ಕನ್ನಡಪ್ರಭ ವಾರ್ತೆ ಚಿಂಚೋಳಿ
ಕೇಂದ್ರ ಸಚಿವರು ಹಾಗೂ ಸಂಸದರಾದ ಭಗವಂತ ಖೂಬಾರವರ ವಿಶೇಷ ಕಾಳಜಿಯಿಂದ ಚಿಂಚೋಳಿ ಪಟ್ಟಣದಲ್ಲಿ ಉಚಿತ ಆರೋಗ್ಯ ಶಿಬಿರವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಒಟ್ಟು ೪೦೦೦ಕ್ಕೂ ಹೆಚ್ಚು ಜನರುಇದರ ಲಾಭ ಪಡೆದುಕೊಂಡಿದ್ದಾರೆ.ಕೇಂದ್ರ ಸಚಿವರ ಕಡೆಯಿಂದ ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಪ್ರತಿ ಹಳ್ಳಿಗಳಿಂದ ರೋಗಿಗಳನ್ನು ವಾಹನದ ಮೂಲಕ ಕರೆದುಕೊಂಡು ಬಂದು ಪ್ರತಿಯೊಬ್ಬರಿಗೂ ನೋಂದಣಿ ಮಾಡಿಸಿ, ರಕ್ತ, ಸಕ್ಕರೆ ಪರೀಕ್ಷೆ ಮಾಡಿಸಿ, ನಂತರ ಅವರಿಗಿರುವ ಕಾಯಿಲೆಗೆ ಅನುಗುಣವಾಗಿ ಸಂಬಂಧಪಟ್ಟ ವೈದ್ಯರಿಂದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು.
ಒಟ್ಟು ೪೩೧೬ ಜನರು ಉಚಿತ ಆರೋಗ್ಯ ಶಿಬಿರದಲ್ಲಿ ನೋಂದಣಿ ಮಾಡಿಸಿಕೊಂಡಿದ್ದು, ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಸಮಸ್ಯೆಯಿಂದ ಬಳುತ್ತಿರುವ ಒಟ್ಟು೧೭೮೨ ಜನರಿಗೆ ಕಣ್ಣು ತಪಾಸಣೆ ಮಾಡಿ ಅವರಿಗೆ ಕಣ್ಣಿನ ಡ್ರಾಪ್, ಗುಳಿಗೆ ಹಾಗೂ ೧೫೪೦ ಕನ್ನಡಕ ವಿತರಿಸಲಾಯಿತು.ಕಿವಿಗಳಿಗೆ ಸಂಬಂಧಿಸಿದಂತೆ ೧೦೫೩ ಜನರು ರೋಗಿಗಳಿಗೆ ತಪಾಸಣೆ ಮಾಡಿ ೨೫೮ ಜನರಿಗೆ ಶ್ರವಣ ಯಂತ್ರಗಳು ನೀಡಲಾಗಿದೆ. ಇದರ ಜೊತೆಗೆ ಹೃದಯ ಸಂಬಂಧಿ ಕಾಯಿಲೆ ಇರುವ ೩೬೪ ಜನರಿಗೆ ಇ.ಸಿ.ಜಿ.ಪರೀಕ್ಷೆ ಮಾಡಿ, ಮಾತ್ರೆಗಳು ನೀಡಲಾಗಿದೆ. ೧೫ ಜನರಿಗೆ ಹೆಚ್ಚಿನಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಉಳಿದಂತೆ ಇ.ಎನ್.ಟಿ. ಮೂಳೆ, ಚರ್ಮ, ಸ್ತ್ರೀರೋಗ, ಮಕ್ಕಳ ಕಾಯಿಲೆ ಮುಂತಾದ ರೋಗಿಗಳಿಗೆ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಲಾಗಿರುತ್ತದೆ.
ಈ ಆರೋಗ್ಯ ಶಿಬಿರದಲ್ಲಿ ೬೦% ಜನ ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು. ಪ್ರತಿ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ರೋಗಿಗಳಿಗೆ ಕರೆದುಕೊಂಡು ಬರಲಾಗಿತ್ತು.ಎರಡು ದಿನಗಳ ಉಚಿತ ಆರೋಗ್ಯ ಶಿಬಿರಕ್ಕೆ ಸಹಕರಿಸಿದ ಚಿಂಚೋಳಿ ಕ್ಷೇತ್ರದ ಶಾಸಕರಾದ ಡಾ. ಅವಿನಾಶ ಜಾಧವ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳು, ವಿವಿಧ ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೋಲಿಸ್ ಇಲಾಖೆ, ಪುರಸಭೆ ಸಿಬ್ಬಂದಿ, ಬಿಜೆಪಿ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಡಿಗ್ರಿಕಾಲೇಜಿನ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಭಾಗವಹಿಸಿ ಸಹಕರಿಸಿದಕ್ಕಾಗಿ ಕೇಂದ್ರ ಸಚಿವ ಭಗವಂತ ಖೂಬಾ ಬಹಳ ಹರ್ಷವ್ಯಕ್ತಪಡಿಸಿದ್ದಾರೆ.
೨೫ಜಿಯು-ಸಿಎಚ ಐ೨