವಕೀಲರ ಸಂಘದ ಸದಸ್ಯೆ ಹೀರಾ ಉದಯ್ ವಂದಿಸಿದರು. ಅಧಿವ್ಯಕ್ತ ಪರಿಷತ್ ಪುತ್ತೂರು ಇದರ ಕಾರ್ಯದರ್ಶಿ ದೀಪಕ್ ಬೊಳುವಾರು ಕಾರ್ಯಕ್ರಮ ನಿರೂಪಿಸಿದರು.