ಕನ್ನಡಪ್ರಭ ವಾರ್ತೆ ಪುತ್ತೂರು ತುಳುಕೂಟೊ ಪುತ್ತೂರು ವತಿಯಿಂದ ಪುತ್ತೂರು ತಾಲೂಕು ತುಳುವೆರೆ ಮೇಳೊ ೨೦೨೪ ಹಾಗೂ ತೆನೆಸು ಮೇಳೊ ಕಾರ್ಯಕ್ರಮ ಮಾ. ೨ ಮತ್ತು ೩ರಂದು ಪುತ್ತೂರಿನ ಮಂಜಲಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿದೆ ಎಂದು ತುಳುವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ.೨ ರಂದು ಅಪರಾಹ್ನ ‘ತೆನೆಸ್ ಮೇಳೊ’ (ಆಹಾರ ಮೇಳ)ದಲ್ಲಿ ವಿವಿಧ ವ್ಯಾಪಾರ ಮಳಿಗೆಯನ್ನು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ, ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ ಮತ್ತು ಉದ್ಯಮಿ ಅಭಿಜಿತ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಿತ್ತಳಿಕೆ ಸೂರ್ಯನಾಥ ಆಳ್ವ, ಜನ್ಮ ಫೌಂಡೇಶನ್‌ನ ಡಾ. ಹರ್ಷಕುಮಾರ್ ರೈ ಮಾಡಾವು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತುಳುವೆರೆ ಮೇಳೋ ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ತೆನೆಸು ಮೇಳದಲ್ಲಿ ತುಳುವೆರೆ ಕಾಯಿಕಜಿಪು ತೆನೆಸುಲು (ಸಸ್ಯಾಹಾರಿ) ಹಾಗೂ ತುಳುವೆರೆ ಮೀನ್ ಮಾಸ ತೆನೆಸುಲು (ಮಾಂಸಾಹಾರಿ) ವಿಶೇಷವಾಗಿರಲಿದೆ. ಅಪರಾಹ್ನ ತುಳು ಪದ ನಳಿಕೆ, ಗಾನ ನೃತ್ಯ ವೈಭವ ನಡೆಯಲಿದೆ. ರಾತ್ರಿ ಗಾಯಕ ನಾದ ಮಣಿನಾಲ್ಕೂರು ಅವರಿಂದ ನಡೆಯುವ ತುಡರ ಪದ ಕಾರ್ಯಕ್ರಮವನ್ನು ನಿವೃತ್ತ ಮುಖ್ಯಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಉದ್ಘಾಟಿಸಲಿದ್ದಾರೆ.
ಮಾ.೩ರಂದು ಬೆಳಗ್ಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ಶ್ರೀ ಗುರುದೇವಾನಂದ ಸ್ವಾಮೀಜಿ ತುಳುವೆರೆ ಮೇಳೋ ೨೦೨೪ನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಳಸೆಗೆ ಭತ್ತವನ್ನು ಸುರಿದು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ತುಳುವೆರೆ ಮೇಳೊ ಸಮಿತಿ ಅಧ್ಯಕ್ಷ ರೆ. ವಿಜಯ ಹಾರ್ವಿನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು , ಯೂಸುಫ್ ಮಠ ಉಪ್ಪಿನಂಗಡಿ, ಕೊಳ್ತಿಗೆ ನಾರಾಯಣ ಗೌಡ, ಯಮುನಾ ಪೂಜಾರಿ ನರಿಮೊಗರು ಮತ್ತು ಗುಬ್ಬಿ ಕೆಮ್ಮಾರ ಪೆರ್ಲಂಪಾಡಿ ಅವರಿಗೆ `ಬಿರ್ದ್ದ ತುಳುವೆರ್'''''''''''''''' ಪುತ್ತೂರು ತಾಲೂಕು ಪ್ರಶಸ್ತಿ ೨೦೨೪ ಪ್ರಧಾನ ಮಾಡಲಾಗುವುದು. ಬಳಿಕ ಅಮೃತ ಸೋಮೇಶ್ವರರ ನೆನೆಪು `ತುಳುವಾಮೃತ'''''''''''''''' ಕಾರ್ಯಕ್ರಮ ನಡೆಯಲಿದ್ದು, ಸಾಹಿತಿ ವಿ. ಬಿ. ಅರ್ತಿಕಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಡಾ. ನರೇಂದ್ರ ರೈ ದೇರ್ಲ, ರಂಗಕರ್ಮಿ ಐಕೆ ಬೊಳುವಾರು, ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಪ್ರಬಂಧ ಮಂಡನೆ ಮಾಡಲಿದ್ದಾರೆ.ಬಳಿಕ ಭಾಸ್ಕರ ಕೋಡಿಂಬಾಳ ಅಧ್ಯಕ್ಷತೆಯಲ್ಲಿ ಕವಿ ಕೂಟ ನಡೆಯಲಿದೆ. ಈ ಕೂಟದಲ್ಲಿ ೩೦ ಕವಿಗಳು ಕವಿತಾ ವಾಚನ ಮಾಡಲಿದ್ದಾರೆ. ಸಂಜೆ ತುಳು ಮನರಂಜನೆ ಕಾರ್ಯಕ್ರಮ ಹಾಗೂ ರಾತ್ರಿ ನಂಬಿಕೆ ದಾಯೆಗ್ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತುಳು ಕೂಟದ ಕಾರ್ಯಾಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್, ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ, ಜೊತೆ ಕಾರ್ಯದರ್ಶಿ ಪಿ. ಉಲ್ಲಾಸ್ ಪೈ ಇದ್ದರು.