ಗಾಂಧಾರಿ ವಿದ್ಯೆ: ಪುತ್ತೂರಿನ ಐವರು ವಿದ್ಯಾರ್ಥಿಗಳ ದಾಖಲೆಗೆ

KannadaprabhaNewsNetwork |  
Published : Oct 08, 2026, 02:45 AM IST
ಫೋಟೋ: ೨೯ಪಿಟಿಆರ್-ವರ್ಣಕುಟೀರ ೧ ಮತ್ತು ೨೯ಪಿಟಿಆರ್-ವರ್ಣಕುಟೀರ ೨ಸಾಧಕ ವಿದ್ಯಾರ್ಥಿಗಳಿಗೆ ರೆಕಾರ್ಡ್ ಪತ್ರ ಹಸ್ತಾಂತರ ಮಾಡಲಾಯಿತು. | Kannada Prabha

ಸಾರಾಂಶ

ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಗಾಂಧಾರಿ (ಸ್ಯಾಂಡ್ ಆರ್ಟ್ ಕಲಾ ವಿನ್ಯಾಸ) ವಿದ್ಯೆ ಪ್ರದರ್ಶನ ಮಾಡುವ ಮೂಲಕ ಪುತ್ತೂರಿನ ಕಲ್ಲಾರೆಯ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಐವರು ವಿದ್ಯಾರ್ಥಿಗಳು ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ ಗೆ ಹಾಗೂ 8 ಮಂದಿ ಹಿನ್ನೆಲೆ ಗಾಯಕರು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದ್ದಾರೆ.

ಪುತ್ತೂರು: ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಗಾಂಧಾರಿ (ಸ್ಯಾಂಡ್ ಆರ್ಟ್ ಕಲಾ ವಿನ್ಯಾಸ) ವಿದ್ಯೆ ಪ್ರದರ್ಶನ ಮಾಡುವ ಮೂಲಕ ಪುತ್ತೂರಿನ ಕಲ್ಲಾರೆಯ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಐವರು ವಿದ್ಯಾರ್ಥಿಗಳು ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ ಗೆ ಹಾಗೂ 8 ಮಂದಿ ಹಿನ್ನೆಲೆ ಗಾಯಕರು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದ್ದಾರೆ.

ಈ ಹಿಂದೆ ವರ್ಣಕುಟೀರದ ವಿದ್ಯಾರ್ಥಿನಿ ಶಮಿಕ ಎಂ.ಕೆ. ಎಂಬ ವಿದ್ಯಾರ್ಥಿನಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಿನ್ನೆಲೆ ಗಾಯನದೊಂದಿಗೆ ನಿರಂತರ 24 ಗಂಟೆಗಳಲ್ಲಿ ಸುಮಾರು 300 ಸ್ಯಾಂಡ್ ಆರ್ಟ್ ಕಲಾಕೃತಿಗಳನ್ನು ರಚಿಸಿ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದರು. ಇದೀಗ ಮುಂದುವರಿದ ಭಾಗವಾಗಿ 6ನೇ ತರಗತಿಯ ಮೂವರು ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿರಂತರ 30 ಗಂಟೆಗಳ ಮತ್ತು 3ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಕಣ್ಣು ಬಿಟ್ಟುಕೊಂಡು ನಿರಂತರ 18 ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ರಚಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದ್ದಾರೆ. ಇದರ ಜೊತೆಗೆ ಈ ಸಂಸ್ಥೆಯ 8 ಮಂದಿ ಹಿನ್ನೆಲೆ ಗಾಯಕರು ಕೂಡಾ ಗೋಲ್ಡನ್ ಬುಕ್ ಆಫ್ ರೇಕಾರ್ಡ್ ಗೆ ಸೇರ್ಪಡೆಗೊಂಡಿದ್ದಾರೆ. ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಏಷ್ಯಾ ವಿಭಾಗದ ಮುಖ್ಯಸ್ಥ ಡಾ. ಮನೀಷ್ ವೈಷ್ಣೋಯಿ ಅವರ ಸಮ್ಮುಖದಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳಾದ ಬುವಿಕ ಆರ್.ಕೆ, ಅಂಶಿ ಸಂತೋಷ್ ಕುಮಾರ್, ವಿಷ್ಮಾ ಅಜ್ಜಿಕಲ್ಲು ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 30 ಗಂಟೆಗಳ ಕಾಲ ಮತ್ತು 3ನೇ ತರಗತಿಯ ವಿದ್ಯಾರ್ಥಿಗಳಾದ ಹಿಮಾಂಶುಕೃಷ್ಣ ಮತ್ತು ಸೋಹನ್ ಕೆ.ಎಸ್ ಕಣ್ಣಿಗೆ ಬಟ್ಟೆ ಕಟ್ಟದೆ 18 ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಗೊಂಡರು. ಬಳಿಕ ಅವರಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾಡ್ಸ್ ನ ಪ್ರಮಾಣ ಪತ್ರ ಹಸ್ತಾಂತರಿಸಲಾಯಿತು.

ಇದೇ ಸಂದರ್ಭ ವಿದ್ಯಾರ್ಥಿಗಳ ಸಾಧನೆಗೆ ಹಿನ್ನೆಲೆ ಗಾಯಕರಾಗಿ ಸಾತ್ ನೀಡಿದ ವರ್ಣಕುಟೀರಣ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ, ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರು, ಅನುಷಾ ಅಮ್ಮಣ್ಣಾಯ, ರವಿ ಪುತ್ತೂರು, ಶಿವ ಕುಮಾರ್ ಬೆಟ್ಟಂಪಾಡಿ, ಪ್ರಸನ್ನ ಪಿ, ಗ್ರೀಷ್ಮಾ ಏಕತಡ್ಕ, ಗೌತಮ್ ಕೃಷ್ಣ ನೆಕ್ಕರೆ ಅವರಿಗೂ ಕೂಡಾ ಉತ್ತಮ ಸಮನ್ವಯಕಾರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಘೋಷಣೆ ಮಾಡಲಾಯಿತು.

ಹಿರಿಯರಾದ ಬಿ.ವಿ.ನಾರಾಯಣ ಭಟ್ ದಾಖಲೆ ಕಾರ್ಯಕ್ರಮ ಉದ್ಘಾಟಿಸಿದರು. ಆ ಬಳಿಕ ಪ್ರದರ್ಶನ ಆರಂಭಗೊಂಡಿತು. ಅತಿಥಿಗಳಾಗಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ವಿಜಯ ಸಾಮ್ರಾಟ್ ಸಂಸ್ಥಾಪಕ ಸಹಜ್ ರೈ ಬಳಜ್ಜ, ಸಹಕಾರಿ ಮಹಾಮಂಡಲದ ರಾಜ್ಯ ಸಮಿತಿ ಸದಸ್ಯರು ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಸಿವಿಲ್ ಇಂಜಿನಿಯರ್ ಹರಿಪ್ರಸಾದ್ ರೈ ಮತ್ತಿತರು ಶುಭ ಹಾರೈಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12ರಂದು ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ
ತಾಪಂ: ಬೆಳಗಾವಿಯಲ್ಲಿ ಮಹಿಳೆಯರಿಗೆ ಸಿಂಹಪಾಲು