ಉಡುಪಿ ಕೃಷ್ಣಮಠಕ್ಕೆ ತಿರುವಂತಪುರ ಉಪ ಮೇಯರ್ ಭೇಟಿ

KannadaprabhaNewsNetwork |  
Published : Mar 15, 2026, 02:45 AM IST
15ಆಶಾನಾಥ್ | Kannada Prabha

ಸಾರಾಂಶ

ತಿರುವನಂತಪುರ ಮಹಾನಗರಪಾಲಿಕೆ ಉಪ ಮೇಯರ್ ಆಶಾ ನಾಥ್ ಜಿ. ಅವರು ಕುಟುಂಬ ಸಮೇತ ಶನಿವಾರ ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ, ಕೃಷ್ಣ ದರ್ಶನ ಪಡೆದರು.

ಉಡುಪಿ: ತಿರುವನಂತಪುರ ಮಹಾನಗರಪಾಲಿಕೆ ಉಪ ಮೇಯರ್ ಆಶಾ ನಾಥ್ ಜಿ. ಅವರು ಕುಟುಂಬ ಸಮೇತ ಶನಿವಾರ ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ, ಕೃಷ್ಣ ದರ್ಶನ ಪಡೆದರು.

ಆಶಾ ನಾಥ್‌ ಇತ್ತೀಚೆಗೆ ತಿರುವನಂತಪುರ ಮಹಾನಗರಪಾಲಿಕೆಗೆ ಬಿಜೆಪಿಯಿಂದ ಆಯ್ಕೆಯಾಗಿ ದಾಖಲೆ ಸ್ಥಾಪಿಸಿದ್ದರು ಮತ್ತು ಕೇರಳದ ಐತಿಹಾಸದಲ್ಲಿ ಪ್ರಥಮ ಬಿಜೆಪಿ ಉಪ ಮೇಯರ್ ಆಗಿ ದೇಶದ ಗಮನ ಸೆಳೆದಿದ್ದರು. ಅವರನ್ನು ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಕೃಷ್ಣಪ್ರಸಾದ ನೀಡಿ ಗೌರವಿಸಿದರು. ಮಠದ ದಿವಾನ ಡಾ. ಉದಯ ಸರಳತ್ತಾಯ, ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣ ಭಟ್, ಮಠದ ಆಸ್ಥಾನ ಗಾಯಕ ನಾರಾಯಣ ಸರಳಾಯ ಇದ್ದರು.

.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ